ವಿಶ್ವಕಪ್ : ಅಬ್ಬರಿಸಿದ ಗಬ್ಬರ್ ಸಿಂಗ್, ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

ಈ ಸುದ್ದಿಯನ್ನು ಶೇರ್ ಮಾಡಿ

ಲಂಡನ್: ಐಸಿಸಿ ವಿಶ್ವಕಪ್ 2019 ರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ 36 ರನ್ ಗಳ ಭರ್ಜರಿ ಜಯ ದಾಖಲಿಸಿದೆ. ಕೆನ್ನಿಂಗ್ ಟನ್ ಓವಲ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 352 ರನ್ ಗಳಿಸಿತ್ತು.

ಟೀಂ ಇಂಡಿಯಾದ ಪರ ಶಿಖರ್ ಧವನ್ (117) ಭರ್ಜರಿ ಶತಕ, ರೋಹಿತ್ ಶರ್ಮಾ (57), ನಾಯಕ ವಿರಾಟ್ ಕೊಹ್ಲಿ (82) ಅರ್ಧಶತಕ ಹಾಗೂ ಹಾರ್ದಿಕ್ ಪಾಂಡ್ಯ (48) ಬ್ಯಾಟಿಂಗ್ ನೆರವಿನಿಂದ ಭಾರತ ತಂಡ 50 ಓವರ್ ಗಳಲ್ಲಿ 352 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು.

ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ ಭಾರತದ 352 ರನ್ ಗಳ ಮೊತ್ತ ವಿಶ್ವಕಪ್ ಇತಿಹಾಸದಲ್ಲಿ ಟೀಂ ಇಂಡಿಯಾ ಗಳಿಸಿದ ನಾಲ್ಕನೇ ಗರಿಷ್ಛ ಮೊತ್ತವಾಗಿದೆ.

ಭಾರತ ನೀಡಿದ ಬೃಹತ್ ಮೊತ್ತದ ಬೆನ್ನಟ್ಟಿದ ಆಸ್ಟ್ರೇಲಿಯಾ 63 ರನ್ ಗಳಿಸುತ್ತಿದ್ದಂತೆಯೇ ಆರಂಭಿಕ ಅಘಾತ ಎದುರಿಸಿತ್ತು. ಭಾರತೀಯ ಬೌಲರ್ ಗಳ ಎದುರಿಸಲು ವಿಫಲರಾದ ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಪರೇಡ್ ನಡೆಸಿದರು.

ಆಸೀಸ್ ಪರ ಡೇವಿಡ್ ವಾರ್ನರ್ (56), ಸ್ಟಿವನ್ ಸ್ಮಿತ್ (69) ಹಾಗೂ ಅಲೆಕ್ಸ್ ಕ್ಯಾರಿ (55) ಅರ್ಧಶತಕಗಳ ಹೊರತಾಗಿಯೂ ಆಸೀಸ್ 316 ರನ್ ಗಳಿಗೆ ತನ್ನೆಲ್ಲ ವಿಕೆಟ್ ಗಳನ್ನು ಕಳೆದುಕೊಂಡು ಸೋಲನುಭವಿಸಿತು.

ಈ ಮೂಲಕ ಟೀಂ ಇಂಡಿಯಾ ಐಸಿಸಿ ವಿಶ್ವಕಪ್ 2019 ರ ಟೂರ್ನಿಯಲ್ಲಿ ಸತತ 2 ನೇ ಗೆಲುವು ದಾಖಲಿಸಿದೆ.

ಸಂಕ್ಷಿಪ್ತ ಸ್ಕೋರ್ :
ಭಾರತ : 352/5
ಆಸ್ಟ್ರೇಲಿಯಾ : 316/10

Facebook Comments

Sri Raghav

Admin