ಐಸಿಸಿ ಟಿ-20 ವಿಶ್ವಕಪ್ : ನ್ಯೂಜಿಲೆಂಡ್ ವಿರುದ್ಧ ಭಾರತದ ಮಹಿಳೆಯರಿಗೆ ರೋಚಕ ಜಯ

ಈ ಸುದ್ದಿಯನ್ನು ಶೇರ್ ಮಾಡಿ

ಮೆಲ್ಬೋರ್ನ್, ಫೆ.27- ಐಸಿಸಿ ಟಿ-20 ವಿಶ್ವಕಪ್ ಮಹಿಳಾ ಕ್ರಿಕೆಟ್‍ನ ಮಹತ್ವದ ಪಂದ್ಯವೊಂದರಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 4 ರನ್‍ಗಳ ರೋಚಕ ಗೆಲುವು ದಾಖಲಿಸಿದೆ. ಇದು ಭಾರತಕ್ಕೆ ಈ ಪಂದ್ಯಾವಳಿ ಯಲ್ಲಿ ದೊರೆತ ಮೂರನೆ ಗೆಲು ವಾಗಿದೆ. ಈ ಜಯದೊಂದಿಗೆ ಭಾರತ ಎ ಗುಂಪಿನ ಅಗ್ರ ಸ್ಥಾನಕ್ಕೇರಿದೆ.

ಮೊದಲು ಬ್ಯಾಟ್ ಮಾಡಿದ ಭಾರತ 8 ವಿಕೆಟ್ ನಷ್ಟಕ್ಕೆ 133 ರನ್‍ಗಳ ಸವಾಲನ್ನು ನ್ಯೂಜಿಲೆಂಡ್‍ಗೆ ನೀಡಿತು.  ಈ ಅಲ್ಪ ಮೊತ್ತದ ಬೆನ್ನಟ್ಟಿದ ಕಿವೀಸ್ ವನಿತೆಯರು ಸಮಯೋಚಿತ ಆಟ ಪ್ರದರ್ಶಿಸಿದರಾದರೂ ಭಾರತದ ಬೌಲರ್‍ಗಳು ಮೇಲುಗೈ ಸಾಧಿಸಿ ಸೀಮಿತ 20 ಓವರ್‍ಗಳಲ್ಲಿ 6 ವಿಕೆಟ್ ಗಳಿಸಿ 129 ರನ್‍ಗಳಿಗೆ ನಿಯಂ ತ್ರಿಸಿದರು. 4 ರನ್‍ಗಳ ರೋಚಕ ಗೆಲುವನ್ನು ಭಾರತ ದಾಖಲಿಸಿದೆ.

Facebook Comments