ದಕ್ಷಿಣ ಆಫ್ರಿಕಾಕಕ್ಕೆ ಇನ್ನಿಂಗ್ಸ್ ಸೋಲು,ಸರಣಿ ವಶ ಪಡಿಸಿಕೊಂಡ ಭಾರತ

ಈ ಸುದ್ದಿಯನ್ನು ಶೇರ್ ಮಾಡಿ

ಪುಣೆ, ಅ.13- ಭಾರತ ಬೌಲರ್‍ಗಳು ಎಣೆದ ಬಲೆಯಲ್ಲಿ ಸಿಲುಕಿದ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‍ಮನ್‍ಗಳು ದ್ವಿತೀಯ ಟೆಸ್ಟ್‍ನಲ್ಲಿ ರನ್ ಗಳಿಸಲು ಪರದಾಡಿದ ಪರಿಣಾಮ ಇನ್ನಿಂಗ್ಸ್ ಸೋಲು ಅನುಭವಿಸಿದೆ. ಮೂರು ಟೆಸ್ಟ್ ಪಂದ್ಯಗಳಲ್ಲಿ ಭಾರತ ಈಗಾಗಲೇ 2-0 ಮುನ್ನಡೆ ಸಾಧಿಸಿರುವುದರಿಂದ ಇನ್ನೂ ಒಂದು ಪಂದ್ಯ ಉಳಿದಿರುವಂತೆ ಸರಣಿ ಜಯ ಸಾಧಿಸಿದೆ.

ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯ 3ನೆ ದಿನದಲ್ಲೇ ಜಯ ಸಾಧಿಸಿದ್ದ ಭಾರತ ತಂಡವು ದಕ್ಷಿಣ ಆಫ್ರಿಕಾದ ವಿರುದ್ಧ 4ನೇ ದಿನವೇ ಗೆಲುವಿನ ಸಂಭ್ರಮ ಕಾಣುವತತಿ ಹೆಜ್ಜೆ ಹಾಕಿದೆ. ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯ ಡಬಲ್ ಸೆಂಚುರಿ (254 * ರನ್) ಹಾಗೂ ಮಯಾಂಕ್ ಅಗರ್‍ವಾಲ್‍ರ (108 ರನ್) ನೆರವಿನಿಂದ 601 ರನ್ ಗಳಿಸಿ ದಕ್ಷಿಣ ಆಫ್ರಿಕಾವನ್ನು 275 ರನ್‍ಗಳಿಗೆ ಕಟ್ಟಿ ಹಾಕುವ ಮೂಲಕ 326 ರನ್‍ಗಳ ಮುನ್ನಡೆ ಸಾಧಿಸಿತುತಿ.

ಹರಿಣಗಳಿಗೆ ಆಘಾತ: ಎರಡನೇ ಇನ್ನಿಂಗ್ಸ್‍ನಲ್ಲಿ ತಾಳ್ಮೆಯುತ ಆಟ ಪ್ರದರ್ಶಿಸಿ ಪಂದ್ಯವನ್ನು ಡ್ರಾ ಮಾಡಿಕೊಳ್ಳಬೇಕೆಂಬ ಲೆಕ್ಕಾಚಾರದಲ್ಲಿದ್ದ ಹರಿಣಗಳ ನಾಯಕ ಡುಪ್ಲೆಸಿಸ್‍ಗೆ ಆರಂಭದಲ್ಲೇ ಭಾರತದ ವೇಗಿಗಳಾದ ಇಶಾಂತ್ ಶರ್ಮಾ, ಉಮೇಶ್‍ಯಾದವ್ ದೊಡ್ಡ ಆಘಾತ ನೀಡಿದರು.

ರನ್ ಖಾತೆಯನ್ನು ತೆರೆಯುವ ಮುನ್ನವೇ ಆರಂಭಿಕ ಆಟಗಾರ ಮಕ್ರಮ್‍ರನ್ನು ಎಲ್‍ಬಿಡಬ್ಲ್ಯು ಮಾಡಿದ ಇಶಾಂತ್‍ಶರ್ಮಾಗೆ ಸಾಥ್ ನೀಡುವಂತೆ ಬೌಲಿಂಗ್ ಮಾಡಿದ ಬುರೇನ್ (8 ರನ್, 2 ಬೌಂಡರಿ)ರಿಗೆ ಉಮೇಶ್ ಯಾದವ್ ಪೆವಿಲಿಯನ್ ಹಾದಿ ತೋರಿಸಿದರು.

ಅಶ್ವಿನ್ ಜಾದೂ: 21 ರನ್‍ಗಳಿಗೆ ಆರಂಭಿಕರಿಬ್ಬರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ದಕ್ಷಿಣ ಆಫ್ರಿಕಾಕ್ಕೆ ತುಸು ಚೇತರಿಕೆ ನೀಡುವಂತೆ ಬ್ಯಾಟ್ ಬೀಸಿದ ಡೀನ್ ಎಲ್ಗರ್ (48 ರನ್, 8 ಬೌಂಡರಿ) ಹಾಗೂ ನಾಯಕ ಡುಪ್ಲಿಸಿಸ್ (5 ರನ್) 3ನೆ ವಿಕೆಟ್‍ಗೆ 49 ರನ್‍ಗಳ ಜೊತೆಯಾಟ ನೀಡಿದರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಅಶ್ವಿನ್ ಯಶಸ್ವಿಯಾದ ನಂತರ ಮತೆತಿ ದಕ್ಷಿಣ ಅಫ್ರಿಕಾ ಇನ್ನಿಂಗ್ಸ್ ಸೋಲಿನ ಭೀತಿಗೆ ಸಿಲುಕಿತು.

ಭೋಜನ ವಿರಾಮದ ವೇಳೆಗೆ 74 ರನ್‍ಗಳನ್ನು ಗಳಿಸಿ 4 ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಅಫ್ರಿಕಾಕ್ಕೆ ಭೋಜನ ವಿರಾಮದ ಎರಡನೇ ಓವರ್‍ನಲ್ಲೇ ಸ್ಪಿನ್ನರ್ ರವೀಂದ್ರ ಜಾಡೇಜಾ ಸ್ಫೋಟಕ ಆಟಗಾರ ಕ್ಲಿಂಟನ್ ಡಿ ಕಾಕ್‍ರನ್ನು ಕ್ಲೀನ್ ಬೌಲ್ಡ್ ಮಾಡುವ ಹರಿಣಗಳ ಬ್ಯಾಟಿಂಗ್ ಜಂಘಾಬಲವನ್ನೇ ಅಡಗಿಸಿದರು. ಕೊನೆ ಹಂತದಲ್ಲಿ ಬುವಾಮಾ (38 ರನ್, 4 ಬೌಂಡರಿ, 1 ಸಿಕ್ಸರ್), ಫಿಲೆಂಡರ್ (37 ರನ್, 2 ಬೌಂಡರಿ, 2 ಸಿಕ್ಸರ್), ಕೇಶವ ಮಹಾರಾಜ (22 ರನ್, 3 ಬೌಂಡರಿ) ಹೋರಾಟ ತೋರಿದರೂ ಭಾರತದ ಬೌಲರ್‍ಗಳ ದಾಳಿಗೆ ನಲುಗಿ 189 ರನ್‍ಗಳಿಗೆ ಸರ್ವಪತನ ಕಂಡಿತು.

ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‍ನಲ್ಲಿ 326 ರನ್‍ಗಳ ಹಿನ್ನೆಡೆ ಅನುಭವಿಸಿದ್ದರಿಂದ ಕೊಹ್ಲಿ ಪಡೆ ವಿರುದ್ಧ ಇನ್ನು ಒಂದೂವರೆ ದಿನ ಬಾಕಿ ಇರುವಂತೆಯೇ 137 ರನ್‍ಗಳ ಇನ್ನಿಂಗ್ಸ್ ಸೋಲು ಕಂಡಿತು. ದ್ವಿತೀಯ ಇನ್ನಿಂಗ್ಸ್‍ನಲ್ಲಿ ಟೀಂ ಇಂಡಿಯಾ ಪರ ಉಮೇಶ್ ಯಾದವ್, ರವೀಂದ್ರಾ ಜಾಡೇಜಾ ತಲಾ 3 ವಿಕೆಟ್ ಕೆಡವಿದರೆ, ರವಿಚಂದ್ರನ್ ಅಶ್ವಿನ್ 2, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ ತಲಾ 1 ವಿಕೆಟ್ ಕಬಳಿಸಿದರು.

ಸಂಕ್ಷಿಪ್ತ ಸ್ಕೋರ್: ಭಾರತ ಮೊದಲ ಇನ್ನಿಂಗ್ಸ್ 601/5 ಡಿಕ್ಲೇರ್ಡ್
ದಕ್ಷಿಣ ಆಫ್ರಿಕಾ: ಪ್ರಥಮ ಇನ್ನಿಂಗ್ಸ್ 275, ಎರಡನೇ ಇನ್ನಿಂಗ್ಸ್ 189 ರನ್.
ಪಂದ್ಯ ಶ್ರೇಷ್ಠ: ವಿರಾಟ್ ಕೊಹ್ಲಿ

Facebook Comments