ಭಾರತೀಯ ಸಶಸ್ತ್ರ ಪಡೆಗಳ ಅಮೂಲಾಗ್ರ ಬದಲಾವಣೆಗೆ ಸಿಡಿಎಸ್ ದಿಟ್ಟ ಹೆಜ್ಜೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ.17-ಭಾರತೀಯ ಸಶಸ್ತ್ರ ಪಡೆಗಳಾದ ಭೂಸೇನೆ, ವಾಯು ಪಡೆ ಮತ್ತು ನೌಕಾ ದಳಗಳ ಅಮೂಲಾಗ್ರ ಬದಲಾವಣೆಗೆ ದಿಟ್ಟ ಹೆಜ್ಜೆ ಇಟ್ಟಿರುವ ಮೂರು ಪಡೆಗಳ ಮಹಾ ದಂಡನಾಯಕ (ಸಿಡಿಎಸ್) ಜನರಲ್ ಬಿಪಿನ್ ರಾವತ್, ಅನೇಕ ಮಹತ್ವದ ಸುಧಾರಣಾ ಕ್ರಮಗಳನ್ನು ಘೋಷಿಸಿದ್ದಾರೆ.

ದೆಹಲಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ವಾಯುಪಡೆಯನ್ನು ಏರ್ ಡಿಫೆನ್ಸ್ ಕಮಾಂಡ್ ಆಗಿ ಮೇಲ್ದರ್ಜೆಗೆ ಏರಿಸಲಾಗುತ್ತದೆ. ಇದು ಮುಂದಿನ ವರ್ಷದಿಂದ ಕಾರ್ಯಾರಂಭ ಮಾಡಲಿದೆ. ವಾಯು ಪಡೆಗೆ ಬೇಕಾದ ದೀರ್ಘಾ ಶ್ರೇಣಿ ಕ್ಷಿಪಣಿಗಳು ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಖರೀದಿಸುವ ಅಧಿಕಾರ ವ್ಯಾಪ್ತಿಯು ಇದರಡಿ ಒಳಪಡುತ್ತದೆ. ಎಂದರು.

ಬಾಯು ಪಡೆಗೆ 114 ಪೈಟರ್ ಜೆಟ್‍ಗಳೂ ಸೇರಿದಂತೆ ಅಗತ್ಯವಾದ ಯುದ್ಧ ಹೆಲಿಕಾಪ್ಟರ್‍ಗಳನ್ನು ಖರೀದಿಸಲಾಗುತ್ತದೆ ಎಂದು ಸಿಡಿಎಸ್ ವಿವರಿಸಿದರು. ಭಾರತೀಯ ನೌಕಾ ದಳದಲ್ಲೂ ಸಮಗ್ರ ಸುಧಾರಣೆಗೆ ಹಲವು ಕ್ರಮಗಳನ್ನು ಜನರಲ್ ಬಿಪಿನ್ ರಾವತ್ ಘೋಷಿಸಿದ್ದಾರೆ. ದಳದಲ್ಲಿರುವ ಪೂರ್ವ ಮತ್ತು ಪಶ್ಚಿಮ ಕಮಾಂಡ್‍ಗಳನ್ನು ಒಗ್ಗೂಡಿಸಿ ಪೆನಿಸುಲಾ ಕಮಾಂಡ್ (ದ್ವೀಪಕಲ್ಪ ನೌಕಾ ನೆಲೆ) ರಚಿಸಲಾಗುವುದು. ಇದು ಮುಂದಿನ ವರ್ಷಾಂತ್ಯದೊಳಿಗೆ ಕಾರ್ಯಾರಂಭ ಮಾಡಲಿದೆ ಎಂದು ಮಾಹಿತಿ ನೀಡಿದರು.

ನೌಕಾ ದಳಕ್ಕೆ ವಿಮಾನಗಳನ್ನು ಹೊತ್ತೊಯ್ಯುವ ಏರ್‍ಕ್ರಾಫ್ಟ್ ಕ್ಯಾರಿಯರ್ ನೌಕೆಗಳ ರೀತಿಯಲ್ಲಿಯೂ ಅತ್ಯಾಧುನಿಕ ಸಬ್‍ಮರೀನ್‍ಗಳ ಖರೀದಿಗೂ ಅದ್ಯತೆ ನೀಡಲಾಗುವುದು. ಮೂರನೇ ಏರ್‍ಕ್ರಾಫ್ಟ್ ಕ್ಯಾರಿಯರ್ ಬೇಕೆಂಬ ನೌಕಾ ದಳದ ಬೇಡಿಕೆಯನ್ನು ಪರಿಶೀಲಿಸಲಾಗುವುದು ಎಂದು ಅವರು ತಿಳಿಸಿದರು. ಜಮ್ಮು ಮತ್ತು ಕಾಶ್ಮೀರ ಪ್ರಾಂತ್ಯಕ್ಕೆ ಪ್ರತ್ಯೇಕ ಥಿಯೇಟರ್ ಕಮಾಂಡ್‍ನನ್ನು ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದರು.

Facebook Comments

Sri Raghav

Admin