ಹಲವು ದಾಖಲೆಗಳಿಗೆ ಸಾಕ್ಷಿಯಾಗಲಿರುವ ಗ್ರೀನ್‍ಫೀಲ್ಡ್ ಮೈದಾನ, ಸರಣಿ ಗೆಲುವತ್ತ ಕೊಹ್ಲಿ ಚಿತ್ತ

ಈ ಸುದ್ದಿಯನ್ನು ಶೇರ್ ಮಾಡಿ

ತಿರುವನಂತಪುರ, ಡಿ.8- ಮುತ್ತಿನನಗರಿ ಹೈದ್ರಾಬಾದ್‍ನಲ್ಲಿ ನಡೆದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯ ವೀರಾವೇಶ ಹೋರಾಟ(94 ರನ್) ದಿಂದ 6 ವಿಕೆಟ್‍ಗಳಿಂದ ಜಯಸಾಧಿಸಿರುವ ಟೀಂ ಇಂಡಿಯಾ ಇಂದಿನ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳುವತ್ತ ಚಿತ್ತ ಹರಿಸಿದ್ದರೆ, ಮತ್ತೊಂದೆಡೆ ಸರಣಿಯನ್ನು ಉಳಿಸಿಕೊಳ್ಳಲು ಕಿರಾನ್ ಪೋಲಾರ್ಡ್ ಸಾರಥ್ಯದ ವೆಸ್ಟ್ ಇಂಡೀಸ್ ಹವಣಿಸುತ್ತಿದೆ.

ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯ ಮೊದ ಪಂದ್ಯದಲ್ಲಿ ಕೊಹ್ಲಿ ಹಲವು ದಾಖಲೆಗಳನ್ನು ಪುಡಿಗಟ್ಟಿದ್ದು ಗ್ರಿನ್‍ಫೀಲ್ಡ್‍ನಲ್ಲೂ ಹಲವು ಆಟಗಾರರು ದಾಖಲೆ ನಿರ್ಮಿಸಲು ಹಣಿಸುತ್ತಿದ್ದಾರೆ.  * 2017ರ ನಂತರ ಪಂದ್ಯ ಗೆಲ್ಲಲು ಹಾತೊರೆಯುತ್ತಿರುವ ವಿಂಡೀಸ್ ಸತತ 8ನೆ ಸೋಲಿನಿಂದ ತಪ್ಪಿಸಿಕೊಳ್ಳಲು ಪರದಾಡುತ್ತಿದೆ.

ಭಾರತದ ಯುವ ಬೌಲರ್ ದೀಪಕ್ ಚಹರ್ 7 ವಿಕೆಟ್‍ಗಳನ್ನು ಪಡೆಯುವ ಮೂಲಕ ಚುಟುಕು ಕ್ರಿಕೆಟ್‍ನಲ್ಲಿ 100 ವಿಕೆಟ್ ಕಬಳಿಸಲು ಕಾತರಿಸುತ್ತಿದ್ದಾರೆ.  ಚುಟುಕು ಕ್ರಿಕೆಟ್‍ನಲ್ಲಿ ಸಹಸ್ರ ರನ್ ಗಳಿಸಲು ವಿಂಡೀಸ್ ನಾಯಕ ಕೀರಾನ್ ಪೋಲಾರ್ಡ್‍ಗೆ 7 ರನ್ ಗಳು ಬೇಕಾಗಿದ್ದು, ಈಗಾಗಲೇ ವಿಂಡೀಸ್‍ನ ಬ್ಯಾಟಿಂಗ್ ದೈತ್ಯ ಕ್ರಿಸ್‍ಗೇಲ್, ಮಾರ್ಲೋನ್ ಸ್ಯಾಮುಯ ಲ್ಸ್, ಡ್ವೇನ್ ಬ್ರಾವೋ 1000 ರನ್‍ಗಳನ್ನು ಗಳಿಸಿದ್ದಾರೆ.  ವಿಂಡೀಸ್‍ನ ಆರಂಭಿಕ ಆಟಗಾರ ಲಿಂಡ್ಲೆ ಸಿಮನ್ಸ್ ಇಂದಿನ ಪಂದ್ಯದಲ್ಲಿ 84 ರನ್ ಗಳಿಸಿ 1000 ರನ್ ಗಳಿಸಲು ಕಾತರದಿಂದಿದ್ದಾರೆ.

ಸ್ವದೇಶದಲ್ಲಿ ಸಹಸ್ರ ರನ್ ಗಳಿಸಲು ವಿರಾಟ್ ಕೊಹ್ಲಿಗೆ 25 ರನ್‍ಗಳು ಬೇಕಾಗಿದ್ದು, ಈ ರೀತಿ ಗಳಿಸಿದ ಮೊದಲ ಭಾರತೀಯನಾಗಿ ಗುರುತಿಸಿಕೊಳ್ಳಲಿದ್ದಾರೆ. ನ್ಯೂಜಿಲೆಂಡ್‍ನ ಮಾರ್ಟಿನ್ ಗುಪ್ಟಿಲ್ (1430 ರನ್) ಹಾಗೂ ಕಾಲಿನ್ ಮುನ್ರೊ (1000) ಸ್ವದೇಶದಲ್ಲಿ ಸಹಸ್ರ ರನ್ ಗಳಿಸಿರುವ ಇತರ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ.  ಇಂದಿನ ಪಂದ್ಯದಲ್ಲಿ ಭಾರತದ ಉಪನಾಯಕ ರೋಹಿತ್ ಶರ್ಮಾ 8 ಸಿಕ್ಸರ್ ಸಿಡಿಸಿದರೆ ಟ್ವೆಂಟಿ-20 ಇತಿಹಾಸದಲ್ಲೇ ಗರಿಷ್ಠ ಸಿಕ್ಸರ್ ಗಳಿಸಿದ ಕೀರ್ತಿಗೆ ಭಾಜನರಾಗಲಿದ್ದಾರೆ, ರೋಹಿತ್ ಈಗಾಗಲೇ ವಿಂಡೀಸ್ ವಿರುದ್ಧ 24 ಸಿಕ್ಸರ್ ಸಿಡಿಸಿದ್ದರೆ, ಐರ್ಲೆಂಡ್‍ನ ಹಜ್ರತುಲ್ಲಾ ಜಾಜಾಯ್ 31 ಸಿಕ್ಸರ್ ಸಿಡಿಸಿದ್ದಾರೆ.

ಭಾರತ ನೆಲದಲ್ಲಿ ಚುಟುಕು ಕ್ರಿಕೆಟ್‍ನಲ್ಲಿ 50 ಸಿಕ್ಸರ್ ಸಿಡಿಸಲು ರೋಹಿತ್ ಗೆ 6 ಸಿಕ್ಸರ್‍ಗಳು ಬೇಕು, ನ್ಯೂಜಿಲೆಂಡ್‍ನ ಗುಪ್ಟಿಲ್ ಹಾಗೂ ಮುನ್ರೊ ಕ್ರಮವಾಗಿ 77 ಹಾಗೂ 75 ಸಿಕ್ಸರ್‍ಗಳನ್ನು ಸಿಡಿಸಿದ್ದಾರೆ.  ಟ್ವೆಂಟಿ-20 ಇತಿಹಾಸದಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಗುರುತಿಸಿಕೊಳ್ಳಲು ಚಹಾಲ್‍ಗೆ 1 ವಿಕೆಟ್ ಬೇಕು, ಈಗಾಗಲೇ ಅವರು ಈ ಮಾದರಿಯಲ್ಲಿ 52 ವಿಕೆಟ್ ಕಬಳಿಸಿದ್ದಾರೆ. ಅಶ್ವಿನ್ ಕೂಡ 52 ವಿಕೆಟ್ ಕೆಡವಿದ್ದಾರೆ

ವರ್ಷವೊಂದರಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಎಂಬ ಕೀರ್ತಿಗೆ ಭಾಜನರಾಗಲು ದೀಪಕ್‍ಚಹರ್‍ಗೆ 5 ವಿಕೆಟ್‍ಗಳು ಬೇಕು, ಈ ವರ್ಷ ಅವರು ಈಗಾಗಲೇ 53 ವಿಕೆಟ್‍ಗಳನ್ನು ಕೆಡವಿದ್ದರೆ, 2016ರಲ್ಲಿ ಭಾರತದ ವೇಗಿ ಜಸ್‍ಪ್ರೀತ್‍ಬೂಮ್ರಾ 57 ವಿಕೆಟ್‍ಗಳನ್ನು ಕಬಳಿಸಿದ್ದಾರೆ.

Facebook Comments

Sri Raghav

Admin