ವಿರಾಟ್ ಪಡೆಗೆ ಮುಖಭಂಗ, ಟೆಸ್ಟ್ ರಾಂಕಿಂಗ್‌ನಲ್ಲಿ ನಂಬರ್ 1 ಸ್ಥಾನ ಅಬಾಧಿತ

ಈ ಸುದ್ದಿಯನ್ನು ಶೇರ್ ಮಾಡಿ

ಚರ್ಚ್‍ಸ್ಟ್ರಿಟ್, ಮಾ.3- ಏಕದಿನ ವಿಶ್ವಕಪ್‍ನ ಸೆಮಿಫೈನಲ್‍ನಲ್ಲಿ ಹೀನಾಯವಾಗಿ ಸೋಲು ವಿಶ್ವಕಪ್ ಗೆಲ್ಲುವಲ್ಲಿ ಎಡವಿದ್ದ ವಿರಾಟ್ ಪಡೆ ನಂತರ ನಡೆದ ಸರಣಿಗಳಲ್ಲಿ ಗೆಲ್ಲುವ ಮೂಲಕ ತಮ್ಮ ಪ್ರಾಬಲ್ಯವನ್ನು ಮೆರೆದಿದ್ದರು. ವಿಶ್ವ ಟೆಸ್ಟ್ ಆರಂಭಗೊಂಡಾಗಿ ನಿಂದಲೂ ಅಜೇಯರಾಗಿ ಉಳಿದಿದ್ದ ಭಾರತ ತಂಡವು ನ್ಯೂಜಿಲ್ಯಾಂಡ್ ವಿರುದ್ಧ ನಡೆದ 2 ಪಂದ್ಯಗಳಲ್ಲೂ ಹೀನಾಯ ಸೋಲು ಕಾಣುವ ಮೂಲಕ 120 ಅಂಕಗಳನ್ನು ಕಳೆದುಕೊಂಡು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದಾರೆ.

ನ್ಯೂಜಿಲ್ಯಾಂಡ್ ಪ್ರವಾಸದ ಆರಂಭದಲ್ಲಿ ಟ್ವೆಂಟಿ-20 ಸರಣಿಯಲ್ಲಿ ಕ್ಲೀನ್‍ಸ್ವೀಪ್ ಮಾಡಿದ್ದ ವಿರಾಟ್ ಪಡೆ ನಂತರ ನಡೆದ ಏಕದಿನ ಸರಣಿಯಲ್ಲಿ ಕ್ಲೀನ್‍ಸ್ವೀಪ್ ಸೋಲು ಕಂಡಿದ್ದ ಭಾರತ ತಂಡವು ಈಗ ಎರಡು ಟೆಸ್ಟ್ ಪಂದ್ಯದಲ್ಲೂ ಕ್ಲೀನ್ ಸ್ವೀಪ್ ಆಗುವ ಮೂಲಕ ಭಾರೀ ಮುಖಭಂಗ ಅನುಭವಿಸಿದೆ.

ಎರಡನೇ ದಿನದಾಟದ ಅಂತ್ಯಕ್ಕೆ 90 ರನ್‍ಗಳಿಗೆ 6 ಪ್ರಮುಖ ವಿಕೆಟ್‍ಗಳನ್ನು ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದ್ದ ಟೀಂ ಇಂಡಿಯಾ ಇಂದು 124 ರನ್‍ಗಳಿಗೆ ಸರ್ವಪತನವಾಗುವ ಮೂಲಕ ಕಿವೀಸ್‍ಗೆ ಗೆಲ್ಲಲು 132 ರನ್‍ಗಳ ಸುಲಭದ ಗುರಿ ನೀಡಿತು. ಟೀಂ ಇಂಡಿಯಾದ ಪರ ರವೀಂದ್ರಾ ಜಾಡೇಜಾ ಅಜೇಯ 16 ರನ್ ಗಳಿಸಿದರೂ , ನಿನ್ನೆ ಅಜೇಯರಾಗಿದ್ದ ರಿಷಭ್‍ಪಂತ್ (4 ರನ್) ಹಾಗೂ ಹನುಮ ವಿಹಾರಿ (9 ರನ್) ಬೃಹತ್ ಮೊತ್ತ ಕಲೆ ಹಾಕುವಲ್ಲಿ ಎಡವಿದರು.

ಕಿವೀಸ್ ಪರ ಟ್ರೆಂಟ್ ಬೋಲ್ಟ್ 4 ವಿಕೆಟ್, ಟೀಮ್ ಸೋಥಿ 3 ವಿಕೆಟ್, ಗ್ರ್ಯಾಂಡ್ ಹೋಮೆ, ವ್ಯಾಗ್ನರ್ ತಲಾ 1 ವಿಕೆಟ್ ಕಬಳಿಸಿದರು. ಭಾರತ ನೀಡಿದ 132 ರನ್‍ಗಳ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲ್ಯಾಂಡ್ ಆರಂಭಿಕ ಆಟಗಾರರಾದ ಲ್ಯಾಥಮ್ (52 ರನ್, 10 ಬೌಂಡರಿ) ಹಾಗೂ ಬುಲ್‍ಡೇನ್ (55 ರನ್, 8 ಬೌಂಡರಿ, 1 ಸಿಕ್ಸರ್)ರ ಅರ್ಧಶತಕದ ನೆರವಿನಿಂದ 3 ವಿಕೆಟ್‍ಗಳನ್ನು ಕಳೆದುಕೊಂಡು ವಿಜಯದ ನಗೆ ಬೀರಿತು.

# ಸಂಕ್ಷಿಪ್ತ ಸ್ಕೋರ್:
ಭಾರತ ಮೊದಲ ಇನ್ನಿಂಗ್ಸ್: 242 ರನ್, ದ್ವಿತೀಯ ಇನ್ನಿಂಗ್ಸ್: 124ರನ್
ನ್ಯೂಜಿಲ್ಯಾಂಡ್ ಮೊದಲ ಇನ್ನಿಂಗ್ಸ್:235, ದ್ವಿತೀಯ ಇನ್ನಿಂಗ್ಸ್: 132/3
ಪಂದ್ಯ ಪುರುಷೋತ್ತಮ: ಕೇಲ್ ಜೆಮ್ಮಿಸನ್

# ನಂಬರ್ 1 ಸ್ಥಾನ ಅಬಾಧಿತ : 
ವಿಶ್ವ ಟೆಸ್ಟ್ ಚಾಂಪಿಯನ್ಸ್ ಪಟ್ಟಿಯಲ್ಲಿ ಕಿವೀಸ್ ವಿರುದ್ಧ ಸೋತರೂ ನಂಬರ 1 ಸ್ಥಾನದಲ್ಲಿ ಮುಂದುವರೆದಿರುವ ಟೀಂ ಇಂಡಿಯಾ ಮುಂದಿನ ಟೆಸ್ಟ್ ಸರಣಿಯನ್ನು ಸೋತರೆ ಆ ಸ್ಥಾನವನ್ನು ಕಳೆದುಕೊಳ್ಳಲಿದೆ. ಪ್ರಸ್ತುತ ಟೀಂ ಇಂಡಿಯಾ 360 ಅಂಕ ಗಳಿಸಿರುವ ಭಾರತ ನಂಬರ್ 1 ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ (296 ಅಂಕ), ನ್ಯೂಜಿಲ್ಯಾಂಡ್ (180 ಅಂಕ) ಎರಡನೇ ಹಾಗೂ ಮೂರನೇ ಸ್ಥಾನದಲ್ಲಿದೆ. ಇಂಗ್ಲೆಂಡ್ (146 ಅಂಕ), ಪಾಕಿಸ್ತಾನ (140 ಅಂಕ) ನಂತರದ ಸ್ಥಾನಗಳಲ್ಲಿವೆ.

# ಸೋಲಿನಿಂದ ಕಂಗೆಟ್ಟಿಲ್ಲ :
ಕಳೆದ ವಿಶ್ವಕಪ್‍ನಲ್ಲಿ ಇಂಗ್ಲೆಂಡ್‍ನಂತಹ ಪ್ರಬುದ್ಧ ತಂಡದೆದೆರು ಸೋತು ಫೈನಲ್‍ಗೇರುವ ಅವಕಾಶವನ್ನು ಕಳೆದುಕೊಂಡಿದ್ದರು, ಈಗ ಇಲ್ಲೂ ಕೂಡ ನ್ಯೂಜಿಲ್ಯಾಂಡ್‍ನಂತಹ ಬಲಿಷ್ಠ ತಂಡದೆದುರು ಸೋಲು ಕಂಡಿದ್ದೇವೆ, ಈ ಸೋಲಿನಿಂದ ತಂಡದ ಮೇಲೆ ಯಾವ ಪರಿಣಾಮವು ಬೀರುವುದಿಲ್ಲ ಮುಂದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುವುದಾಗಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

Facebook Comments

Sri Raghav

Admin