ಭಾರತ ಹಿಂದೂ ರಾಷ್ಟ್ರ ಏಕಾಗಬಾರದು..? ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಲೇಖನ

ಈ ಸುದ್ದಿಯನ್ನು ಶೇರ್ ಮಾಡಿ

ಕ್ರೈಸ್ತ ಮತ್ತು ಇಸ್ಲಾಂ ನಂತರ ಜಗತ್ತಿನ ಮೂರನೆ ಬೃಹತ್ ಧರ್ಮವಾದ ಹಿಂದುತ್ವ ವಿಶ್ವಮಾನ್ಯತೆ ಗಳಿಸಿದೆ. ಭಾರತದ ಭವ್ಯ ಹಿಂದು ಸಂಸ್ಕøತಿಗೆ ಪುರಾತನ ಇತಿಹಾಸವಿದೆ. ಹಿಂದೂ ನಾಗರಿಕತೆ 5000 ವರ್ಷಗಳಷ್ಟು ಪ್ರಾಚೀನವಾದುದು. ವೇದ-ಪುರಾಣ-ಪುಣ್ಯಕಥೆಗಳಲ್ಲಿ ಹಿಂದು ತತ್ವದ ಮಹತ್ವ ಸಾರಲಾಗಿದೆ.

ಭಾರತಕ್ಕೆ ಹಿಂದೂಸ್ತಾನ ಎಂಬ ಮತ್ತೊಂದು ಅನ್ವರ್ಥನಾಮವಿದೆ. ಹಿಂದು ಧರ್ಮದ ಸಾರ, ತತ್ತ್ವ ಸಂದೇಶಗಳು ಅನೇಕ ದೇಶಗಳಿಗೆ ಅದರ್ಶ ಮತ್ತು ಅನುಕರಣೀಯವಾಗಿದೆ. ಲೋಕಮನ್ನಣೆಗೆ ಪಾತ್ರವಾಗಿರುವ ಭಾರತ ಹಿಂದೂ ರಾಷ್ಟ್ರ ಏಕಾಗಬಾರದು ಎಂಬ ಪ್ರಶ್ನೆ ಈಗಲೂ ಪ್ರಸ್ತುತ.

ಈ ವಿಷಯದ ಬಗ್ಗೆ ಚರ್ಚೆ-ಸಮಾಲೋಚನೆಗಳು ಹಿಂದಿನಿಂದಲೂ ಮತ್ತು ಈಗಲೂ ನಡೆಯುತ್ತಲೇ ಇವೆ. ಈ ಸಂದರ್ಭದಲ್ಲೇ ಇಂಗ್ಲೆಂಡ್‍ನಲ್ಲಿ ವಕೀಲರಾಗಿರುವ ಮಹಾ ಮೇಧಾವಿ ಪಾಕಿಸ್ತಾನ ಮೂಲದ ಖಾಲಿದ್ ಉಮರ್ ಅವರು ತಮ್ಮ ಫೆÉೀಸ್‍ಬುಕ್ ಅಕೌಂಟ್‍ನಲ್ಲಿ ಬರೆದಿರುವ ಲೇಖನವೊಂದು ವಿಶೇಷ ಗಮನ ಸೆಳೆದಿದೆ. ಬ್ಯಾರಿಸ್ಟರ್ ಖಾಲಿದ್ ಉಮರ್ ಅವರ ಎಫ್‍ಬಿ ಆರ್ಟಿಕಲ್‍ನ ಯಥಾವತ್ ಕನ್ನಡ ಅನುವಾದ ಇಲ್ಲಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಾರ್ಟಿ ಭಾರತವನ್ನು ಹಿಂದು ರಾಷ್ಟ್ರವನ್ನಾಗಿ ಮಾಡಲು ಹವಣಿಸುತ್ತಿದ್ದಾರೆ ಎಂಬ ಆರೋಪಗಳಿವೆ. ಇದು ಅವರ ಇರಾದೆಯಾಗಿದ್ದರೆ, ಹಿಂದೂಗಳ ನೆಲೆಯಾದ ಭಾರತವು ಹಿಂದು ರಾಷ್ಟ್ರ ಏಕಾಗಬಾರದು ಎಂಬುದು ನನ್ನ ಪ್ರಶ್ನೆ. ಇದಕ್ಕೆ ನಾನು ಈ ಕೆಳಕಂಡಂತೆ ನನ್ನ ತರ್ಕ ಮತ್ತು ವಿಚಾರಧಾರೆಯನ್ನು ಮಂಡಿಸುತ್ತಿದ್ದೇನೆ.

5000 ವರ್ಷಗಳಷ್ಟು ಪ್ರಾಚೀನ ನಾಗರಿಕತೆ ಹೊಂದಿರುವ ಭರತ ವರ್ಷ (ಭರತಖಂಡ) ವಿಶ್ವದ ಎಲ್ಲ ಹಿಂದು ಧರ್ಮೀಯರಲ್ಲಿ ಶೇ.95ರಷ್ಟು ಮಂದಿಗೆ ಆಶ್ರಯ ನೀಡುತ್ತಿರುವ ಮೂಲ ತಾಯ್ನಾಡು ಎಂಬುದನ್ನು ಇಲ್ಲಿ ವಿವರಿಸುವ ಅಗತ್ಯವಲ್ಲ. ಇದು ಸನಾತನ ಹಿಂದು ಧರ್ಮದ ಉಗಮ ಸ್ಥಾನ. ಹೀಗಾಗಿ ಭಾರತವು ಹಿಂದು ರಾಷ್ಟ್ರವಾಗಿ ತನ್ನ ಅಸ್ತಿತ್ವವನ್ನು ಗುರುತಿಸಿಕೊಳ್ಳಲು ಹಿಂಜರಿಯುವ ಅಗತ್ಯವಿಲ್ಲ.

ಕ್ರೈಸ್ತ ಮತ್ತು ಇಸ್ಲಾಂ ನಂತರ ಹಿಂದುತ್ವ ವಿಶ್ವದ ಮೂರನೆ ತೃತೀಯ ಬೃಹತ್ ಧರ್ಮ. ಆದರೆ, ಕ್ರೈಸ್ತ ಮತ್ತು ಇಸ್ಲಾಂ ಧರ್ಮದಂತೆ ಹಿಂದು ಧರ್ಮವು ವಿಶ್ವದ ಭೂಪಟದಲ್ಲಿ ಭೌಗೋಳಿಕವಾಗಿ ವ್ಯಾಪಕ ವಿಸ್ತರಣೆ ಆಗಿಲ್ಲ. ಈ ಜಗತ್ತಿನಲ್ಲಿರುವ ಎಲ್ಲ ಹಿಂದು ಜನಸಂಖ್ಯೆ ಶೇ.97ರಂದು ಮಂದಿ ವಿಶ್ವದ ಮೂರು ಹಿಂದು ಪ್ರಾಬಲ್ಯವಿರುವ ದೇಶಗಳಲ್ಲಿ ಅಂದರೆ ಭಾರತ, ಮಾರಿಷಸ್ ಮತ್ತು ನೇಪಾಳದಲ್ಲಿ ನೆಲೆಸಿದ್ದಾರೆ.

ಹಿಂದೂಸ್ತಾನ ಎಂಬ ಅನ್ವರ್ಥನಾಮ ಹೊಂದಿರುವ ಭಾರತದಲ್ಲಿ ಎಲ್ಲ ಪ್ರಮುಖ ಧರ್ಮಗಳು ಭೌಗೋಳಿಕವಾಗಿ ಅತಿ ಹೆಚ್ಚು ಸಾಂದ್ರತೆ ಹೊಂದಿವೆ ಎಂಬುದು ವಿಶೇಷ. ಹಿಂದುಗಳ ಜನಸಂಖ್ಯೆಯಲ್ಲಿ ಶೇ.95 ಮಂದಿ ಭಾರತದಲ್ಲೇ ವಾಸಿಸುತ್ತಿದ್ದರೆ, ಇಸ್ಲಾಂ ಧರ್ಮ ಉಗಮವಾದ ಅರಬ್‍ನಲ್ಲಿರುವ ಮುಸ್ಲಿಮರ ಸಂಖ್ಯೆ ಕೇವಲ 1.6ರಷ್ಟು ಮಾತ್ರ.

ವಿಶ್ವದಲ್ಲಿರುವ 53 ಮುಸ್ಲಿಂ (27 ರಾಷ್ಟ್ರಗಳಲ್ಲಿ ಇಸ್ಲಾಂ ಅಕೃತ ಭಾಷೆ) ಹಾಗೂ ಕ್ರೈಸ್ತರ ಪ್ರಾಬಲ್ಯವಿರುವ 100ಕ್ಕೂ ಹೆಚ್ಚು ದೇಶಗಳೊಂದಿಗೆ (15 ರಾಷ್ಟ್ರಗಳಲ್ಲಿ ಕ್ರೈಸ್ತಮತ ಅಕೃತ ಧರ್ಮ) ಲೆಫ್ಟ್-ಲಿಬರಲ್ ಬಣಗಳಿಗೆ ಯಾವುದೇ ಸಮಸ್ಯೆ ಇಲ್ಲ.

ಈ ಕ್ರೈಸ್ತ ರಾಷ್ಟ್ರಗಳಲ್ಲಿ ಇಂಗ್ಲೆಂಡ್, ಗ್ರೀಸ್, ಐಸ್‍ಲ್ಯಾಂಡ್, ನಾರ್ವೆ, ಹಂಗೇರಿ, ಡೆನ್ಮಾರ್ಕ್ ಮತ್ತು 6 ಬೌದ್ಧಧರ್ಮದ ದೇಶಗಳೂ ಸೇರಿವೆ. ಇಸ್ರೇಲ್ ಯಹೂದಿಯರ ದೇಶ. ಆದರೆ, ಭಾರತದ ವಿಷಯಕ್ಕೆ ಬಂದಾಗ, ಹಿಂದುತ್ವ ಏಕೆ ಭಾರತದ ರಾಷ್ಟ್ರಧರ್ಮವಾಗಲಿಲ್ಲ? ಎಂಬುದು ನನಗೆ ಅರ್ಥವಾಗದ ಸಂಗತಿಯಾಗಿದೆ. ಅಲ್ಲದೇ ಸಂಬಂಧದ ಕೇಳಿಬರುತ್ತಿರುವ ಪ್ರಶ್ನೆಗಳಿಗೆ ವ್ಯಕ್ತವಾಗುತ್ತಿರುವ ತರ್ಕ ಮತ್ತು ವಾದಗಳು ಕೂಡ ನನಗೆ ಅರ್ಥವಾಗುತ್ತಿಲ್ಲ.

ಭಾರತವನ್ನು ಹಿಂದು ರಾಷ್ಟ್ರವನ್ನಾಗಿ ಘೋಷಣೆ ಮಾಡಿದರೆ ದೇಶದಲ್ಲಿರುವ ಜಾತ್ಯತೀತಯ ಉದಾತ್ತ ತತ್ತ್ವಕ್ಕೆ ಇದರಿಂದ ಆಪಾಯವಾಗುವ ಯಾವುದೇ ಪುರಾವೆಗಳಿಲ್ಲ. ಭಾರತವು ಅನೇಕತೆಯಲ್ಲಿ ಏಕತೆಯ ತತ್ತ್ವ ಪಾಲಿಸುತ್ತಿದೆ. ಭಾರತದಲ್ಲಿ ಕ್ರೈಸ್ತರು, ಮುಸ್ಲಿಮರು, ಸಿಖ್ಖರು, ಬೌದ್ಧರು, ಪಾರ್ಸಿಗಳು, ಜೈನರು ಸೇರಿದಂತೆ ಅನೇಕ ಧರ್ಮಗಳು ಪೋಷಿಸಲ್ಪಟ್ಟು ಏಳಿಗೆ ಕಂಡಿವೆ. ಏಕೆಂದರೆ ಹಿಂದುಗಳು ಉದಾರಿಗಳು ಮತ್ತು ಔದಾರ್ಯ ಗುಣವುಳ್ಳವರು. ಇತರ ಧರ್ಮ ಮತ್ತು ಪಂಥಗಳ ಬಗ್ಗೆ ಹಿಂದುಗಳಿಗೆ ಯಾವುದೇ ಅಸಹನೆ ಅಥವಾ ಅಸಹಿಷ್ಣುತೆ ಇಲ್ಲ.

ಯಾವುದೇ ಧರ್ಮಕ್ಕೆ ಸೇರಿದ ಧಾರ್ಮಿಕ ಸ್ಥಳಗಳಿಗೆ ಹೋದರೂ ಅಲ್ಲಿ ಹಿಂದುಗಳು ಕಂಡುಬರುತ್ತಾರೆ. ಹಿಂದುತ್ವದ ಮತಾಂತರದ ಪರಿಕಲ್ಪನೆ ಅಲ್ಲಿ ಇರುವುದಿಲ್ಲ. ವಿಶ್ವದಲ್ಲಿ ಮುಸ್ಲಿಮರು ಮತ್ತು ಕ್ರೈಸ್ತರಿಗೆ ಧಾರ್ಮಿಕ ಕಿರುಕುಳ ನೀಡುತ್ತಿದ್ದಾರೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂಬ ಬಗ್ಗೆ ಧ್ವನಿ ಎತ್ತುತ್ತಿರುವ ಕೈಸ್ತ ಮತ್ತು ಮುಸ್ಲಿಂ ದೇಶಗಳು ಈ ಜಗತ್ತಿನಲ್ಲಿವೆ.

ಮ್ಯಾನ್ಮರ್, ಪ್ಯಾಲೆಸ್ತೈನ್, ಯೆಮೆನ್ ಇತ್ಯಾದಿ ದೇಶಗಳನ್ನು ಇಲ್ಲಿ ಉದಾಹರಣೆಯಾಗಿ ನೀಡಬಹುದು. ಆದರೆ ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನ ಅಥವಾ ಇತರ ಮುಸ್ಲಿಂ ದೇಶಗಳಲ್ಲಿರುವ ಹಿಂದುಗಳು ಮತ್ತು ಸಿಖ್ಖರು ಈ ರೀತಿ ಮಾಡಿಲ್ಲ! ಪಾಕಿಸ್ತಾನ ಸೇನೆಯಿಂದ 1971ರಲ್ಲಿ ನಡೆದ ನರಮೇಧದಲ್ಲಿ ಬಾಂಗ್ಲಾದೇಶದಲ್ಲಿದ್ದ ಹಿಂದುಗಳಿಗೆ ಏನಾಯಿತು ಎಂಬುದನ್ನು ಯಾರಾದರೂ ನೆನಪಿಸಿಕೊಳ್ಳುತ್ತಾರೆಯೇ? ಅಥವಾ ಜಮ್ಮು ಮತ್ತು ಕಾಶ್ಮೀರದಲ್ಲಿ 1998ರ ಹತ್ಯಾಕಾಂಡದಲ್ಲಿ ಕಾಶ್ಮೀರ ಪಂಡಿತರ ಮಾರಣಹೋಮದ ಬಗ್ಗೆ ಯಾರಿಗಾದರೂ ನೆನಪಿದೆಯೇ? ಅದೇ ರೀತಿ ಪಾಕಿಸ್ತಾನದಲ್ಲಿ ಹಿಂದುಗಳ ವ್ಯವಸ್ಥಿತ ನಿರ್ಮೂಲನೆ ಅಥವಾ ಅರಬ್ ಜಗತ್ತಿನಲ್ಲಿ ಉದಾಹರಣೆಗೆ ಮಸ್ಕಟ್‍ನಲ್ಲಿ ಐತಿಹಾಸಿಕ ದೇವಸ್ಥಾನಗಳು ಮತ್ತು ಹಿಂದುತ್ವ ನಿರ್ಮೂಲನೆ ಘಟನಾವಳಿಗಳು ಎಷ್ಟು ಜನರಿಗೆ ನೆನೆಪಿದೆ?

ಭಾರತದಲ್ಲಿ ಜಾ ತ್ಯತೀತ ತತ್ತ್ವವನ್ನು ವ್ಯಾಪಕವಾಗಿ ಅನುಸರಿಸಲಾಗುತ್ತಿದೆ. ಕೆಲವೊಮ್ಮೆ ಭಾರತದಲ್ಲೇ ಬಹು ಸಂಖ್ಯಾತ ಹಿಂದುಗಳ ವಿರುದ್ಧ ಧಾರ್ಮಿಕ ತಾರತಮ್ಯವನ್ನು ಅನುಸರಿಸಿದ ನಿದರ್ಶನಗಳು ಸಾಕಷ್ಟಿವೆ. ಹಜ್ ಯಾತ್ರಿಕರಿಗೆ ನೀಡುವ ಸಹಾಯಧನದ ಬಗ್ಗೆ ನಿಮಗೆ ಗೊತ್ತೇ? ಸುಮಾರು 20 ವರ್ಷಗಳಿಂದಲೂ ಅಂದರೆ 2000ರಿಂದಲೂ 1.5 ದಶಲಕ್ಷ ಮುಸ್ಲಿಮರಿಗೆ ಹಜ್ ಸಬ್ಸಿಡಿ ನೀಡಲಾಗಿದೆ.

ಇಡೀ ವಿಶ್ವದಲ್ಲಿ ಯಾವ ಜಾ ತ್ಯತೀತ ದೇಶವು ಒಂದು ಧರ್ಮದ ಧಾರ್ಮಿಕ ಪ್ರವಾಸಕ್ಕಾಗಿ ಇಷ್ಟು ದೊಡ್ಡ ಮೊತ್ತದ ಸಹಾಯಧನ ನೀಡಿದೆ? 2008ರಲ್ಲಿ ಪ್ರತಿಯೊಬ್ಬ ಮುಸ್ಲಿಂ ಯಾತ್ರಿಗೆ ಸರಾಸರಿ 1,000 ಡಾಲರ್ ವಿಮಾನಯಾನ ಪ್ರಯಾಣ ಸಬ್ಸಿಡಿ ನೀಡಲಾಗಿದೆ.

ಭಾರತ ಸರ್ಕಾರವು ಮುಸ್ಲಿಂ ನಾಗರಿಕರಿಗಾಗಿ ಧಾರ್ಮಿಕ ಪ್ರವಾಸಕ್ಕೆ ನೆರವು ಮತ್ತು ಸಹಕಾರ ನೀಡುತ್ತಿದ್ದರೆ, ಅತ್ತ ಸೌದಿ ಅರೇಬಿಯಾದಲ್ಲಿ ಹಿಂದೂ ದೇವಾಲಯಗಳನ್ನು ವಿಗ್ರಹ ಪೂಜೆ ಎಂದು ಖಂಡಿಸಲಾಗುತ್ತದೆ. ಇದೇ ಉದ್ದೇಶದಿಂದ ಮುಸ್ಲಿಂ ದೇಶಗಳಲ್ಲಿ ಹಿಂದುಗಳ ವಿರುದ್ಧ ವಹಬಿ ಉಗ್ರವಾದವನ್ನು ವ್ಯಾಪಕವಾಗಿ ವಿಸ್ತರಿಸಲಾಗುತ್ತಿದೆ.

ಸೌದಿ ಅರೇಬಿಯಾದಲ್ಲಿ ದೇವಸ್ಥಾನ ಮತ್ತು ಮಠ-ಮಂದಿರಗಳನ್ನು ನಿರ್ಮಿಸಲು ಹಿಂದುಗಳಿಗೆ ಅನುಮತಿ ಇಲ್ಲ. ಭಾರತೀಯ ತೆರಿಗೆ ಪಾವತಿದಾರರ ಹಣವನ್ನು ಯಾತ್ರಾ ಸಬ್ಸಿಡಿ ಮೂಲಕ ಸೌದಿ ಆರ್ಥಿಕತೆಗೆ ಅನುಕೂಲವಾಗಲು ಬಳಸಲಾಗುತ್ತದೆ.
ಒಂದು ವಾಸ್ತವ ಜಾ ತ್ಯತೀತ ದೇಶದಲ್ಲಿ ಯಾವುದೇ ನಿರ್ದಿಷ್ಟ ಧರ್ಮದ ಜನರನ್ನು ಗಣನೆಗೆ ತೆಗೆದುಕೊಳ್ಳದೆ ರಾಷ್ಟ್ರದ ಎಲ್ಲ ಪೌರರರಿಗೆ ಒಂದೇ ಕಾನೂನು ಅನ್ವಯಿಸಲಾಗುತ್ತದೆ. ಆದರೆ, ಭಾರತದಲ್ಲಿ ವಿವಿಧ ಧರ್ಮಗಳ ಜನರಿಗೆ ವಿವಿಧ ವೈಯಕ್ತಿಕ ಕಾನೂನುಗಳನ್ನು ಅನ್ವಯಿಸುವ ವ್ಯವಸ್ಥೆ ಇದೆ.

ಭಾರತದಲ್ಲಿ ಹಿಂದು ದೇವಾಲಯಗಳನ್ನು ಸರ್ಕಾರ ನಿಯಂತ್ರಿಸುತ್ತವೆ. ಆದರೆ ಮಸೀದಿಗಳು ಮತ್ತು ಚರ್ಚ್‍ಗಳು ಸ್ವಾಯತ್ತತೆಗೆ ಒಳಪಟ್ಟಿವೆ. ಮುಸ್ಲಿಂ ಧರ್ಮೀಯರ ಹಜ್ ಯಾತ್ರೆಗೆ ಸರ್ಕಾರದಿಂದಲೇ ಸಬ್ಸಿಡಿ ಲಭಿಸುತ್ತದೆ. ಆದರೆ, ಹಿಂದುಗಳ ಅಮರನಾಥ ಯಾತ್ರೆ ಅಥವಾ ಕುಂಭ ಮೇಳಕ್ಕೆ ಯಾವುದೇ ಸಹಾಯಧನ ಲಭ್ಯವಿಲ್ಲ.

ಒಂದು ವಾಸ್ತವ ಜಾ ತ್ಯತೀತ ದೇಶವು ಯಾವುದೇ ಧಾರ್ಮಿಕ ಯಾತ್ರೆಗೆ ಸಹಾಯಧನ ನೀಡಬಾರದು. ಆದರೆ, ಭಾರತ ಜಾ ತ್ಯತೀಯ ದೇಶವಾದರೂ ಇದಕ್ಕೆ ಅಪವಾದ.  ಹಿಂದುಗಳು ಔದಾರ್ಯ ಗುಣವುಳ್ಳವರು. ಅಲ್ಪಸಂಖ್ಯಾತರಿಗೆ ಮಣೆ ಹಾಕಿ ಅವರ ಹಿತಾಸಕ್ತಿಗಳನ್ನು ರಕ್ಷಿಸುತ್ತಾರೆ.

ಭಾರತದ ಸಹಿಷ್ಣುತೆಯನ್ನು ಇತಿಹಾಸದ ಪುಟಗಳನ್ನು ಕೆದಕಿದಾಗ ವೇದ್ಯವಾಗುತ್ತದೆ. ವಿಶ್ವದ ವಿವಿಧ ದೇಶಗಳಲ್ಲಿ ಪಾರ್ಸಿ ಧರ್ಮಿಯರ ಮೇಲೆ ದೌರ್ಜನ್ಯಗಳು ನಡೆದಾದ ಭಾರತೀಯ ಹಿಂದು ಸಮುದಾಯ ಅವರನ್ನು ಸ್ವಾಗತಿಸಿ ಆಶ್ರಯ ನೀಡಿತು. ಸಹಸ್ರಾರು ವರ್ಷಗಳಿಂದ ಪಾರ್ಸಿಗಳು ಭಾರತದಲ್ಲಿ ಸುರಕ್ಷಿತ ನೆಲೆ ಕಂಡುಕೊಂಡು ಏಳಿಗೆಯಾಗುತ್ತಿದ್ದಾರೆ.

ಸುಮಾರು 2000 ವರ್ಷಗಳ ಹಿಂದೆಯೇ ಯಹೂದಿ ಬುಡಕಟ್ಟು ಜನರಿಗೆ ಭಾರತ ಸುರಕ್ಷಿತ ಆಶ್ರಯ ತಾಣವಾಗಿತ್ತು. 1800 ವರ್ಷಗಳ ಹಿಂದೆ ಸಿರಿಯಾ ಕ್ರೈಸ್ತರಿಗೂ ಭಾರತ ಆಶ್ರಯ ನೀಡಿ ಪೆÇೀಷಿಸಿತ್ತು. ಹಿಂದುತ್ವದಿಂದ ಬೇರ್ಪಟ್ಟ ಬೌದ್ಧರು ಮತ್ತು ಜೈನರು 2500 ವರ್ಷಗಳಿಂದ ಭರತಖಂಡದಲ್ಲಿ ಹಿಂದುಗಳೊಂದಿಗೆ ಸಹಬಾಳ್ವೆ ನಡೆಸುತ್ತಿದ್ದಾರೆ. ಸಿಖ್ಖರು ಕೂಡ 400 ವರ್ಷಗಳ ಭಾರತದಲ್ಲೇ ನೆಲೆಸಿದ್ದಾರೆ.

ಈ ಎಲ್ಲ ವಾಸ್ತವ ಸಂಗತಿಗಳನ್ನು ಗಮನಿಸಿದರೆ ಹಿಂದುಗಳು ಹೆಮ್ಮೆ ಪಡಬೇಕು. ಯಾವುದೇ ಕಾರಣಕ್ಕೂ ಹಿಂಜರಿಕೆ ಸಲ್ಲದು.
ಇಂದಿಗೂ ಕೂಡ ಭಾರತ ಜಾ ತ್ಯತೀಯ ದೇಶ. 1976ರ ಸಾಂವಿಧಾನಿಕ ತಿದ್ದುಪಡಿ ಮತ್ತು ಕಾನೂನು ತಜ್ಞರು ಅಥವಾ ನೀತಿ ರೂಪಿಸುವವರು ಇದಕ್ಕೆ ಕಾರಣರಲ್ಲ.

ಭಾರತದಲ್ಲಿರುವ ಬಹುತೇಕ ಜನರು ಹಿಂದುಗಳೇ ಆಗಿರುವುದು ಇದಕ್ಕೆ ಕಾರಣ. ಜಾ ತ್ಯತೀತತೆಯ ಉದಾತ್ತ ತತ್ತ್ವವು ಹಿಂದು ಧರ್ಮದಲ್ಲಿ ಹಾಸುಹೊಕ್ಕಾಗಿದೆ. ಈ ಧರ್ಮದ ಸ್ವರೂಪ ಸಿದ್ಧಾಂತವೇ ಜಾ ತ್ಯತೀತತೆ. ಭಾರತದಲ್ಲಿ ಸಹಿಷ್ಣುತೆ ಸಹಸ್ರಾರು ವರ್ಷಗಳಿಂದ ಜಾ ರಿಯಲ್ಲಿದ್ದು, ಇದನ್ನು ಬದಲಿಸುವ ಯಾವುದೇ ಕಾನೂನು ನಿಯಮ ಜಾ ರಿಗೆ ಬಂದೇ ಇಲ್ಲ.

ಭಾರತವು ಮುಕ್ತವಾಗಿ ತನ್ನನ್ನು ಹಿಂದು (ಹಿಂದು/ಸಿಖ್/ಜೈನ್) ಎಂದು ಘೋಷಿಸಿಕೊಳ್ಳಬೇಕು. ವಿಶ್ವದ ಯಾವುದೇ ದೇಶವೂ ಮಾಡದ ರೀತಿಯಲ್ಲಿ ಭಾರತವು ಮೇಲೆ ತಿಳಿಸಿರುವ ಎಲ್ಲ ಜನರ ಹಿತಾಸಕ್ತಿಗಳನ್ನು ರಕ್ಷಿಸಲು ಮಧ್ಯಸ್ಥಿಕೆ ವಹಿಸಬೇಕು.
ಹಿಂದು ರಾಷ್ಟ್ರ ಎಂದು ಘೋಷಿಸಿಕೊಳ್ಳುವುದರಿಂದ ಬಲವಂತ ಮತಾಂತರ ಮತ್ತು ಅಲ್ಪಸಂಖ್ಯಾತರ ಓಲೈಕೆ ಬದಲು ಬಹುಸಂಖ್ಯಾತ ಹಿಂದುತ್ವವನ್ನು ರಕ್ಷಿಸಲು ಹೊಸ ಹೆಬ್ಬಾಗಿಲು ತೆರೆದಂತಾಗುತ್ತದೆ.

ಜಾ ತ್ಯತೀತ ದೇಶವಾಗಿ ಇರುವ ತನಕ ಮಾತ್ರ ಭಾರತವು ಪ್ರಗತಿಪರ ದೇಶವಾಗಿ ಉಳಿಯುತ್ತದೆ. ತನ್ನ ಭೌಗೋಳಿಕ ಪ್ರದೇಶ ಮತ್ತು ಜನಸಂಖ್ಯೆಯಲ್ಲಿ ಹಿಂದು ಪ್ರಾಬಲ್ಯ ಹೆಚ್ಚಾದರೆ ಮಾತ್ರ ಭಾರತವು ಜಜಾ ತ್ಯತೀತ ದೇಶವಾಗಿ ಉಳಿಯುತ್ತದೆ.  ಜಾ ತ್ಯತೀತತೆ ಮತ್ತು ಹಿಂದುತ್ವ ಒಂದೇ ನಾಣ್ಯದ ಎರಡು ಮುಖಗಳು. ನೀವು ನಾಣ್ಯವನ್ನು ಮೇಲಕ್ಕೆ ಚಿಮ್ಮಿದಾಗ ಯಾವ ಭಾಗವೂ ಕಂಡುಬಂದರೂ ನೀವೇ ವಿಜೇತರು ಈ ರಾಷ್ಟ್ರಗಳು ನೆಲದ ಕಾನೂನಿನ ಮೇಲೆ ಅವಲಂಬಿತವಾಗಿವೆ.

ಮತಾಂತರವು (ಪರ ಮತ್ತು ವಿರೋಧ) ಸಂಪೂರ್ಣ ನಿಷೇಸಲ್ಪಡುತ್ತದೆ. ಧಾರ್ಮಿಕ ಸಂಘರ್ಷಕ್ಕೆ ಪ್ರಮುಖ ಕಾರಣವಾದ ಮತಾಂತರ ನಿಲುಗಡೆಯಾಗುತ್ತದೆ. ತಬ್ಲಿಘೀಗಳು ಇರುವುದಿಲ್ಲ. ಮತಾಂತರಗಳು ನಿಲುಗಡೆಯಾದರೆ, ಪ್ರತಿಯೊಬ್ಬ ವ್ಯಕ್ತಿಯು ಆತ ಆಯ್ಕೆ ಮಾಡಿಕೊಳ್ಳುವ ಅಥವಾ ನಾಸಿಕನಾಗಲು ಬಯಸುವ (ಹಿಂದುಧರ್ಮದಲ್ಲೇ ಇರುವ ನೀರೀಶ್ವರವಾದ ಪಂಥ) ಯಾವುದೇ ಧರ್ಮವನ್ನು ಅನುಸರಿಸಬಹುದಾಗಿರುತ್ತದೆ. ಧರ್ಮದ ಆಚರಣೆ ಅಥವಾ ದೇವರನ್ನು ನಂಬದವರೆಂದು ಗುರುತಿಸುವ ಪದ್ಧತಿ ಇರುವ ಇನ್ನೊಂದು ಧರ್ಮವನ್ನು ನೀವು ತೋರಿಸಬಲ್ಲಿರಾ..?

ಜಾ ತ್ಯತೀತತೆ ಮತ್ತು ಧಾರ್ಮಿಕ ಸಹಿಷ್ಣುತೆಯ ಉದಾತ್ತ ತತ್ತ್ವವು ಈ ನೆಲದ ಮೇಲೆ ಮುಸ್ಲಿಂ ಆಕ್ರಮಣಕಾರರು ದಾಳಿ ಮಾಡಿ ಧ್ವಂಸಗೊಳಿಸುವುದಕ್ಕೆ ಮೊದಲಿನಿಂದಲೂ ಅನುಸರಿಸಲ್ಪಡುತ್ತಿದೆ.  ಕ್ರಿ.ಶ.1000 ವರ್ಷಗಳ ಸುಮಾರಿನಲ್ಲಿ ಭಾರತೀಯ ಉಪ ಖಂಡದ ಮೇಲೆ ಮುಸ್ಲಿಂ ಆಕ್ರಮಣಕೋರರ ದಾಳಿ ಆರಂಭವಾಯಿತು ಮತ್ತು ಈ ದಂಡಯಾತ್ರೆಯ ದಾಳಿ 1739ರ ವರೆಗೂ ಹಲವಾರು ಶತಮಾನಗಳ ಕಾಲ ಮುಂದುವರಿಯಿತು.

100 ದಶಲಕ್ಷ ಹಿಂದುಗಳ ಮಾರಣಹೋಮವು ಬಹುಶಃ ಇಡೀ ವಿಶ್ವದ ಚರಿತ್ರೆಯಲ್ಲೇ ಅತಿ ದೊಡ್ಡ ಹತ್ಯಾಕಾಂಡ. ಇಂಥ ಆಕ್ರಮಣಕೋರರ ಸರಣಿ ದಾಳಿಗಳು ಮತ್ತು ನರಮೇಧಗಳ ವಿರುದ್ಧ ಹಿಂದುಗಳು ಯಾವುದೇ ಸೇಡು ತೀರಿಸಿಕೊಳ್ಳಲಿಲ್ಲ. ಬಹುಸಂಖ್ಯಾತ ಹಿಂದುಗಳು ಮತ್ತು ಅಲ್ಪಸಂಖ್ಯಾತ ಮುಸ್ಲಿಮರ ನಡುವೆ ಅಂತರ್‍ಧರ್ಮೀಯ ಸಂಘರ್ಷಕ್ಕೆ ಕಾರಣವಾಗುವ ಧಾರ್ಮಿಕ ಹಗೆತನಕ್ಕೆ ಹಿಂದುಗಳು ಆಸ್ಪದ ನೀಡಲಿಲ್ಲ. ಇಷ್ಟೆಲ್ಲ ನಡೆದರೂ ಹಿಂದು ರಾಷ್ಟ್ರದಲ್ಲಿ ಹಿಂದೂಯೇತರರ ಧಾರ್ಮಿಕ ಸ್ವಾತಂತ್ರಕ್ಕೆ ಧಕ್ಕೆಯಾಗಿಲ್ಲ. ಅವರ ಹಕ್ಕುಗಳನ್ನು ಕಸಿದುಕೊಂಡಿಲ್ಲ.

ತಮ್ಮ ನೆಲದ ಇತಿಹಾಸದ ಬಗ್ಗೆ ಹಿಂದುಗಳು ಹೆಮ್ಮೆ ಪಡಬೇಕು. ಸಂಘರ್ಷಕ್ಕೆ ಎಡೆಮಾಡಿಕೊಡುವ ಸಂಗತಿ ಸಮಸ್ಯೆಗಳನ್ನು ಹಿಂದುಗಳು ಬಗೆಹರಿಸಿಕೊಳ್ಳಬೇಕು. ವಾಸ್ತವತೆಯಿಂದ ಹಿಂದುಗಳು ಹಿಂಜರಿದರೆ ಅದು ಮುಂದೆ ದೇಶದ ದುರಂತವಾಗುತ್ತದೆ. ಅದು ಈ ಮಣ್ಣಿನ ನೆಲದಲ್ಲಿ ಬಹು ಆಳವಾಗಿ ಹುದುಗಿರುವ ಸಹಿಷ್ಣುತೆಯ ಉದಾತ್ತ ತತ್ತ್ವ ಮತ್ತು ಶ್ರೀಮಂತ ಸಂಸ್ಕøತಿಗೆ ಧಕ್ಕೆ ಉಂಟು ಮಾಡುತ್ತದೆ.

ಮುಸ್ಲಿಂ ದೇಶಗಳ ಬೇಡಿಕೆಗಳನ್ನು ಈಡೇರಿಸಲು ಭಾರತವು ಅಮೂಲ್ಯ ಸಂಪತ್ತುಗಳನ್ನು ನೀಡಿ ಈಗಾಗಲೇ ಸಾಕಷ್ಟು ಮೂರ್ಖತನ ಪ್ರದರ್ಶಿಸಿರುವುದು ಸಾಕು. ಜಾತ್ಯತೀತತೆ ಹೆಸರಿನಲ್ಲಿ ಭಾರತವು ಓಲೈಕೆಯನ್ನು ಅನುಸರಿಸುತ್ತ ಸಾಕಷ್ಟು ಸಹನೆ, ಸಂಯಮ ಮತ್ತು ಸಹಿಷ್ಣುತೆಯನ್ನು ತೋರಿಸಿದೆ. ಹಿಂದುಗಳು ಶಾಂತಿ ಮೂಲಮಂತ್ರದೊಂದಿಗೆ ಈಗ ಒಗ್ಗೂಡುವ ಕಾಲ ಬಂದಿದೆ.

ಜಾತ್ಯತೀತ ತತ್ತ್ವ ಮೌಲ್ಯಗಳನ್ನು ಸ್ವಾಭಾವಿಕವಾಗಿ ಅಳವಡಿಸಿ ಕೊಂಡಿರುವ ಹಿಂದು ರಾಷ್ಟ್ರವು ವಿಶ್ವಕ್ಕೇ ಮಾದರಿಯಾಗಿ ಉತ್ತ ಮ ಆದರ್ಶ ದೇಶವಾಗಿ ಉದಾಹರಣೆಯಾಗಿ ನಿಲ್ಲುತ್ತದೆ.
ಈಗ ಸಮಯ ಬಂದಿದೆ..!!

Facebook Comments

Sri Raghav

Admin