ಗಡಿಯಲ್ಲಿ ಚೀನಾ ಯೋಧರ ಕಿರಿಕ್, ಬಿಸಿಮುಟ್ಟಿಸಿದ ಭಾರತದ ಯೋಧರು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 10- ಅತ್ತ ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನ ಸೇನೆ ಕದನ ವಿರಾಮಗಳನ್ನು ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸುತ್ತಿದ್ದರೆ, ಇತ್ತ ಈಶಾನ್ಯ ಪ್ರಾಂತ್ಯದಲ್ಲಿ ಚೀನಾ ಯೋಧರು ಬಾಲ ಬಿಚ್ಚಿದ್ದಾರೆ.

ಸಿಕ್ಕಿಂ ಸೆಕ್ಟರ್‍ನ ನಾಕು ಲಾ ಬಳಿ ಭಾರತ ಮತ್ತು ಚೀನಾ ಯೋಧರ ನಡುವೆ ಭೀಕರ ಗುಂಡಿನ ಚಕಮಕಿ ನಡೆದಿದ್ದು, ಅನೇಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇಂಡೋ-ಚೀನಾ ನಡುವೆ ಗಡಿಯಲ್ಲಿ ಆಗಾಗ ಸಂಘರ್ಷ ನಡೆದರೂ ಅದನ್ನು ಪರಸ್ಪರ ಉಭಯ ದೇಶಗಳು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತಿದ್ದವು.

ಆದರೆ ದೀರ್ಘಕಾಲದ ನಂತರ ಏಷ್ಯಾದ ಎರಡು ಪ್ರಬಲ ದೇಶಗಳ ಸೇನೆ ನಡುವೆ ಗಡಿ ಪ್ರದೇಶದಲ್ಲಿ ಗುಂಡಿನ ಕಾಳಗ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಎನ್‍ಕೌಂಟರ್ ನಂತರ ಎರಡೂ ದೇಶಗಳ ಸೇನಾಧಿಕಾರಿಗಳ ಮಾತುಕತೆ ನಂತರ ಪರಿಸ್ಥಿತಿ ತಿಳಿಗೊಂಡಿದೆ ಎಂದು ಮೂಲಗಳು ಹೇಳಿವೆ.

Facebook Comments

Sri Raghav

Admin