ಕುತೂಹಲ ಮೂಡಿಸಿರುವ ಭಾರತ-ವಿಂಡೀಸ್ ಪಂದ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಪೋರ್ಟ್ ಆಪ್ ಸ್ಪೇನ್,ಆ.11- ಇಂಡೋ- ವಿಂಡೀಸ್ ನಡುವೆ ಮೊದಲ ಏಕದಿನ ಪಂದ್ಯವು ಮಳೆಗೆ ಆಹುತಿಯಾಗಿದ್ದರೂ 2ನೆ ಪಂದ್ಯಕ್ಕೆ ಮಳೆರಾಯನ ಆತಂಕವಿಲ್ಲದಿರುವುದರಿಂದ ಸರಣಿಯಲ್ಲಿ ಮುನ್ನಡೆ ಸಾದಿಸಲು ಕೊಹ್ಲಿ ಹಾಗೂ ಜೇಸನ್ ಹೋಲ್ಡರ್ ಪಡೆಗಳು ಕಾತರದಿಂದಿದೆ.ಇಂದಿಲ್ಲಿ ನಡೆಯುವ ಪಂದ್ಯದಲ್ಲಿ ಹಲವಾರು ಮೈಲುಗಲ್ಲುಗಳು ಕೂಡ ನಿರ್ಮಾಣವಾಗುವುದರಿಂದ ಎರಡು ತಂಡಗಳ ಪ್ರೇಕ್ಷಕರು ಈ ಪಂದ್ಯವನ್ನು ವೀಕ್ಷಿಸಲು ತುದಿಗಾಲಲ್ಲಿ ನಿಂತಿದ್ದಾರೆ.

ವಿಂಡೀಸ್ ತಂಡದ ಬ್ಯಾಟಿಂಗ್ ದೈತ್ಯ ಕ್ರಿಸ್‍ಗೇಲ್ ಟೆಸ್ಟ್ ಕ್ರಿಕೆಟ್‍ಗೆ ಆಯ್ಕೆಯಾಗದಿರುವುದರಿಂದ ಏಕದಿನ ಸರಣಿಯ ನಂತರ ಕ್ರಿಕೆಟ್ ಜೀವನಕ್ಕೆ ಗುಡ್‍ಬೈ ಹೇಳಲಿದ್ದಾರೆ, ಅಲ್ಲದೆ ಗೇಲ್ ಇಂದು 300ನೇ ಏಕದಿನ ಪಂದ್ಯ ಆಡುವುದರಿಂದ ಅವರ ಅಭಿಮಾನಿಗಳು ಗೇಲ್ ಬ್ಯಾಟಿಂಗ್ ವೈಭವ್ಯವನ್ನು ಕಣ್ಣು ತುಂಬಿಕೊಳ್ಳಲು ಕಾತರದಿಂದಿದ್ದಾರೆ.

ವಿಂಡೀಸ್‍ನ ಆರಂಭಿಕ ಆಟಗಾರ ಶೇನ್ ಹೋಪ್ 58 ರನ್ ಗಳಿಸಿದರೆ ಭಾರತದ ವಿರುದ್ಧ 500 ರನ್ ಗಳಿಸುತ್ತಾರೆ.  ಭಾರತ ತಂಡವು 2007 ವಿಶ್ವಕಪ್‍ನಲ್ಲಿ ಬರ್ಮೂಡಾ ವಿರುದ್ಧ ಗರಿಷ್ಠ 413 ರನ್ ಗಳಿಸಿದ್ದು ಇದೇ ಪಿಚ್‍ನಲ್ಲಿದ್ದಾಗಿದ್ದರಿಂದ ಇಂದು ಕೂಡ ರನ್‍ಗಳ ಸುರಿಮಳೆಯಾಗುವ ನಿರೀಕ್ಷೆ ಇದೆ. ಭಾರತದ ಖ್ಯಾತ ಸ್ಪಿನ್ನರ್ ಯಜುವೇಂದ್ರ ಚಹಾಲ್ ಆಡುತ್ತಿರುವ 50ನೆ ಏಕದಿನ ಪಂದ್ಯ.

ಟೀಂ ಇಂಡಿಯಾದ ಸ್ಪಿನ್ನರ್ ಕುಲ್‍ದೀಪ್ 6 ವಿಕೆಟ್‍ಗಳನ್ನು ಕಬಳಿಸಿದರೆ ಏಕದಿನದಲ್ಲಿ 100 ವಿಕೆಟ್ ಕೆಡವಿದ ಸಾಧನೆ ಮಾಡಲಿದ್ದಾರೆ. ವೆಸ್ಟ್‍ಇಂಡೀಸ್ ವಿರುದ್ಧ ಏಕದಿನದಲ್ಲಿ 2000 ರನ್ ಗಳಿಸಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ 88 ರನ್ ಗಳು ಬೇಕಾಗಿದೆ. ಈಗಾಗಲೇ ಕೊಹ್ಲಿ ಶ್ರೀಲಂಕಾ ವಿರುದ್ಧ 2 ಸಾವಿರ ರನ್ ಗಳಿಸಿದ್ದಾರೆ.

ವೆಸ್ಟ್‍ಇಂಡೀಸ್ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‍ಮನ್ ಎಂಬ ಕೀರ್ತಿಗೆ ಭಾಜನರಾಗಲು 19 ರನ್‍ಗಳಿಸಬೇಕಾಗಿದೆ.  ಟೀಂ ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ 11 ರನ್ ಗಳಿಸಿದರೆ ವೆಸ್ಟ್‍ಇಂಡೀಸ್ ವಿರುದ್ಧ 500 ರನ್ ದಾಖಲಿಸಿದ ಬ್ಯಾಟ್ಸ್‍ಮನ್ ಪಟ್ಟಿಗೆ ಸೇರಲಿದ್ದಾರೆ.

ಇಂಗ್ಲೆಂಡ್‍ನಲ್ಲಿ ನಡೆದ ವಿಶ್ವಕಪ್‍ನಲ್ಲಿ ವೆಸ್ಟ್‍ಇಂಡೀಸ್ ವಿರುದ್ಧ ಅಭೂತಪೂರ್ವ ಗೆಲುವು ಗಳಿಸಿರುವ ವಿರಾಟ್ ಕೊಹ್ಲಿ ಪಡೆಯೇ ಪಂದ್ಯ ಗೆಲ್ಲುವ ನೆಚ್ಚಿನ ತಂಡವಾಗಿದ್ದರೂ ಕೂಡ ತವರಿನ ಬೆಂಬಲವಿರುವ ಜಸನ್‍ಹೋಲ್ಡರ್ ಪಡೆಯು ಟ್ವೆಂಟಿ-20 ಸರಣಿ ಸೋಲಿಗೆ ಪ್ರತೀಕಾರ ಹೇಳಲು ಕಾತರದಿಂದಿದ್ದಾರೆ.

Facebook Comments