ಭಾರತದ ದಾಂಡಿಗರಿಗೆ ಸೋಥಿ, ಜೆಮ್ಮಿಸನ್ ಲಗಾಮು, ಆಸರೆಯಾದ ಶ್ರೇಯಸ್

ಈ ಸುದ್ದಿಯನ್ನು ಶೇರ್ ಮಾಡಿ

ಕಾನ್ಪುರ, ನ. 28- ಭಾರತ ವಿರುದ್ಧ ಮೊದಲ ಟೆಸ್ಟ್ನಲ್ಲಿ ಪ್ರಥಮ ಇನ್ನಿಂಗ್ಸ್ನಲ್ಲಿ 5 ವಿಕೆಟ್ ಕಬಳಿಸಿದ್ದ ನ್ಯೂಜಿಲ್ಯಾಂಡ್ ವೇಗಿ ಟೀಮ್ ಸೋಥಿ ಹಾಗೂ ಕೇಲ್ ಜೆಮ್ಮಿಸನ್ ಅವರು ಎರಡನೇ ಇನ್ನಿಂಗ್ಸ್ನಲ್ಲೂ ಮಾರಕ ದಾಳಿ ಪ್ರದರ್ಶಿಸಿ ಬ್ಯಾಟ್ಸ್ಮನ್ಗಳಿಗೆ ಲಗಾಮು ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.3ನೆ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 14 ರನ್ ಗಳಿಸಿದ ಭಾರತದ ದಾಂಡಿಗರಾದ ಕನ್ನಡಿಗ ಮಯಾಂಕ್ ಅಗರ್ವಾಲ್ ಹಾಗೂ ಉಪನಾಯಕ ಚೇತೇಶ್ವರ ಪೂಜಾರ ಅವರು 4ನೆ ದಿನದಾಟ ಆರಂಭಿಸಿದರಾದರೂ ಕೇಲ್ ಜೆಮ್ಮಿಸನ್ ಅವರು ಪೂಜಾರರ ವಿಕೆಟ್ ಕೆಡವುವ ಮೂಲಕ ಆಘಾತ ನೀಡಿದರು.

# ಮತ್ತೆ ಎಡವಿದ ಪೂಜಾರ, ರಹಾನೆ:
ಸತತ ವೈಫಲ್ಯ ಕಾಣುತ್ತಿರುವ ಟೀಂ ಇಂಡಿಯಾದ ನಾಯಕ ಅಜೆಂಕಾ ರಹಾನೆ ಹಾಗೂ ಉಪನಾಯಕ ಚೇತೇಶ್ವರ ಪೂಜಾರ ಅವರು ಕಿವೀಸ್ ವಿರುದ್ಧದ ಮೊದಲ ಟೆಸ್ಟ್ನಲ್ಲೂ ಬೃಹತ್ ಮೊತ್ತ ದಾಖಲಿಸುವಲ್ಲಿ ಮತ್ತೆ ಎಡವಿದ್ದಾರೆ.

ಮೊದಲ ಇನ್ನಿಂಗ್ಸ್ನಲ್ಲಿ 26 ರನ್ ಗಳಿಸಿದ್ದ ಉಪನಾಯಕ ಚೇತೇಶ್ವರ ಪೂಜಾರ ಎರಡನೇ ಇನ್ನಿಂಗ್ಸ್ನಲ್ಲಿ 22 ರನ್ ಗಳಿಸಿ ಜೆಮ್ಮಿಸನ್ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ಬುಲನ್ಡೆಲ್ಗೆ ಕ್ಯಾಚ್ ನೀಡಿ ಹೊರ ನಡೆದರೆ, ಪ್ರಥಮ ಇನ್ನಿಂಗ್ಸ್ನಲ್ಲಿ 35 ರನ್ ಗಳಿಸಿದ್ದ ನಾಯಕ ಅಜೆಂಕಾ ರಹಾನೆ ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 4 ರನ್ ಗಳಿಸಿ ಅಜಾಜ್ ಪಟೇಲ್ಗೆ ವಿಕೆಟ್ ಒಪ್ಪಿಸಿದರು.

ಪೂಜಾರ ಹಾಗೂ ರಹಾನೆ 50 ರನ್ ಗಳಿಸುವಷ್ಟರಲ್ಲಿ ಔಟಾದರೂ ತಾಳ್ಮೆಯುತ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 17 ರನ್ ಗಳಿಸಿದ್ದಾಗ ವೇಗಿ ಸೋಥಿ ಬೌಲಿಂಗ್ನಲ್ಲಿ ಲಾಥಮ್ ಹಿಡಿದ ಕ್ಯಾಚ್ಗೆ ಔಟಾಗುವ ಮೂಲಕ ಮೈದಾನ ತೊರೆದರು. ಮೊದಲ ಇನ್ನಿಂಗ್ಸ್ನಲ್ಲಿ ಅರ್ಧಶತಕ ಗಳಿಸಿದ್ದ ಅಲೌಂಡರ್ ರವೀಂದ್ರಾ ಜಾಡೇಜಾ ರನ್ ಖಾತೆ ಗಳಿಸ ಇದೆ ಸೋಥಿಗೆ ವಿಕೆಟ್ ಒಪ್ಪಿಸಿದರು.

# ಶ್ರೇಯಸ್- ಅಶ್ವಿನ್ ಬೊಂಬಾಟ್ ಆಟ:
51 ರನ್ಗಳಾಗುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ 6ನೆ ವಿಕೆಟ್ಗೆ ಜೊತೆಗೂಡಿದ ಶತಕ ವೀರ ಶ್ರೇಯಸ್ ಅಯ್ಯರ್ ಹಾಗೂ ಅಲೌಂಡರ್ ರವಿಚಂದ್ರನ್ ಅಶ್ವಿನ್ ಅವರು ಚೇತರಿಕೆ ನೀಡುವಂತೆ ಬ್ಯಾಟಿಂಗ್ ಮಾಡುವ ಮೂಲಕ ತಂಡದ ಮೊತ್ತವನ್ನು ಶತಕದ ಗಡಿ ದಾಟಿಸಿದರು.

5 ಬೌಂಡರಿಗಳ ನೆರವಿನಿಂದ 32 ರನ್ ಗಳಿಸಿದ್ದ ರವಿಚಂದ್ರನ್ ಅಶ್ವಿನ್ 39.2ನೆ ಓವರ್ನಲ್ಲಿ ವೇಗಿ ಕೇಲ್ ಜೆಮ್ಮಿಸನ್ರ ಬೌಲಿಂಗ್ ಗತಿಯನ್ನು ಅರಿಯದೆ ಕ್ಲೀನ್ ಬೌಲ್ಡ್ ಆದಾಗ ತಂಡದ ಮೊತ್ತ 103 ರನ್ಗಳಾಗಿತ್ತು.

# ಆಸರೆಯಾದ ಶ್ರೇಯಸ್:
ಮೊದಲ ಇನ್ನಿಂಗ್ಸ್ನಲ್ಲಿ ಕುಸಿಯುತ್ತಿದ್ದ ಭಾರತ ತಂಡಕ್ಕೆ ಚೇತರಿಕೆ ನೀಡಿದ್ದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ತಮ್ಮ ಅಮೋಘ ಶತಕ (105 ರನ್) ನೆರವಿನಿಂದ ತಂಡಕ್ಕೆ ಆಸರೆಯಾಗಿದ್ದರೆ ದ್ವಿತೀಯ ಇನ್ನಿಂಗ್ಸ್ನಲ್ಲೂ ತಂಡಕ್ಕೆ ಆಸರೆಯಾಗಿ ನಿಂತಿದ್ದು ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಭಾರತ 6 ವಿಕೆಟ್ ಕಳೆದುಕೊಂಡು 120 ರನ್ ಗಳಿಸಿದ್ದರೆ, ಶ್ರೇಯಸ್ ಅಯ್ಯರ್ (35ರನ್, 5 ಬೌಂಡರಿ), ವಿಕೆಟ್ ಕೀಪರ್ ವೃದ್ಧಿಮಾನ್ ಶಾ( 7ರನ್) ಕ್ರೀಸ್ನಲ್ಲಿದ್ದರು.

Facebook Comments

Sri Raghav

Admin