ನಾಳೆಯಿಂದ ಇಂಡೋ-ವಿಂಡೀಸ್ ಫೈಟ್

ಈ ಸುದ್ದಿಯನ್ನು ಶೇರ್ ಮಾಡಿ

ಹೈದರಾಬಾದ್, ಡಿ.5- ತವರಿನಲ್ಲಿ ಸತತ ಸರಣಿಗಳನ್ನು ಗೆದ್ದು ಬೀಗುತ್ತಿರುವ ಟೀಂ ಇಂಡಿಯಾ ಆಟಗಾರರು ನಾಳೆಯಿಂದ ನಡೆಯಲಿರುವ 3 ಪಂದ್ಯಗಳ ಚುಟುಕು ಸರಣಿಯನ್ನು ಗೆಲ್ಲುವ ಹುಮ್ಮಸ್ಸಿನಲ್ಲಿದೆ.

ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ವಿಶ್ರಾಂತಿ ಪಡೆದಿದ್ದ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಲಿದ್ದು, ಸರಣಿಯನ್ನು ಗೆದ್ದೇ ತೀರಬೇಕೆಂಬ ಛಲದಿಂದ ಇಂದು ಕೂಡ ಆಟಗಾರರು ನೆಟ್ ಪ್ರಾಕ್ಟೀಸ್ ನಡೆಸಿದರು.  ಮತ್ತೊಂದೆಡೆ ಕಳೆದ ಬಾರಿ ಭಾರತದ ನೆಲದಲ್ಲಿ ಸರಣಿ ಸೋತಿದ್ದ ವೆಸ್ಟ್‍ಇಂಡೀಸ್ ತಂಡವನ್ನು ಗೆಲುವಿನ ದಡದತ್ತ ಸಾಗಿಸಬೇಕೆಂಬ ಲೆಕ್ಕಾಚಾರದಲ್ಲಿ ನಾಯಕ ಫೋರ್ಲಾಡ್ ಇದ್ದಾರೆ.

Facebook Comments