ಭಾರತೀಯ ವಾಯುಪಡೆಗೆ ಗಜಬಲ, 8 ಅಪಾಚಿ ಸೇರ್ಪಡೆ

ಈ ಸುದ್ದಿಯನ್ನು ಶೇರ್ ಮಾಡಿ

ಪಠಾನ್‍ಕೋಟ್, ಸೆ.3- ಭಾರತೀಯ ವಾಯುಪಡೆಗೆ ಇಂದು ಅಮೆರಿಕಾದ ಅತ್ಯಾಧುನಿಕ ಎಂಟು ಅಪಾಚಿ ಆಕ್ರಮಕಾರಿ ಹೆಲಿಕ್ಯಾಪ್ಟರ್‍ಗಳು ಸೇರ್ಪಡೆಯಾಗಿವೆ. ಇದರೊಂದಿಗೆ ಭಾರತೀಯ ಸೇನೆ ಸಮರಸಾಮಥ್ರ್ಯ ಮತ್ತಷ್ಟು ಸದೃಢಗೊಂಡಿದೆ.

ಇಂದು ಪಠಾನ್‍ಕೋಟನ ವಾಯುನೆಲೆಯಲ್ಲಿ ಏರ್‍ಚೀಫ್ ಮಾರ್ಷಲ್ ಬಿ.ಎಸ್.ದಹೋನಾ ಅವರು, ವಿದ್ಯುಕ್ತವಾಗಿ ಎಂಟು ಅಪಾಚಿ ಹೆಲಿಕಾಪ್ಟರ್‍ಗಳನ್ನು ಸೇರ್ಪಡೆ ಮಾಡಿಕೊಂಡರು. 30ಎಂಎಂ ಗನ್ ಹೊಂದಿರುವ ಈ ಹೆಲಿಕಾಪ್ಟರ್ ಶತ್ರುಗಳ ನೆಲೆಗಳ ಮೇಲೆ ನಿಖರವಾಗಿ ದಾಳಿ ನಡೆಸಿ ಧ್ವಂಸ ಮಾಡುವ ಸಾಮಥ್ರ್ಯ ಹೊಂದಿದೆ.  ಅಪಾಚೆ ಎಎಚ್-64ಇ ಅಟ್ಯಾಕ್ ವಿಶ್ವದ ಅತ್ಯಂತ ಪ್ರಬಲ ಹೆಲಿಕಾಪ್ಟರ್ ಎಂದು ಪರಿಗಣಿತವಾಗಿದೆ.

Facebook Comments