ಮುಂಬೈ ಟೆಸ್ಟ್‍ನಿಂದ ರಹಾನೆ, ಜಡೇಜಾ, ಇಶಾಂತ್ ಹೊರಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಡಿ. 3- ಕಾನ್ಪುರ ಟೆಸ್ಟ್‍ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅಲೌಂಡರ್ ರವೀಂದಾಜಡೇಜಾ, ನಾಯಕ ಅಜೆಂಕಾ ರಹಾನೆ, ವೇಗಿ ಇಶಾಂತ್ ಶರ್ಮಾ ಅವರು ಗಾಯಾಳುಗಳಾಗಿರುವುದರಿಂದ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ 2ನೆ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ಕಾನ್ಪುರ ಟೆಸ್ಟ್‍ನ ಅಂತಿಮ ದಿನದಲ್ಲಿ ಕ್ಷೇತ್ರ ರಕ್ಷಣೆ ಮಾಡುವ ವೇಳೆ ಅಜೆಂಕಾರಹಾನೆಯ ಎಡ ಮಂಡಿರಜ್ಜುಗೆ ಗಾಯವಾಗಿತ್ತು, ಅದರಿಂದ ಇನ್ನು ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಅವರು ಎರಡನೇ ಟೆಸ್ಟ್‍ನಿಂದ ಹೊರಗುಳಿದಿದ್ದಾರೆ. ಮುಂಬೈ ಟೆಸ್ಟ್‍ಗೆ ನಾಯಕ ವಿರಾಟ್ ಕೊಹ್ಲಿ ಹಿಂದುರುಗಿರುವುದರಿಂದ ಉಪನಾಯಕನಾಗಿದ್ದ ರಹಾನೆ ಸ್ಥಾನವನ್ನು ಚೇತೇಶ್ವರ ಪೂಜಾರ ತುಂಬಿದ್ದಾರೆ.

ಕಾನ್ಪುರ ಟೆಸ್ಟ್‍ನ ಅಂತಿಮ ದಿನದಲ್ಲಿ ಬೌಲಿಂಗ್ ಮಾಡುವಾಗ ವೇಗಿ ಇಶಾಂತ್ ಶರ್ಮಾ ತಮ್ಮ ಎಡಗೈನ ಕಿರುಬೆರಳಿಗೆ ಹಾಗೂ ರವೀಂದ್ರಾಜಾಡೇಜಾ ಅವರು ತಮ್ಮ ಬಲ ಮುಂದೋಳಿಗೆ ಗಾಯ ಮಾಡಿಕೊಂಡಿದ್ದು ಅವರು ಕೂಡ ಇನ್ನು ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಮುಂಬೈನಲ್ಲಿ ನಡೆಯುತ್ತಿರುವ 2ನೆ ಟೆಸ್ಟ್‍ನಿಂದ ಆಡುವ 11ರ ಬಳಗದಿಂದ ಹೊರಗುಳಿದಿದ್ದು ಅವರ ಸ್ಥಾನವನ್ನು ಮೊಹಮ್ಮದ್ ಸಿರಾಜ್ ಹಾಗೂ ಜಯಂತ್ ಯಾದವ್ ಅವರು ತುಂಬಿದ್ದಾರೆ. ಎರಡನೇ ಟೆಸ್ಟ್ ಪಂದ್ಯವು ಮಳೆಯಿಂದಾಗಿ ತಡವಾಗಿ ಆರಂಭಗೊಂಡಿತು.

Facebook Comments