ಬಾಂಗ್ಲಾ ವಿರುದ್ಧ ಕೊನೆ ಎಸೆತದಲ್ಲಿ ಫೈನಲ್ ಪಂದ್ಯ ಗೆದ್ದ ಭಾರತ, 7ನೇ ಬಾರಿಗೆ ಏಷ್ಯಾ ಕಪ್ ಕಿರೀಟ

ಈ ಸುದ್ದಿಯನ್ನು ಶೇರ್ ಮಾಡಿ

Kuldeep

# ಸಂಕ್ಷಿಪ್ತ ಸ್ಕೋರ್ :
ಬಾಂಗ್ಲಾದೇಶ -96/0 * (16.2/50 ov)
ಭಾರತ : 223/7 (50.0 Ovs)

ದುಬೈ, ಸೆ.29: ಇಲ್ಲಿ ನಡೆದ ಏಷ್ಯಾಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಮಣಿಸಿ ಭಾರತ 7ನೇ ಬಾರಿಗೆ ಏಷ್ಯಾ ಕಪ್ ಕಿರೀಟ ಮುಡಿಗೇರಿಸಿಕೊಂಡಿದೆ. ಕೊನೆಯ ಎಸೆತದವರೆಗೂ ತೀವ್ರ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಭಾರತ ಪದ್ಯವನ್ನು ಗೆಲ್ಲುವ ಮೂಲಕ ಚಾಂಪಿಯನ್ ಆಗೋ ಹೊರಹೊಮ್ಮಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಭಾರತಕ್ಕೆ 223 ರನ್ ಗಳ ಸವಾಲಿನ ಟಾರ್ಗೆಟ್ ನೀಡಿತ್ತು. ನಂತರ ಬ್ಯಾಟಿಂಗ್ ಗೆ ಇಳಿದ ಭಾರತ ಆರಂಭದಲ್ಲೇ 2 ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು . 15 ರನ್ ಗಳಿಸಿ ಶಿಖರ್ ಧವನ್ ಔಟಾದರೆ ನಂತರ ಬಂದ ರಾಯುಡು ಕೇವಲ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆರಂಭಿಕನಾಗಿ ಬಂದ ನಾಯಕ ರೋಹಿತ್ ಶರ್ಮಾ ಅತಿ ಹೆಚ್ಚು 48 ರನ್ ಗಳಿಸಿದರು. ಮಹೇಂದ್ರ ಸಿಂಗ್ ಧೋನಿ 36 ರನ್,, ಭುವನೇಶ್ ಕುಮಾರ್ 21ರನ್ ಗಳಿಸಿ ಔಟಾದರು. ಕುಲ್ದೀಪ್ ಯಾದವ್ 5 ರನ್ ಗಳಿಸಿದರು. ಆಲ್ ರೌಂಡರ್ ಗಳಾದ ಕೇದಾರ್ ಜಾದವ್ ಹಾಗೂ ರವೀಂದ್ರ ಜಡೇಜಾ ತಮ್ಮ ಘನತೆಗೆ ತಕ್ಕ ಆಟ ಆಡಿದ್ರು. ಇಬ್ಬರೂ ಆಟಗಾರರು ವೈಯಕ್ತಿಕವಾಗಿ 23 ರನ್ ಬಾರಿಸಿ ತಂಡದ ಗೆಲುಬಿಗೆ ಕಾರಣರಾದರು.
ಅಂತಿಮವಾಗಿ ಟೀಮ್ ಇಂಡಿಯಾ 7 ವಿಕೆಟ್ ಗೆ 223 ರನ್ ಬಾರಿಸಿ ಪಂದ್ಯ ಗೆದ್ದು ಬೀಗಿತು.

Asia

ಬಾಂಗ್ಲಾದೇಶ ಪರ ಲಿಟನ್ ದಾಸ್ ಮತ್ತು ಆಲ್‌ರೌಂಡರ್ ಮೆಹಿದಿ ಹಸನ್ ಮಿರಾಝ್ ಮೊದಲ ವಿಕೆಟ್‌ಗೆ 20.5 ಓವರ್‌ಗಳಲ್ಲಿ 120 ರನ್‌ಗಳ ಜೊತೆಯಾಟದಿಂದ ಬಿಗ್ ಓಪನಿಂಗ್ ಪಡೆದುಕೊಂಡಿತು. ಅಂತಿಮವಾಗಿ ಬಾಂಗ್ಲಾ 48.3 ನೇ ಓವರ್ ನಲ್ಲಿ ತನ್ನೆಲ್ಲ ವಿಕೆಟ್ ಗಳನ್ನೂ ಕಳೆದುಕೊಂಡು 222 ರನ್ ಗಳಿಸಿತು . ಬಾಂಗ್ಲಾ ಪರ ಲಿಟನ್ ದಾಸ್ 87 ಎಸೆತಗಳಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ ಶತಕ ಪೂರ್ಣಗೊಳಿಸಿದರು. 18ನೇ ಏಕದಿನ ಪಂದ್ಯವನ್ನು ಆಡಿದ ಲಿಟನ್ ದಾಸ್ ಅವರ ಹಿಂದಿನ ವೈಯಕ್ತಿಕ ಗರಿಷ್ಠ ಸ್ಕೋರ್ 41 ಆಗಿತ್ತು. ಅಫ್ಘಾನಿಸ್ತಾನ್ ವಿರುದ್ಧ ಸೆ.23ರಂದು ಏಶ್ಯಕಪ್‌ನಲ್ಲಿ 41 ರನ್ ಗಳಿಸಿದ್ದರು. ಲಿಟನ್ ದಾಸ್ 33 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಲ್ಲಿ ಮೊದಲ ಬಾರಿ ಅರ್ಧಶತಕ ಗಳಿಸಿದರು. ಉಳಿದಂತೆ ಇಮ್ರುಲ್ ಕೈಸ್(2), ಮುಶ್ಫಿಕುರ್ರಹೀಮ್(5), ಮುಹಮ್ಮದ್ ಮಿಥುನ್(2) ಮತ್ತು ಮಹ್ಮೂದುಲ್ಲಾ (5) ಔಟಾದರು. ಸೌಮ್ಯ ಸರ್ಕಾರ್ 33 ರನ್(45ಎ,1ಬೌ,1ಸಿ) ಗಳಿಸಿ ತಂಡದ ಸ್ಕೋರ್ 220ರ ಗಡಿ ದಾಟಲು ನೆರವಾದರು. ಮಶ್ರಾಫೆ ಮೊರ್ತಾಝ(7), ನಝ್ಮುಲ್ ಇಸ್ಲಾಂ (7) ರುಬೆಲ್ ಹುಸೈನ್(0) ರನ್ ಗಳಿಸಿದರು. ಭಾರತದ ಪರ ಕುಲ್‌ದೀಪ್ 45ಕ್ಕೆ 3, ಕೇದಾರ್ ಜಾಧವ್ 41ಕ್ಕೆ 3, ಬುಮ್ರಾ ಮತ್ತು ಚಹಾಲ್ ತಲಾ 1 ವಿಕೆಟ್ ಪಡೆದರು.

Bangla

# ಧೋನಿ ದಾಖಲೆ :
ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಎಂ.ಎಸ್. ಧೋನಿ ದಾಖಲೆ ಬರೆದಿದ್ದಾರೆ. 800 ವಿಕೆಟ್ ಕಬಳಿಸಿದ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಾಂಗ್ಲಾದೇಶದ ವಿರುದ್ಧ ನಡೆದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಧೋನಿ ಎರಡು ಸ್ಟಂಪ್ ಮಾಡುವ ಮೂಲಕ ಈ ದಾಖಲೆ ಬರೆದಿದ್ದಾರೆ. ಶುಕ್ರವಾರ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಬಾಂಗ್ಲಾ ನಾಯಕ ಮುಷರಫ್ ಮುರ್ತಾಜ್ ಸ್ಟಂಪ್ ಮಾಡುವ ಮೂಲಕ 800ನೇ ವಿಕೆಟ್ ಕಬಳಿಸಿದ ಹೆಗ್ಗಳಿಕೆಗೆ ಪಾತ್ರರಾದ್ರು. 800 ವಿಕೆಟ್ ಕಬಳಿಸಿದ ವಿಶ್ವದ ಮೂರನೇ ಹಾಗೂ ಭಾರತ ಮತ್ತು ಏಷ್ಯಾದ ಮೊದಲ ವಿಕೆಟ್ ಕೀಪರ್ ಆಗಿದ್ದಾರೆ ಧೋನಿ.
ಅಂತರಾಷ್ಟ್ರೀಯ ಮಟ್ಟದಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ ವಿಕೆಟ್ ಕೀಪರ್ ಗಳ ಪಟ್ಟಿ
ಮಾರ್ಕ್ ಬೌಚರ್ (ದಕ್ಷಿಣ ಆಫ್ರಿಕಾ – 1997-2012): 467 ಪಂದ್ಯಗಳು, 998 ವಿಕೆಟ್
ಆಯಡಮ್ ಗಿಲ್ ಕ್ರಿಸ್ಟ್ (ಆಸ್ಟ್ರೇಲಿಯಾ- 1996-2008): 396 ಪಂದ್ಯಗಳು, 905 ವಿಕೆಟ್
ಮಹೇಂದ್ರ ಸಿಂಗ್ ಧೋನಿ (ಭಾರತ-2004-2018): 510 ಪಂದ್ಯಗಳು, 800 ವಿಕೆಟ್

 

India--01

Facebook Comments

Sri Raghav

Admin