ಬಾಂಗ್ಲಾ ಹುಲಿಗಳ ಬೇಟೆಯಾಡಲು ವಿರಾಟ್ ಪಡೆ ಸಜ್ಜು…!

ಈ ಸುದ್ದಿಯನ್ನು ಶೇರ್ ಮಾಡಿ

ಬರ್ಮಿಂಗ್‍ಹ್ಯಾಮ್,ಜು.1- ಇಂಗ್ಲೆಂಡ್ ವಿರುದ್ಧ ಸೋಲುವ ಮೂಲಕ ಸತತ ಗೆಲುವಿನ ಲಗಾ ಮನ್ನು ಕಳಚಿಕೊಂಡಿದ್ದರೂ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಬಳಗ ಆತ್ಮವಿಶ್ವಾಸದಿಂದಲೇ ಬಾಂಗ್ಲಾದ ಹುಲಿಗಳನ್ನು ಬೇಟೆ ಯಾಡಲು ಸಜ್ಜಾಗಿದೆ. ಇಂಗ್ಲೆಂಡ್ ವಿರುದ್ಧ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಎಡವಿರುವ ಟೀಂ ಇಂಡಿಯಾ ನಾಳೆ ಅದೇ ಪಿಚ್‍ನಲ್ಲಿ ಬಾಂಗ್ಲಾ ವಿರುದ್ಧ ಆಡುತ್ತಿರುವುದು ಪ್ಲಸ್ ಪಾಯಿಂಟ್‍ನಂತಿದ್ದು, ಹಿಂದಿನ ಪಂದ್ಯದ ಮೈನಸ್ ಪಾಯಿಂಟ್‍ಗಳನ್ನು ಗೆಲುವಾಗಿ ಪರಿವರ್ತಿಸಿ ಕೊಳ್ಳುವತ್ತ ಚಿತ್ತ ಹರಿಸಿದೆ.

ಬಾಂಗ್ಲಾ ಸೆಮೀಸ್ ಜೀವಂತ:  ಇತ್ತೀಚಿನ ದಿನಗಳಲ್ಲಿ ಬಲಾಢ್ಯರೆನಿಸಿಕೊಂಡಿರುವ ಮುಷ್ರರಪೆ ಮೊತಾರ್ಜ ಸಾರಥ್ಯದ ಬಾಂಗ್ಲಾದೇಶವು ತಾನು ಕೂಡ ಬಲಿಷ್ಠ ತಂಡಗಳನ್ನು ಮಣಿಸುವ ಶಕ್ತಿಯನ್ನು ಹೊಂದಿದ್ದೇವೆ ಎಂಬುದನ್ನು ಪ್ರಸಕ್ತ ವಿಶ್ವಕಪ್‍ನಲ್ಲಿ ದಕ್ಷಿಣ ಆಪ್ರಿಕಾ ಹಾಗೂ ವೆಸ್ಟ್‍ಇಂಡೀಸ್ ವಿರುದ್ಧ ಗೆಲುವು ತೋರಿಸಿದ್ದು ಈಗ ಬಲಿಷ್ಠ ಭಾರತ ತಂಡವನ್ನು ಮಣಿಸಿ ಸೆಮೀಸ್ ಆಸೆಯನ್ನು ಜೀವಂತವಾಗಿಸಿಕೊಳ್ಳುವ ಹಾದಿಯಲ್ಲಿದೆ.

ಭಾರತ ತಂಡವು ನಾಳೆಯ ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡವಾಗಿದ್ದರೂ ಕೂಡ ಏಷ್ಯಾ ಕಪ್‍ನಲ್ಲಿ ಭಾರತಕ್ಕೆ , ಬಾಂಗ್ಲಾದೇಶವು ಸವಾಲೊಡ್ಡಿದ್ದ ರೀತಿ ಕಂಡರೆ ವಿರಾಟ್ ಪಡೆ ಗೆಲ್ಲಲು ಹರಸಾಹಸಪಡಬೇಕಾಗುತ್ತದೆ.

ಸಮಬಲ ಹೋರಾಟ:  ವಿಶ್ವಕಪ್‍ನ ಇತಿಹಾಸದಲ್ಲೂ ಕೂಡ ಭಾರತ ತಂಡವನ್ನು ಸಾಮಥ್ರ್ಯವಾಗಿ ಎದುರಿಸಿರುವ ಮೊರ್ತಾಜಾ ನಾಯಕತ್ವದ ಬಾಂಗ್ಲಾ ಪಡೆಯು 2007ರಲ್ಲಿ ರಾಹುಲ್ ದ್ರಾವಿಡ್ ಸಾರಥ್ಯದ ತಂಡ ವಿರುದ್ಧ 5 ವಿಕೆಟ್‍ಗಳಿಂದ ಗೆದ್ದು ಭಾರತ ಮುಖಭಂಗ ಅನುಭವಿಸುವಂತೆ ಮಾಡಿತ್ತು. ಈಗ ಬಾಂಗ್ಲಾ ಕೂಡ ಸೆಮೀಸ್‍ಗೇರಬೇಕಾದರೆ ಭಾರತ ವಿರುದ್ಧ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

ಬ್ಯಾಟ್ಸ್‍ಮನ್‍ಗಳಿಗೆ ಕಡಿವಾಣ:
ತನ್ನ ಬ್ಯಾಟಿಂಗ್ ಬಲದಿಂದಲೇ ಎದುರಾಳಿ ಬೌಲರ್‍ಗಳ ಬೆವರಿಳಿಸುತ್ತಿರುವ ರೋಹಿತ್ ಶರ್ಮಾ (440 ರನ್) ಹಾಗೂ ವಿರಾಟ್ ಕೊಹ್ಲಿ (382 ರನ್) ಅವರನ್ನು ನಿಯಂತ್ರಿಸಲು ರಣತಂತ್ರ ರೂಪಿಸಿರುವ ಮೊತಾರ್ಜಾ ಪಡೆಯು ಈ ಇಬ್ಬರು ಆಟಗಾರರನ್ನು ಬಲುಬೇಗ ಕಟ್ಟಿ ಹಾಕಿದರೆ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬಲಕ್ಕೆ ಬ್ರೇಕ್ ಹಾಕಬಹುದು ಎಂದು ಅಂದಾಜಿಸಿದ್ದಾರೆ.

ಆದರೆ ಇಂಗ್ಲೆಂಡ್ ವಿರುದ್ಧ ಮಧ್ಯಮ ಕ್ರಮಾಂಕದ ಬ್ಯಾಟ್ಸ್‍ಮನ್‍ಗಳಾದ ಮಹೇಂದ್ರಸಿಂಗ್ ಧೋನಿ, ರಿಷಭ್‍ಪಂತ್, ಹಾರ್ದಿಕ್ ಪಾಂಡ್ಯಾ ಆಡಿರುವ ರೀತಿ ನೋಡಿದರೆ ಬಾಂಗ್ಲಾದ ಸ್ಟಾರ್ ಬೌಲರ್‍ಗಳಾದ ಮೊಹಮ್ಮದ್ ಶೆಪುದ್ದೀನ್ (10 ವಿಕೆಟ್), ಶಕೀಬ್ ಹಲ್ ಹಸನ್ (10 ವಿಕೆಟ್), ಮುಷ್ತಾಫಿಜೂರ್ ರೆಹಮಾನ್ (10 ವಿಕೆಟ್)ರ ಬೌಲಿಂಗ್ ಅನ್ನು ನುಚ್ಚುನೂರು ಮಾಡಿ ಬೃಹತ್ ಮೊತ್ತವನ್ನು ಗಳಿಸುವ ಮೂಲಕ ಬಾಂಗ್ಲಾ ನಾಯಕನ ಲೆಕ್ಕಚಾರ ತಲೆಕೆಳಗಾಗಿ ಮಾಡುವ ರಣತಂತ್ರವನ್ನು ಕೊಹ್ಲಿ ಪಡೆ ರೂಪಿಸುತ್ತಿದೆ.

ಬೌಲಿಂಗ್ ರಣತಂತ್ರ:
ವಿಶ್ವದ ಶ್ರೇಷ್ಠ ಬೌಲರ್‍ಗಳ ಬೌಲಿಂಗ್ ದಾಳಿಯನ್ನು ಎದುರಿಸಿ ಭಾರೀ ಹೊಡೆತಗಳನ್ನು ಗಳಿಸುತ್ತಿರುವ ಬಾಂಗ್ಲಾದ ಅಲ್‍ರೌಂಡರ್ ಶಕೀಬ್ ಹಲ್ ಹಸನ್ (476 ರನ್)ಗೆ ಕಡಿವಾಣ ಹಾಕಲು ಭಾರತದ ವೇಗಿಗಳಾದ ಜಸ್‍ಪ್ರೀತ್( ಬೂಮ್ರಾ (10 ವಿಕೆಟ್), ಮೊಹಮ್ಮದ್ ಶಮಿ (13 ವಿಕೆಟ್), ಯಜುವೇಂದ್ರ ಚಹಲ್(10 ವಿಕೆಟ್) ಹೇಗೆ ಬೌಲಿಂಗ್ ಮಾಡಬೇಕೆಂಬುದರ ಬಗ್ಗೆಯೂ ಚಿಂತಿಸುತ್ತಿದ್ದಾರೆ.

ಬಾಂಗ್ಲಾ ತಂಡದ ಬ್ಯಾಟಿಂಗ್ ಬಲವಾಗಿರುವ ಶಕೀಬ್‍ಗೆ ಸಾಥ್ ನೀಡುತ್ತಿರುವ ಮುಷ್ತಾಪೀರ್ ರೆಹಮಾನ್ (327 ರನ್), ತಮೀಮ್ ಇಕ್ಬಾಲ್ (205 ರನ್)ರನ್ನು ಕಟ್ಟಿ ಹಾಕಲು ಕೂಡ ಭಾರತದ ಬೌಲರ್ಸ್‍ಗಳು ಬಲೆ ಎಣೆದಿದ್ದಾರೆ.  ಸೆಮೀಸ್‍ಗೇರಬೇಕಾದರೆ ಭಾರತ ತಂಡದ ವಿರುದ್ಧ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿರುವ ಬಾಂಗ್ಲಾ ಆ ಅಗ್ನಿಪರೀಕ್ಷೆಯಲ್ಲಿ ಗೆಲ್ಲುತ್ತಾರೆ ಎಂಬುದನ್ನು ಕಾದು ನೋಡಬೇಕು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ