ಗಡಿ ಸಂಘರ್ಷ ಇತ್ಯರ್ಥಕ್ಕೆ ಭಾರತ-ಚೀನಾ ಗೌಪ್ಯಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.16- ಪೂರ್ವ ಲಡಾಖ್ ಪ್ರಾಂತ್ಯದಲ್ಲಿ ಭಾರತ-ಚೀನಾ ನಡುವೆ ಉದ್ಭವಿಸಿರುವ ಗಡಿ ಸಂಘರ್ಷ ಮತ್ತು ಅಲ್ಲಿ ಎರಡೂ ದೇಶಗಳ ಸೇನೆಯ ಜಮಾವಣೆಯಿಂದ ಸೃಷ್ಟಿಯಾಗಿರುವ ಆತಂಕವನ್ನು ನಿವಾರಿಸಲು ಉಭಯ ರಾಷ್ಟ್ರಗಳು ಗೌಪ್ಯಚರ್ಚೆಯಲ್ಲಿ ನಿರತವಾಗಿವೆ.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಈ ವಿಷಯ ತಿಳಿಸಿದ್ದು, ಭಾರತ-ಚೀನಾ ನಡುವೆ ಮುಂದುವರಿದಿರುವ ಗೌಪ್ಯ ಮಾತುಕತೆಯನ್ನು ಬಹಿರಂಗಗೊಳಿಸಲು ಈಗ ಸಾಧ್ಯವಿಲ್ಲ. ಅಲ್ಲದೇ ಚರ್ಚೆಯ ಫಲಶೃತಿ ಬಗ್ಗೆ ಈಗಲೇ ಭವಿಷ್ಯ ನುಡಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಬ್ಲೂಮ್ ಬರ್ಗ್ ಇಂಡಿಯಾ ಎಕಾನಾಮಿಕ್ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಪೂರ್ವ ಲಡಾಖ್ ಪ್ರಾಂತ್ಯದಲ್ಲಿ ಎರಡೂ ಸೇನಾಪಡೆಗಳ ಜಮಾವಣೆಯಿಂದಾಗಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವುದನ್ನು ಒಪ್ಪಿಕೊಂಡರು.

ಇಂಡೋ-ಚೀನಾ ನಡುವೆ ಉನ್ನತ ಮಟ್ಟದ ಮಾತುಕತೆಗೆಳು ಮುಂದುವರಿದಿವೆ. ಲಡಾಖ್‍ನ ಸೂಕ್ಷ್ಮ ಸ್ಥಳಗಳಿಂದ ಎರಡೂ ದೇಶಗಳ ಸೇನಾಪಡೆಗಳು ಹಿಂದಕ್ಕೆ ಸರಿಯುವ ನಿಟ್ಟಿನಲ್ಲಿ ಸಮಾಲೋಚನೆಗಳು ಪ್ರಗತಿಯಲ್ಲಿವೆ.

ಈಗೆ ನಡೆಯುತ್ತಿರುವ ಮಾತುಕಥೆಯ ಬೆಳವಣಿಗೆಗಳು ಗೌಪ್ಯವಾಗಿವೆ. ಅವುಗಳನ್ನು ಸಾರ್ವಜನಿಕವಾಗಿ ಬಹಿರಂಗೊಳಿಸುವ ಸ್ಥಿತಿಯಲ್ಲಿ ನಾನಿಲ್ಲ. ಅಲ್ಲದೇ ಈ ಬಗ್ಗೆ ಭವಿಷ್ಯ ನುಡಿಯಲು ಅಥವಾ ಮುನ್ನವೇ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ ಎಂದು ವಿದೇಶಾಂಗ ವ್ಯವಹಾರ ಸಚಿವರು ಹೇಳಿದರು.

ನಮ್ಮ ಗಡಿರಕ್ಷಣೆಗಾಗಿ ನಾವು ಪೂರ್ವ ಲಡಾಖ್‍ನಲ್ಲಿ ನಾವು ಸೇನೆಯಲ್ಲಿ ಜಮಾವಣೆಗೊಳಿಸಿದೆ. ಚೀನಾ ಸಹ ಇದೇ ಕ್ರಮವನ್ನು ಅನುಸರಿಸಿದೆ. ಇಂಡೋ-ಚೀನಾಗಡಿ ಭಾಗದಲ್ಲಿ ಉಭಯ ದೇಶಗಳು ಸಮಾನತೆಕಾಯ್ದುಕೊಂಡಿವೆ. ನಮ್ಮ ಮುಂದಿರುವ ಸವಾಲು ಕೂಡ ಅದೇರೀತಿಯದ್ದಾಗಿದೆ ಎಂದು ಅವರು ತಿಳಿಸಿದರು.

1993ರಲ್ಲಿ ಗಡಿ ಭಾಗದಲ್ಲಿ ಶಾಂತಿ ನೆಲೆಸಲು ಉಭಯ ದೇಶಗಳ ನಡುವೆ ಮಾಡಿಕೊಂಡ ಒಪ್ಪಂದದ ನಂತರ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. ಆದರೆ, ಇತ್ತೀಚನ ದಿನಗಳಲ್ಲಿ ಶಾಂತಿ ಮತ್ತು ಸೌಹಾರ್ದತೆ ಹದಗೆಟ್ಟಿದೆ. ಒಪ್ಪಂದದ ನಿಯಮಗಳನ್ನು ಮುರಿದಾಗ ಸಮಸ್ಯೆ ಸೃಷ್ಟಿಯಾಗುತ್ತದೆ ಎಂದು ಅವರು ಚೀನಾವನ್ನು ಪರೋಕ್ಷವಾಗಿ ಟೀಕಿಸಿದರು.

Facebook Comments

Sri Raghav

Admin