ಕುತೂಹಲ ಕೆರಳಿಸಿರುವ ಭಾರತ-ವಿಂಡೀಸ್ ಟೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ನರ್ತ್‍ಸೌಂಡ್, ಆ. 21- ಟ್ವೆಂಟಿ-20 ಹಾಗೂ ಏಕದಿನ ಸರಣಿಗಳನ್ನು ಗೆದ್ದು ಬೀಗುತ್ತಿರುವ ವಿರಾಟ್ ಕೊಹ್ಲಿ ಸಾರಥ್ಯದ ಟೀಂ ಇಂಡಿಯಾವು ನಾಳೆ ಇಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತನ್ನ ಮೊದಲ ವಿಶ್ವ ಟೆಸ್ಟ್ ಪಂದ್ಯವನ್ನು ಆಡಲಿದೆ.

ಟೆಸ್ಟ್‍ನಲ್ಲಿ ವಿಶ್ವಕಪ್‍ನಲ್ಲಿ ಈಗಾಗಲೇ ಶ್ರೀಲಂಕಾ ತಂಡವು 60 ಪಾಯಿಂಟ್ಸ್‍ಗಳನ್ನು ಗಳಿಸುವ ಮೂಲಕ ಅಗ್ರಸ್ಥಾಯಿಯಾಗಿದ್ದರೆ, ಆಸ್ಟ್ರೇಲಿಯಾ (32 ಪಾಯಿಂಟ್ಸ್), ವಿಶ್ವ ಚಾಂಪಿಯನ್ ಇಂಗ್ಲೆಂಡ್ (8 ಪಾಯಿಟ್ಸ್) ನಂತರದ ಸ್ಥಾನದಲ್ಲಿದೆ.

ನಾಳೆಯಿಂದ ನಡೆಯಲಿರುವ ವೆಸ್ಟ್ ಇಂಡೀಸ್ ವಿಶ್ವ ಟೆಸ್ಟ್ ಪಂದ್ಯದ ಮೊದಲ ಸರಣಿಯನ್ನು ಗೆಲ್ಲುವ ಮೂಲಕ ಟಾಪ್ 1 ಸ್ಥಾನಕ್ಕೇರಲು ಕಾತರದಿಂದಿದೆ.

Facebook Comments