ಭಾರತ-ವಿಂಡೀಸ್ ಪಂದ್ಯಕ್ಕೆ ವರುಣನ ಕಾಟ..?

ಈ ಸುದ್ದಿಯನ್ನು ಶೇರ್ ಮಾಡಿ

ಮ್ಯಾನ್‍ಚೆಸ್ಟರ್, ಜೂ.26- ನ್ಯೂಜಿಲೆಂಡ್ ಹಾಗೂ ಭಾರತ ನಡುವಿನ ಪಂದ್ಯವು ಮಳೆಯಲ್ಲಿ ಕೊಚ್ಚಿ ಹೋಗುವ ಮೂಲಕ ಭಾರತೀಯ ಕ್ರೀಡಾ ಅಭಿಮಾನಿಗಳನ್ನು ನಿರಾಸೆಯಲ್ಲಿ ಮುಳುಗಿಸಿದ್ದ ವರುಣನ ನಾಳೆ ವಿಂಡೀಸ್ ವಿರುದ್ಧ ನಡೆಯುವ ಪಂದ್ಯದಲ್ಲೂ ಕಾಡಲಿದ್ದಾನೆ.

ಮ್ಯಾನ್‍ಚೆಸ್ಟರ್‍ನಲ್ಲಿ ಭಾನುವಾರದಿಂದ ಇಬ್ಬನಿ ತುಂಬಿದ ಮಂಜು ಮುಸುಕಿದ್ದು ಆಗಾಗ್ಗೆ ತುಂತುರು ಹನಿಗಳು ಜಿನುಗುತ್ತಿವೆ, ನಿನ್ನೆ ಕೂಡ ದಟ್ಟ ಮೋಡಗಳು ಆವರಿಸಿದ್ದರಿಂದ ಬೆಳಕಿನ ಕೊರತೆಯಿಂದಾಗಿ ಭಾರತ ಹಾಗೂ ವಿಂಡೀಸ್ ಆಟಗಾರರು ನೆಟ್ ಪ್ರಾಕ್ಟೀಸ್ ನಡೆಸದೆ ಡ್ರೆಸಿಂಗ್‍ರೂಮ್‍ನಲ್ಲೇ ಉಳಿಯುವಂತಾಯಿತು.

ನಾಳೆಯ ವೇಳೆಗೆ ಮೋಡ ಸರಿದು ಸೂರ್ಯ ಪ್ರಖರತೆ ಹೆಚ್ಚಾಗಿ ಪಂದ್ಯ ಆಡಲು ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತದೆ ಎಂದು ಅಂದಾಜಿಸಲಾಗುತ್ತಿದೆಯಾದರೂ ಒಂದು ವೇಳೆ ಪಂದ್ಯ ನಿಂತು ಟೈನಲ್ಲಿ ಅಂತ್ಯಗೊಂಡರೆ ಭಾರತ ತಂಡವು ಸೆಮಿಫೈನಲ್‍ಗೆ ಎಂಟ್ರಿ ಆಗಲು ಇಂಗ್ಲೆಂಡ್,ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಎದುರಿನ ಪಂದ್ಯದ ಫಲಿತಾಂಶವನ್ನು ಕಾಯಬೇಕಾಗುತ್ತದೆ.

ಭಾರತಕ್ಕಿಂತ ವಿಂಡೀಸ್‍ಗೆ ನಾಳೆಯ ಪಂದ್ಯ ಪ್ರಮುಖವಾಗಿದ್ದು ಒಂದು ವೇಳೆ ಪಂದ್ಯ ರದ್ದಾದರೆ ಅಥವಾ ವಿರಾಟ್ ಕೊಹ್ಲಿ ಪಡೆ ಜಯಿಸಿದರೆ ವಿಂಡೀಸ್‍ನ ಸೆಮಿ ಕನಸು ಕಮರಿಹೋಗಲಿದೆ. ಭಾರತ ತಂಡದ ಬ್ಯಾಟ್ಸ್‍ಮನ್‍ಗಳು ಆಫ್ಘಾನ್‍ನ ಬೌಲಿಂಗ್ ಎದುರು ತಿಣುಕಾಡಿ 224 ರನ್‍ಗಳನ್ನು ಗಳಿಸಲಷ್ಟೇ ಶಕ್ತವಾಗಿದ್ದರು ಕೂಡ ವಿಂಡೀಸ್‍ನ ವೇಗದ ಬೌಲಿಂಗ್ ಎದುರು ಲೀಲಾಜಾಲವಾಗಿ ರನ್ ಕದಿಯುವಂತಹ ಚಾಣಾಕ್ಷತನವನ್ನು ರೋಹಿತ್‍ಶರ್ಮಾ, ವಿರಾಟ್‍ಕೊಹ್ಲಿ ಹೊಂದಿದ್ದಾರೆ.

ವಿಂಡೀಸ್‍ನಲ್ಲೂ ಕೂಡ ಕ್ರಿಸ್‍ಗೇಲ್, ಹಿಟ್ಮೇರ್‍ರಂತಹ ಘಟಾನುಘಟಿ ಬ್ಯಾಟ್ಸ್‍ಮನ್‍ಗಳಿದ್ದು ಭಾರತದ ವೇಗಿಗಳಾದ ಮೊಹಮ್ಮದ್ ಶಮಿ, ಜಸ್‍ಪ್ರೀತ್ ಬೂಮ್ರಾ ಹಾಗೂ ಸ್ಪಿನ್ ದಾಳಿಯನ್ನು ಎದುರಿಸಿ ಭಾರತವನ್ನು ಸೋಲಿಸುವ ರಣತಂತ್ರವನ್ನು ವಿಂಡೀಸ್ ನಾಯಕ ಜಸ್ಟಿನ್À ಹೋಲ್ಡರ್ ರೂಪಿಸಿದ್ದಾರೆ.

ವಿಂಡೀಸ್ ಹಾಗೂ ಭಾರತ ತಂಡವು ವಿಶ್ವಕಪ್ ಇತಿಹಾಸದಲ್ಲಿ ಕುತೂಹಲ ಮೂಡಿಸಿದ್ದರೂ ಕೂಡ ಭಾರತ ತಂಡವೇ ಹೆಚ್ಚು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು ನಾಳೆಯ ಪಂದ್ಯವನ್ನು ಕೂಡ ಗೆಲ್ಲುವ ಹುಮ್ಮಸ್ಸಿನಲ್ಲಿ ವಿರಾಟ್ ಪಡೆ ಇದ್ದರೆ, ಮಾಡು ಇಲ್ಲ ಮಡಿಯಂತಿರುವ ಪಂದ್ಯವನ್ನು ಗೆಲ್ಲಲೇಬೇಕೆಂಬ ಹುಮ್ಮಸ್ಸಿನಲ್ಲಿ ಹೋಲ್ಡರ್ ಪಡೆ ಇದ್ದು, ಅದಕ್ಕೆ ವರುಣನ ಅಪಕೃಪೆ ಆಗದಿರಲಿ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ