ಆರಂಭಿಕ ಪಂದ್ಯದಲ್ಲೇ ಹೀನಾಯ ಸೋಲುಂಡ ಭಾರತದ ಹಾಕಿ ವನಿತೆಯರು

ಈ ಸುದ್ದಿಯನ್ನು ಶೇರ್ ಮಾಡಿ

ಟೋಕಿಯೋ, ಜು. 28- ತಮ್ಮ ಆರಂಭಿಕ ಪಂದ್ಯದಲ್ಲೇ ನೆದರ್‍ಲ್ಯಾಂಡ್ ವಿರುದ್ಧ 5-1 ರಿಂದ ಹೀನಾಯ ಸೋಲು ಕಂಡಿದ್ದ ಭಾರತ ಹಾಕಿ ವನಿತೆಯರು ಇಂದಿಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ ನಡೆದ ಪಂದ್ಯದಲ್ಲೂ 4-1 ರಿಂದ ಪರಾಭವಗೊಂಡು ಹ್ಯಾಟ್ರಿಕ್ ಸೋಲು ಕಂಡಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‍ನ 6ನೇ ದಿನವಾದ ಇಂದು ಭಾರತೀಯ ವನಿತೆಯರು ಹಿಂದಿನ ಪಂದ್ಯಗಳ ಸೋಲಿನ ಕಹಿಯನ್ನು ಮರೆತು ಗೆಲುವಿನ ಲಯಕ್ಕೆ ಮರಳುವ ವಿಶ್ವಾಸದಲ್ಲಿದ್ದರಾದರೂ ಗ್ರೇಟ್ ಬ್ರಿಟನ್ ಆಟಗಾರ್ತಿಯರ ಬಲಿಷ್ಠ ಆಟದ ಮುಂದೆ ಮಂಕಾದರು.

ಗುಂಪು ಎ ನಲ್ಲಿ ಸ್ಥಾನ ಪಡೆದಿರುವ ಭಾರತೀಯ ಹಾಕಿ ವನಿತೆಯರು ಗ್ರೇಟ್ ಬ್ರಿಟನ್ ಆಟಗಾರ್ತಿಯರ ವಿರುದ್ಧ ಯಾವುದೇ ಹಂತದಲ್ಲೂ ಹೋರಾಟದ ಮನೋಭಾವ ತೋರದ ಕಾರಣ 4-1 ರಿಂದ ಸೋತು ಕ್ವಾರ್ಟರ್ ಫೈನಲ್‍ಗೇರುವ ಹಾದಿಯನ್ನು ದುರ್ಗಮವಾಗಿಸಿಕೊಂಡಿದ್ದಾರೆ.

ಗ್ರೇಟ್ ಬ್ರಿಟನ್ ಪರ ಹನ್ನಾ ಮಾರ್ಟಿನ್ 2 ಗೋಲು ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರೆ, ಎಲ್‍ಓವಿಸ್ಲಿ ಮತ್ತು ಜಿ ಬಾಲ್ಸ್ಡೊ ಅವರು ತಲಾ ಒಂದೊಂದು ಗೋಲ್ ಬಾರಿಸಿದರೆ, ಭಾರತದ ಪರ ಶರ್ಮಿಳಾ ದೇವಿ ಮಾತ್ರ ಗೋಲು ಗಳಿಸುವಲ್ಲಿ ಸಫಲರಾದರೆ ಉಳಿದ ಆಟಗಾರ್ತಿಯರು ಕಳಪೆ ಪ್ರದರ್ಶನ ತೋರುವ ಮೂಲಕ ಸೋಲಿಗೆ ಕಾರಣರಾದರು.

ಟೋಕಿಯೋ ಒಲಿಂಪಿಕ್ಸ್‍ನ ಎ ಗುಂಪಿನಲ್ಲಿ ಗುರುತಿಸಿಕೊಂಡಿರುವ ಭಾರತೀಯ ಹಾಕಿ ವನಿತೆಯರು 5 ಪಂದ್ಯಗಳ ಪೈಕಿ ಈಗಾಗಲೇ 3 ಪಂದ್ಯಗಳಲ್ಲಿ ಸೋಲು ಕಂಡಿದ್ದು ಇನ್ನುಳಿದ 2 ಪಂದ್ಯಗಳಲ್ಲಿ ಭಾರೀ ಹಂತಗಳ ಗೋಲುಗಳಿಂದ ಗೆದ್ದರೂ ಕೂಡ ಕ್ವಾರ್ಟರ್‍ಫೈನಲ್‍ಗೇರಲು ಸಾಧ್ಯವಾಗುವುದಿಲ್ಲ.

Facebook Comments