ಬಾಂಗ್ಲಾ ವಿರುದ್ಧ ಭಾರತಕ್ಕೆ 7 ವಿಕೆಟ್ ಗಳ ಸುಲಭದ ಜಯ

ಈ ಸುದ್ದಿಯನ್ನು ಶೇರ್ ಮಾಡಿ

Rohit--01
ದುಬೈ. ಸೆ. 21 : ಬಾಂಗ್ಲಾ ಮತ್ತು ಭಾರತದ ನಡುವೆ ಇಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಬಾಂಗ್ಲಾ ವಿರುದ್ಧ 7 ವಿಕೆಟ್ ಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ 49 ಓವರ್ ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 173 ರನ್ ಗಳಿಸಿ ಭಾರತಕ್ಕೆ 174 ರನ್ ಗಳ ಟಾರ್ಗೆಟ್ ನೀಡಿತ್ತು. ಸುಲಭದ ಟಾರ್ಗೆಟ್ ಬೆನ್ನಟ್ಟಿದ ಭಾರತ, ನಾಯಕ ರೋಹಿತ್ ಶರ್ಮ ಅದ್ಭುತ ಪ್ರದರ್ಶನದಿಂದ ಕೇವಲ 3 ವಿಕೆಟ್ ನಷ್ಟಕ್ಕೆ 36.2 ಓವರ್ ನಲ್ಲಿ ಗೆಲುವಿನ ಗುರಿ ತಲುಪಿತು. ಜವಾಬ್ದಾರಿಯುತ ಆಟವಾಡಿದ ರೋಹಿತ್ ಶರ್ಮ ಭರ್ಜರಿ 83 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಈ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಬಾಗ್ಲ ಪರ ಮೆಹಿದಿ ಹಸನ್ ಗರಿಷ್ಟ 42, ಲಿಟನ್ ದಾಸ್ (7), ನಝ್ಮುಲ್ ಹುಸೈನ್ ಶಾಂಟೊ (7) , ಶಾಕಿಬ್ ಅಲ್ ಹಸನ್(17), ವಿಕೆಟ್ ಕೀಪರ್ ಮುಶ್ಫೀಕು ರ್ರಹೀಂ (21), ಮುಹಮ್ಮದ್ ಮಿಥುನ್(9) ಮತ್ತು (25), ಮುಸ್ತಾಫಿಝ್ರುರಹ್ಮಾನ್(3) ಮತ್ತು ಮೊಸಾಡೆಕ್ ಹುಸೈನ್ ರನ್ ಗಳಿಸಿದರು. ಇನ್ನು ಭಾರತದ ಪರ ರವೀಂದ್ರ ಜಡೇಜಾ 29ಕ್ಕೆ 4, ಭುವನೇಶ್ವರ ಕುಮಾರ್ 32ಕ್ಕೆ 3 ಮತ್ತು ಜಸ್‌ಪ್ರೀತ್ ಬುಮ್ರಾ 37ಕ್ಕೆ 3 ವಿಕೆಟ್ ಪಡೆದರು.

ಟೀಮ್ ಇಂಡಿಯಾ ಪರ ರೋಹಿತ್ ಶರ್ಮ 83(104), ಶಿಖರ್ ಧವನ್ 40(47). ರಾಯುಡು 13(28), ಹಾಗೂ ಧೋನಿ 33(37) ಹಾಗೂ ದಿನ್ನೇಶ್ ಕಾರ್ತಿಕ್ 1 ರನ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್ :
ಬಾಂಗ್ಲಾದೇಶ : 173 all out (49.1 Overs, RR: 3.53)
ಭಾರತ : 174/3 (36.2/50 ov, target 174

Jadeja-01

 

Facebook Comments

Sri Raghav

Admin