BIG NEWS: ಭಾರತದಲ್ಲಿ ಮತ್ತೆ ಏರಿಕೆ ಕಂಡ ಕೊರೊನಾ ಸೋಂಕು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜೂ.24-ದೇಶದಲ್ಲಿ ಮತ್ತೆ 54069 ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದರೆ, ಮಹಾಮಾರಿಗೆ 1321 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 54 ಸಾವಿರ ಹೊಸ ಪ್ರಕರಣಗಳಿಂದ ದೇಶದ ಒಟ್ಟು ಸೋಂಕಿತರ ಸಂಖ್ಯೆ 3,00,82,778 ಕೋಟಿಗೆ ಏರಿಕೆಯಾಗಿದ್ದರೆ, ಇದುವರೆಗೂ ಸೋಂಕಿಗೆ ಬಲಿಯಾದವರ ಸಂಖ್ಯೆ 3,91 ಲಕ್ಷದ ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಉಲ್ಲೇಖಿಸಿವೆ.

ಕೊರೊನಾ ಚೇತರಿಕೆ ಪ್ರಮಾಣ 96.61ಕ್ಕೆ ಏರಿಕೆಯಾಗಿರುವುದರಿಂದ ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ 6,27 ಲಕ್ಷಕ್ಕೆ ಕುಸಿದಿದೆ. ದೇಶದ್ಯಾಂತ ನಿನ್ನೆ ಒಂದೇ ದಿನ 64,89 ಲಕ್ಷ ಲಸಿಕೆ ಹಾಕಲಾಗಿದೆ. ಇದರೊಂದಿಗೆ ಇದುವರೆಗೂ 30 ಕೋಟಿಗೂ ಹೆಚ್ಚು ಮಂದಿಗೆ ವ್ಯಾಕ್ಸಿನ್ ಹಾಕಿದಂತಾಗಿದೆ. ಕೊರೊನಾ ಪಾಸಿಟಿವಿಟಿ ರೇಟ್ ಶೇ.2.91ಕ್ಕೆ ಕುಸಿದಿದ್ದರೆ, ವಾರದ ಪಾಸಿಟಿವಿಟಿ ಕೂಡ ಶೇ.3.04ಕ್ಕೆ ಕುಸಿದುಬಿದ್ದಿದೆ.

ಮೂರು ಕೋಟಿ ಸೋಂಕಿತರ ಪೈಕಿ ಈಗಾಗಲೇ 2,90 ಕೋಟಿಗೂ ಹೆಚ್ಚು ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಆದರೆ, ಸಾವಿನ ಪ್ರಮಾಣ ಶೇ.1.30ರಷ್ಟು ಏರಿಕೆಯಾಗಿದೆ.

Facebook Comments