ಮೊದಲ ಏಕದಿನ ಪಂದ್ಯದಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾಗೆ ಗೆಲುವು

ಈ ಸುದ್ದಿಯನ್ನು ಶೇರ್ ಮಾಡಿ

Aus--01

ಸಿಡ್ನಿ, ಜ.12-ಇಂದಿಲ್ಲಿ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಶುಭಾರಂಭ ಮಾಡಿದ್ದು, 34 ರನ್‍ಗಳ ಅಂತರದಿಂದ ಭಾರತವನ್ನು ಮಣಿಸಿದೆ. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಆರಂಭಿಕ ಆಘಾತ ಅನುಭವಿಸಿದರೂ ಅಂತಿಮ ಘಟ್ಟದಲ್ಲಿ ಭರ್ಜರಿ ಆಟ ಪ್ರದರ್ಶಿಸಿ ಸವಾಲಿನ 288 ರನ್‍ಗಳನ್ನು ಕಲೆ ಹಾಕಿತು.

ಇದನ್ನು ಬೆನ್ನಟ್ಟಿದ ಭಾರತ ಆರಂಭದಲ್ಲೇ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಪ್ರಮುಖ 3 ವಿಕೆಟ್‍ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ನಂತರ ಧೋನಿ ಮತ್ತು ರೋಹಿತ್ ಶರ್ಮಾ ಬಿರುಸಿನಿಂದ ಆಟದಿಂದ ಸುಧಾರಿಸಿದರೂ ಆಸೀಸ್‍ನ ಬೌಲರ್‍ಗಳ ಪ್ರಬಲ ಕರಾರವಕ್ಕು ಬೌಲಿಂಗ್ ದಾಳಿಯಲ್ಲಿ ನಿರಂತರ ವಿಕೆಟ್‍ಗಳನ್ನು ಕಳೆದುಕೊಂಡಿತು.

ಆದರೂ ರೋಹಿತ್‍ಶರ್ಮಾ ಅವರ ಏಕಾಂಗಿ ಹೋರಾಟ ಎಲ್ಲರನ್ನು ಚಕಿತಗೊಳಿಸಿತು. ಭಾರತ ಗೆಲುವಿನ ದಡ ಸೇರುವ ಆಸೆಯನ್ನು ಚಿಗುರಿಸಿತು. ಆದರೆ ಬಹುಬೇಗನೆ ಅದು ಕಮರಿಹೋಯಿತು.

ಅಂತಿಮವಾಗಿ ಭಾರತ ನಿಗದಿತ 50 ಓವರ್‍ಗಳಲ್ಲಿ 9 ವಿಕೆಟ್ ಕಳೆದುಕೊಂಡು 254 ರನ್ ಮಾತ್ರ ಕಲೆ ಹಾಕುವಲ್ಲಿ ಶಕ್ತವಾಯಿತು. ಆಸೀಸ್‍ನ ಮಧ್ಯಮ ವೇಗದ ಬೌಲರ್ ರಿಚರ್ಡ್‍ಸನ್ ಅವರ ಚಮತ್ಕಾರಿ ಬೌಲಿಂಗ್ ದಾಳಿಯಲ್ಲಿ ಭಾರತದ ಪ್ರಮುಖ ನಾಲ್ಕು ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿದರು. ಮೂರು ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ಈ ಪಂದ್ಯ ಗೆಲ್ಲುವ ಮೂಲಕ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

# ಭುವಿಗೆ 100ನೆ ವಿಕೆಟ್ ಸಂಭ್ರಮ
ಭಾರತ ತಂಡದ ವೇಗಿ ಭುವನೇಶ್ವರ್ ಕುಮಾರ್ ಇಂದಿಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಆರೋನ್‍ಫಿಂಚ್‍ರ ವಿಕೆಟ್ ಕಬಳಿಸುವ ಮೂಲಕ ಏಕದಿನ ಮಾದರಿಯ ಕ್ರಿಕೆಟ್‍ನಲ್ಲಿ ತಮ್ಮ 100ನೆ ವಿಕೆಟ್ ಕೆಡವಿದ್ದಾರೆ. ಭಾರತ ತಂಡದ ಪರ 100 ನೆ ವಿಕೆಟ್ ಪಡೆದ 12ನೆ ವೇಗದ ಬೌಲರ್ ಆಗಿ ಗುರುತಿಸಿಕೊಂಡಿರುವ ಭುವನೇಶ್ವರ್ ಕುಮಾರ್‍ಗೆ ಇಂದಿನದು 96ನೆ ಪಂದ್ಯವಾಗಿದೆ.

ಸಂಕ್ಷಿಪ್ತ ಸ್ಕೋರ್ :
ಆಸ್ಟ್ರೇಲಿಯಾ : AUS 288/5 (50.0 Ovs)
ಭಾರತ :  IND 254/9 (50.0 Ovs)

Facebook Comments

Sri Raghav

Admin