ಭಾರತ-ವಿಂಡೀಸ್ 2ನೆ ಹಣಾಹಣಿಗೆ ಅಖಾಡ ಸಜ್ಜು

ಈ ಸುದ್ದಿಯನ್ನು ಶೇರ್ ಮಾಡಿ

India--west-indies
ವಿಶಾಖಪಟ್ಟಣ, ಅ.23- ಮೊದಲ ಏಕದಿನ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ವಿಂಡೀಸ್‍ಅನ್ನು ಬಗ್ಗುಬಡಿದಿರುವ ವಿರಾಟ್ ಪಡೆ ಇಲ್ಲಿ ನಡೆಯಲಿರುವ ಸರಣಿಯ ಎರಡನೆ ಹಣಾಹಣಿಯಲ್ಲಿ ಮತ್ತಷ್ಟು ಹುಮ್ಮಸ್ಸಿನಿಂದ ಕಣಕ್ಕಿಳಿಯಲು ಸಜ್ಜಾಗಿದೆ. ಮೊದಲ ಏಕದಿನ ಪಂದ್ಯದಲ್ಲಿ ಅತ್ಯುತ್ತಮ ಮೊತ್ತ ಕಲೆ ಹಾಕಿ ಭಾರತಕ್ಕೆ ಸವಾಲೊಡ್ಡಿ ಸೋಲನುಭವಿಸಿದ್ದ ವಿಂಡೀಸ್ ದೈತ್ಯರು ನಾಳಿನ ಎರಡನೆ ದಿನದ ಕದನದಲ್ಲಿ ಟೀಂ ಇಂಡಿಯಾ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಹೀಗಾಗಿ ನಾಳಿನ ಪಂದ್ಯವೂ ಸಹ ಕದನ ಕುತೂಹಲ ಕೆರಳಿಸಿದೆ.

ವಿರಾಟ್ ಕೊಹ್ಲಿ ತಮ್ಮ ರನ್‍ಗಳ ಖಾತೆಗೆ ಇನ್ನು 81 ರನ್‍ಗಳನ್ನು ಸೇರಿಸಿದರೆ ಏಕದಿನ ಪಂದ್ಯಾವಳಿಯಲ್ಲಿ 10 ಸಾವಿರ ರನ್‍ಗಳನ್ನು ಅತಿ ವೇಗದಲ್ಲಿ ಗಳಿಸಿದ ಸಿಡಿಲಬ್ಬರದ ಬ್ಯಾಟ್ಸ್‍ಮನ್ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ. ಅಲ್ಲದೆ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ವಿಶ್ವದಾಖಲೆಯನ್ನು ಹಿಂದಿಕ್ಕಲಿದ್ದಾರೆ. ಹೀಗಾಗಿ ನಾಳಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಾರಾ ಆಕರ್ಷಣೆಯಾಗಿದ್ದು, ಅವರು ಗಳಿಸುವ ರನ್‍ನತ್ತ ಕ್ರಿಕೆಟ್ ಪ್ರೇಮಿಗಳ ಚಿತ್ತ ನೆಟ್ಟಿದೆ.

259 ಇನ್ನಿಂಗ್ಸ್ ಮೂಲಕ ಸಚಿನ್10 ಸಾವಿರ ರನ್ ಗಳಿಸಿದ್ದರು. ಆದರೆ, ರನ್ ಮಾಂತ್ರಿಕ ವಿರಾಟ್ ಕೊಹ್ಲಿ 204 ಪಂದ್ಯಗಳನ್ನು ಆಡಿದ್ದು, ಹೊಸ ದಾಖಲೆಗೆ ಪಾತ್ರರಾಗಲಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ಉಪನಾಯಕ ರೋಹಿತ್ ಶರ್ಮ ಭರ್ಜರಿ 152 ರನ್‍ಗಳನ್ನು ಸಿಡಿಸಿ ಆತಿಥೇಯರಿಗೆ ಸಿಂಹಸ್ವಪ್ನವಾಗಿದ್ದರು. ನಾಳೆಯೂ ಕೂಡ ಅವರ ಬ್ಯಾಟಿಂಗ್ ಅಬ್ಬರ ಮುಂದುವರಿಯುವ ಬಗ್ಗೆ ಅಭಿಮಾನಿಗಳು ಕಾತರರಾಗಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ಭಾರತ ಬೌಲಿಂಗ್ ಮತ್ತು ಬ್ಯಾಟಿಂಗ್‍ನಲ್ಲಿ ಸಾಂಘಿಕ ಪ್ರದರ್ಶನ ನೀಡಿ ವಿಂಡೀಸ್ ದೈತ್ಯರನ್ನು ಮಣಿಸಿದ್ದರು. ಈ ಪಂದ್ಯದ ಸೋಲಿನಿಂದ ತೀವ್ರ ನಿರಾಸೆಯಾಗಿರುವ ಹೋಲ್ಡರ್ ಪಡೆ ನಾಳೆ ಪುಟಿದೆದ್ದು ಭಾರತದ ವಿರುದ್ಧ ಸೇಡು ತೀರಿಸಿಕೊಂಡು ಸಮಬಲ ಸಾಧಿಸುವ ಅತ್ಯುತ್ಸಾಹದಲ್ಲಿದೆ.

# ತಂಡಗಳ ಆಟಗಾರರ ವಿವರ:
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮ, ಶಿಖರ್ ದವನ್, ಅಂಬಟ್ಟಿ ರಾಯ್ಡು, ಮನೀಷ್ ಪಾಂಡೆ, ಎಂ.ಎಸ್.ಧೋನಿ, ರಿಷಬ್ ಪಂಥ್, ರವೀಂದ್ರ ಜಡೇಜ, ಯಜುವೇಂದ್ರ ಚಾಹಲ್, ಕುಲ್‍ದೀಪ್ ಯಾದವ್, ಮಹಮ್ಮದ್ ಶಮಿ, ಕೆ.ಖಲೀಲ್ ಅಹಮ್ಮದ್, ಉಮೇಶ್ ಯಾದವ್ ಮತ್ತು ಕೆ.ಎಲ್.ರಾಹುಲ್.

ವೆಸ್ಟ್ ಇಂಡೀಸ್: ಜಾಸನ್ ಹೋಲ್ಡರ್ (ನಾಯಕ), ಫಬಿಯಾನ್ ಅಲೆನ್, ಸುನಿಲ್ ಆಂಬ್ರೀಸ್, ದೇವೇಂದ್ರ ಬಿಶೂ, ಚಂದ್ರಪಾಲ್ ಹೇಮರಾಜ್, ಶಿಮ್ರೋನ್ ಹೆಟ್‍ಮೇರ್, ಶಾಹೈ ಹೋಪ್, ಆಲ್ಜರಿ ಜೋಸೆಫ್, ಕೀರನ್ ಕೋವೆಲ್, ಅಶ್ಲೆನರ್ಸ್, ಕೀಮೋಪಾಲ್, ರೌಮನ್ ಪೋವೆಲ್, ಕರ್‍ಮರ್ ರೋಚ್, ಮಾರ್ಲೋನ್ ಸ್ಯಾಮ್ಯುಯಲ್ಸ್, ಒಶಾನೆ ಥಾಮಸ್, ಒಬೆದ್ ಮ್ಯಾಕ್ ಕೋಯಿ.
ಪಂದ್ಯ ಆರಂಭ: ಮಧ್ಯಾಹ್ನ 1.30.

Facebook Comments