ಕೊಹ್ಲಿ, ಭುವಿ ಅಬ್ಬರಕ್ಕೆ ವಿಂಡೀಸ್ ತತ್ತರ, ಭಾರತಕ್ಕೆ 59 ರನ್‍ಗಳ ಗೆಲುವು

ಈ ಸುದ್ದಿಯನ್ನು ಶೇರ್ ಮಾಡಿ

ಪೋರ್ಟ್ ಆಪ್ ಸ್ಪೇನ್, ಆ.12- ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯ 42ನೆ ಶತಕ (120 ರನ್) ಹಾಗೂ ಭುವನೇಶ್ವರ್‍ಕುಮಾರ್ (4 ವಿಕೆಟ್) ದಾಳಿಗೆ ತತ್ತರಿಸಿದ ವೆಸ್ಟ್‍ಇಂಡೀಸ್ ತಂಡವು 210 ರನ್‍ಗಳಿಗೆ ಸರ್ವಪತನವಾಗುವ ಮೂಲಕ 59 ರನ್‍ಗಳಿಂದ ಸೋಲು ಕಂಡಿದೆ. ವೆಸ್ಟ್‍ಇಂಡೀಸ್ ಹಾಗೂ ಭಾರತ ನಡುವಿನ ಮೊದಲ ಏಕದಿನ ಪಂದ್ಯವು ಮಳೆಗೆ ಆಹುತಿಯಾಗಿದ್ದರಿಂದ ಎರಡನೇ ಪಂದ್ಯವನ್ನು ಗೆದ್ದಿರುವ ಕೊಹ್ಲಿ ಪಡೆಯು 3 ಪಂದ್ಯಗಳ ಸರಣಿಯಲ್ಲಿ 1-0 ಯಿಂದ ಮುನ್ನಡೆ ಗಳಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 279 ರನ್ ಗಳಿಸಿತ್ತು. ಈ ವೇಳೆ ಸುರಿದ ಮಳೆಯಿಂದಾಗಿ ವಿಂಡೀಸ್ಗೆ 269 ರನ್‍ಗಳ ಗುರಿಯನ್ನು ನೀಡಲಾಯಿತು.

ಈ ಗುರಿಯನ್ನು ಬೆನ್ನಟ್ಟಿದ ವಿಂಡೀಸ್ ಕ್ರಿಸ್‍ಗೇಲ್ (11 ರನ್, 1 ಬೌಂಡರಿ), ಶೇನ್ ಹೋಪ್(5 ರನ್)ರ ವಿಕೆಟ್‍ಗಳನ್ನು ಬಲು ಬೇಗ ಕಳೆದುಕೊಂಡರೂ ಲಿವೀಸ್ (65 ರನ್, 8 ಔಬಂಡರಿ, 1 ಸಿಕ್ಸರ್) ಹಾಗೂ ಪೂರನ್ (42 ರನ್, 4 ಬೌಂಡರಿ, 1 ಸಿಕ್ಸರ್) ತಂಡಕ್ಕೆ ಆಸರೆಯಾಗಿ ನಿಂತು 4ನೆ ವಿಕೆಟ್‍ಗೆ 56 ರನ್‍ಗಳ ಜೊತೆಯಾಟ ನೀಡಿ ಆಕ್ರಮಣಕಾರಿಯಾಗುತ್ತಿದ್ದಾಗಲೇ ಭಾರತದ ಸ್ಪಿನ್ನರ್ ಕುಲ್‍ದೀಪ್‍ಯಾದವ್ ಲಿವೀಸ್‍ಗೆ ಪೆವಿಲಿಯನ್ ಹಾದಿ ತೋರಿದರೆ, ಭುವನೇಶ್ವರ್‍ಕುಮಾರ್ ಪೂರನ್‍ರ ವಿಕೆಟ್ ಕಬಳಿಸಿದರು.

ಈ ಜೋಡಿ ಬೇರ್ಪಟ್ಟ ನಂತರ ಚೇಸ್ (18 ರನ್), ಕಾಟ್ರಲ್ (17ರನ್, 2 ಬೌಂಡರಿ, 1 ಸಿಕ್ಸರ್) ಪ್ರತಿರೋಧ ಒಡ್ಡಿದರೂ ಕೂಡ 210 ರನ್‍ಗಳಿಗೆ ಸರ್ವಪತನ ಕಂಡಿತು.ಭಾರತ ತಂಡ ದ ಪರ ಭುವನೇಶ್ವರ್‍ಕುಮಾರ್ (4 ವಿಕೆಟ್), ಮೊಹಮ್ಮದ್ ಶಮಿ , ಕುಲ್‍ದೀಪ್ ಯಾದವ್ ತಲಾ 2 ವಿಕೆಟ್, ಖಲೀಲ್‍ಅಹಮದ್ ಹಾಗೂ ರವೀಂದ್ರಾಜಾಡೇಜಾ ತಲಾ 1 ವಿಕೆಟ್ ಕಬಳಿಸಿದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಪರ ನಾಯಕ ವಿರಾಟ್ ಕೊಹ್ಲಿ ( 120 ರನ್, 14 ಬೌಂಡರಿ, 1 ಸಿಕ್ಸರ್) ಹಾಗೂ ಯುವ ಬ್ಯಾಟ್ಸ್‍ಮನ್ ಶ್ರೇಯಾಸ್ ಅಯ್ಯರ್ (71 ರನ್, 5 ಬೌಂಡರಿ, 1 ಸಿಕ್ಸರ್) ಆಕ್ರಮಣಕಾರಿ ಆಟದಿಂದ 7 ವಿಕೆಟ್ ನಷ್ಟಕ್ಕೆ 279 ರನ್ ಗಳಿಸಿತು. ವಿಂಡೀಸ್À ಪರ ಬರ್ಥ್‍ವೇಟ್ 3 ವಿಕೆಟ್ ಕಬಳಿಸಿದರೆ, ಕಾಟ್ರಲ್, ಜಸನ್ ಹೋಲ್ಡರ್, ಚೇಸ್ ತಲಾ 1 ವಿಕೆಟ್ ಕೆಡವಿದರು.

#ಶತಕ ಬರ ನೀಗಿಸಿಕೊಂಡ ವಿರಾಟ್..
ಕಳೆದ ಐದು ತಿಂಗಳಿನಿಂದ ಶತಕ ಬರ ಎದುರಿಸುತ್ತಿದ್ದ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ವೆಸ್ಟ್‍ಇಂಡೀಸ್ ವಿರುದ್ಧದ 2 ನೆ ಏಕದಿನ ಪಂದ್ಯದಲ್ಲಿ 120 ರನ್‍ಗಳನ್ನು ದಾಖಲಿಸುವ ಮೂಲಕ ನೀಗಿಸಿಕೊಡಿದ್ದಾರೆ.  ಈ ಶತಕದಿಂದ ವಿರಾಟ್ 42ನೆ ಏಕದಿನ ಶತಕ ದಾಖಲಿಸಿದ್ದಾರೆ, ಒಟ್ಟಾರೆಯಾಗಿ 77 ಶತಕಗಳನ್ನು ದಾಖಲಿಸುವ ಮೂಲಕ ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ದಾಖಲಿಸಿರುವ 100 ಶತಕಗಳನ್ನು ಮೆಟ್ಟಿನಿಲ್ಲುವ ಹಂತಕ್ಕೆ ಸನಿಹವಾಗಿದ್ದಾರೆ.

ವೆಸ್ಟ್‍ಇಂಡೀಸ್ ವಿರುದ್ಧ ವಿರಾಟ್ ಗಳಿಸಿರುವ 8ನೆ ಶತಕವಾಗಿದ್ದು, 26 ವರ್ಷದ ಹಿಂದೆ ಪಾಕ್‍ನ ಜಾವೀದ್ ಮಿಯಾಂದಾದ್ ನಿರ್ಮಿಸಿದ್ದ 2000 ರನ್‍ಗಳ ದಾಖಲೆಯನ್ನು ಕೊಹ್ಲಿ ಮೆಟ್ಟಿನಿಂತರು. ಭಾರತದ ವಿರುದ್ಧ ವೇಗದ 2000 ಸಾವಿರ ಕೀರ್ತಿಯನ್ನು ಹೊಂದಿದ್ದ ರೋಹಿತ್ ಶರ್ಮಾ (37 ಪಂದ್ಯ)ರ ದಾಖಲೆಯನ್ನು ಕೂಡ ವಿರಾಟ್ (33 ಪಂದ್ಯ) ಅಳಿಸಿಹಾಕಿದರು.

ಏಕದಿನ ಪಂದ್ಯದಲ್ಲಿ ಭಾರತ ತಂಡದ ಮಾಜಿ ನಾಯಕ ಸೌರವ್‍ಗಂಗೂಲಿ ದಾಖಲಿಸಿದ್ದ 11363 ರನ್ ದಾಖಲೆನ್ನು ವಿರಾಟ್ ಅಳಿಸಿ ಹಾಕಿದ್ದಾರೆ, ಗಂಗೂಲಿ ಇಷ್ಟು ಮೊತ್ತವನ್ನು ಗಳಿಸಲು 311 ಪಂದ್ಯಗಳನ್ನು ತೆಗೆದುಕೊಂಡಿದ್ದರೆ, ವಿರಾಟ್ ಕೇವಲ 238 ಪಂದ್ಯಗಳಲ್ಲೇ 11,406 ರನ್‍ಗಳನ್ನು ದಾಖಲಿಸಿದ್ದಾರೆ.

Facebook Comments