ಭಾರತ ಸ್ವಾತಂತ್ರ್ಯ ಸಂಗ್ರಾಮದ ಸುತ್ತ ಒಂದು ಸುತ್ತು, ಇತಿಹಾಸದ ಪುಟಗಳಿಂದ

ಈ ಸುದ್ದಿಯನ್ನು ಶೇರ್ ಮಾಡಿ

ಭಾರತದಲ್ಲಿ 18ನೇ ಶತಮಾನದಲ್ಲಿ ಬ್ರಿಟಿಷರ ವಿರುದ್ಧ ನಡೆದ ಹೋರಾಟಗಳ ನಂತರ ಅನೇಕ ಸ್ವಾತಂತ್ರ್ಯ ಚಳವಳಿಗಳು ನಡೆದವು. ನಮ್ಮ ಸ್ವಾತಂತ್ರ ಸಂಗ್ರಾಮಕ್ಕೆ 150 ವರ್ಷಗಳಿಗೂ ಹೆಚ್ಚು ಕಾಲದ ಸುದೀರ್ಘ ಇತಿಹಾಸವಿದೆ. ಆಗಿನ ರಾಜ ಮಹಾರಾಜರು, ವೀರರಾಣಿಯರು ವಿದೇಶಿ ಆಡಳಿತಗಾರರ ದಬ್ಬಾಳಿಕೆ ಮತ್ತು ಶೋಷಣೆಗಳ ವಿರುದ್ದ ದನಿಎತ್ತಿ ದಿಟ್ಟ ಹೋರಾಟ ನಡೆಸಿದ್ದಾರೆ.

ವೀರರಾಣಿ ಕಿತ್ತೂರು ಚೆನ್ನಮ್ಮ, ಮೈಸೂರು ಹುಲಿ ಟಿಪ್ಪು ಸುಲ್ತಾನ್, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ವೀರ ಪಾಂಡ್ಯ ಕಟ್ಟಿ ಬೊಮ್ಮನ್ ಆನಂತರ ಸ್ವಾತಂತ್ರ ಸೇನಾನಿಗಳು ಮತ್ತು ಚಳವಳಿಗಾರರ ಹೋರಾಟದ ಕೆಚ್ಚು ನಮ್ಮಲ್ಲಿ ಒಡಮೂಡಿ ನಿಲ್ಲುತ್ತದೆ.

ಚರಿತ್ರೆಯ ಪುಟಗಳನ್ನು ತಿರುವಿದಾಗ ಹಲವಾರು ಕುತೂಹಲಕಾರಿ ಸಂಗತಿಗಳು ಅನಾವರಣಕೊಳ್ಳುತ್ತವೆ. ಭವ್ಯ ಪರಂಪರೆ ಇತಿಹಾಸ ಹೊಂದಿರುವ ಭಾರತಕ್ಕೆ 1498ರಲ್ಲಿ ಪೋರ್ಚುಗಲ್‍ನಿಂದ ಆಫ್ರಿಕಾ ಖಂಡ ಗುಡ್‍ಹೋಪ್ ಭೂಶಿರವನ್ನು ಬಳಸಿ ಬಂದು ಜಲಮಾರ್ಗ ಕಂಡುಹಿಡಿದವನು ವಾಸ್ಕೋ ಡ ಗಾಮ. ಆ ಮೂಲಕ ಭಾರತವನ್ನು ಪ್ರಪಂಚಕ್ಕೆ ಪರಿಚಯಿಸಿದನು.

ಭಾರತಕ್ಕೆ ಪಾದಾರ್ಪಣೆ ಮಾಡಿದ ಬ್ರಿಟಿಷರು 1600ರಲ್ಲಿ ಈಸ್ಟ್ ಇಂಡಿಯಾ ಕಂಪೆನಿ ಸ್ಥಾಪನೆಗೆ ಬುನಾದಿ ಹಾಕಿದರು.1753ರ ಪ್ಲಾಸೀ ಕದನದಿಂದ ಸರಿಯಾಗಿ 104 ವರ್ಷಗಳ ನಂತರ ಅಂದರೆ 1857ರಲ್ಲಿ ಭಾರತದ ಪ್ರಥಮ ಸ್ವಾತಂತ್ರ ಸಂಗ್ರಾಮ ಸಿಪಾಯಿ ದಂಗೆ ಮೂಲಕ ಕಿಡಿಕಾರಿತು.

ಆಂಗ್ಲರ ದಬ್ಬಾಳಿಕೆ ವಿರುದ್ದ ಸಿಪಾಯಿಗಳೂ, ರಾಜ್ಯಗಳೂ ತಿರುಗಿಬಿದ್ದು ಪ್ರತಿಭಟನೆ ನಡೆಸಿದವು. ಆದರೆ ವ್ಯವಸ್ಥಿತ ಯೋಜನೆ ಇಲ್ಲದ ಕಾರಣ ದಂಗೆ ಹತ್ತಿಕ್ಕಲ್ಲಟ್ಟಿತು. ಸಿಪಾಯಿ ದಂಗೆ ವಿಫಲವಾದ ಮೇಲೆ ಭಾರತದ ವಿದ್ಯಾವಂತರು ಎಚ್ಚೆತ್ತುಕೊಂಡರು ಹಾಗೂ ರಾಜಕೀಯವಾಗಿ ಸಂಘಟಿತರಾದರು.

ಭಾರತದ ಪ್ರಥಮ ಸ್ವಾತಂತ್ರ ಸಂಗ್ರಾಮದ ಕಿಚ್ಚು ಸಿಪಾಯಿ ದಂಗೆ ಮೂಲಕ ಹೊರಹೊಮ್ಮಿತು. 1857-1858ರಲ್ಲಿ ಬ್ರಿಟಿಷ್ ಆಳ್ವಿಕೆಯ ವಿರುದ್ದ ಉತ್ತರ ಮತ್ತು ಮಧ್ಯ ಭಾರತದಲ್ಲಿ ಭುಗಿಲೆದ್ದ ದಂಗೆ ಇದು. ಈ ದಂಗೆಯು ಭಾರತೀಯ ಸೈನಿಕರು ಮತ್ತು ಅವರ ಬ್ರಿಟಿಷ್ ಅಕಾರಿಗಳ ನಡುವಣ ಜನಾಂಗೀಯ ಮತ್ತು ಸಾಂಸ್ಕøತಿಕ ತಾರತಮ್ಯಗಳ ಫಲವಾಗಿ ಉಲ್ಬಣಗೊಂಡಿತು.

ಅದರೆ ಸಿಪಾಯಿ ದಂಗೆಗೆ ವಾಸ್ತವ ಕಾರಣವೆಂದರೆ ಬ್ರಿಟಿಷ್ ಸೈನ್ಯದಿಂದ ಭಾರತೀಯ ಸಿಪಾಯಿಗಳಿಗೆ ನೀಡಲ್ಪಟ್ಟ ಲೀ-ಎನ್‍ಫೀಲ್ಡ್ ಬಂದೂಕಿನ ತೋಟಾಗಳಿಗೆ ದನದ ಮತ್ತು ಹಂದಿಯ ಕೊಬ್ಬನ್ನು ಸವರಿದ್ದಾರೆಂಬ ಸುದ್ದಿ. ಸೈನಿಕರು ಕಾಡತೂಸುಗಳನ್ನು ತಮ್ಮ ಬಂದೂಕುಗಳಲ್ಲಿ ತುಂಬುವ ಮೊದಲು ಹಲ್ಲಿನಿಂದ ಕಚ್ಚಿ ಅವುಗಳನ್ನು ತೆರೆಯಬೇಕಾಗಿತ್ತು.

ಗೋವು ಹಿಂದುಗಳಿಗೆ ತುಂಬಾ ಪವಿತ್ರವಾದ ಪ್ರಾಣಿಯಾದರೆ, ಇನ್ನೊಂದೆಡೆ ಹಂದಿ ಕಟ್ಟುನಿಟ್ಟಾಗಿ ಮುಸ್ಲಿಮರಿಗೆ ನಿಷೇತವಾಗಿತ್ತು.. ಹೀಗಾಗಿ ದನ ಮತ್ತು ಹಂದಿಯ ಕೊಬ್ಬು ಸವರಿ ಹಿಂದು ಮತ್ತು ಮುಸ್ಲಿಂ ಸಿಪಾಯಿಗಳ ಮನಸ್ಸು ನೋಯುವಂತೆ ಮಾಡುವುದು ಇದರ ಉದ್ದೇಶವಾಗಿತ್ತು. ಈ ಧಾರ್ಮಿಕ ಸಂಗತಿ ಹಿನ್ನೆಲೆಯಲ್ಲಿ ಫೆಬ್ರವರಿ 1857ರಲ್ಲಿ ಸಿಪಾಯಿಗಳು ದಂಗೆ ಎದ್ದು ಹೊಸ ಕಾಡತೂಸುಗಳನ್ನು ಬಳಕೆ ಮಾಡಲು ನಿರಾಕರಿಸಿದರು.

ಸಿಪಾಯಿ ದಂಗೆ ದಿಟ್ಟ ಹೋರಾಟದ ಕಿಚ್ಚು ಪಡೆದಿದ್ದು ಭಾರತ ಪ್ರಥಮ ಸ್ವಾತಂತ್ರ ಸಂಗ್ರಾಮದ ಹುತಾತ್ಮ ಎಂದೇ ಖ್ಯಾತಿ ಪಡೆದಿರುವ ಮಂಗಲ್ ಪಾಂಡೆ ಮೂಲಕ. ಈಸ್ಟ್ ಇಂಡಿಯಾ ಕಂಪೆನಿಯ ಬ್ರಿಟಿಷರ ಸೈನ್ಯದಲ್ಲಿ ಸಿಪಾಯಿಯಾಗಿದ್ದ ಪಾಂಡೆ 1857ರಲ್ಲಿ ಆಂಗ್ಲರ ಮೇಲೆ ಮಾಡಿದ ಆಕ್ರಮಣ ಭಾರತದ ಮೊದಲ ಸ್ವಾತಂತ್ರ ಸಂಗ್ರಾಮದ ರೂಪ ಪಡೆಯಿತು.

34ನೇ ದೇಶೀಯ ಪದಾತಿದಳದ ಸಿಪಾಯಿ ಮಂಗಲ್ ಪಾಂಡೆ 1857ರ ಮಾರ್ಚ್‍ನಲ್ಲಿ ಬ್ರಿಟಿಷ್ ಸಾರ್ಜೆಂಟ್ ಲೆಫ್ಟಿನೆಂಟ್ ಬಾಘ್ ಮೇಲೆ ದಾಳಿ ಮಾಡಿ ಮತ್ತೊಬ್ಬ ಯೋಧನನ್ನು ಗಾಯಗೊಳಿಸಿದನು. ಈ ಘಟನೆ ಹಿನ್ನೆಲೆಯಲ್ಲಿ ಜನರಲ್ ಹರ್ಸೇ, ಪಾಂಡೆಯನ್ನು ಬಂಸಲು ಜಮಾದಾರನಿಗೆ ಆದೇಶಿಸಿದನಾದರೂ, ಬಂಸಲು ಆತ ನಿರಾಕರಿಸಿದ.

ಏಪ್ರಿಲ್ 7ರಂದು ಮಂಗಲ್ ಪಾಂಡೆಯನ್ನು ಜಮಾದಾರ ಈಶ್ವರಿ ಪ್ರಸಾದ್ ಜೊತೆ ನೇಣು ಹಾಕಲಾಯಿತು. ಸಾಮೂಹಿಕ ಶಿಕ್ಷೆಯಾಗಿ ಇಡೀ ತುಕಡಿಯನ್ನೇ ವಿಸರ್ಜಿಸಲಾಯಿತು. ಮೇ 10ರಂದು 11ನೇ ಮತ್ತು 20ನೇ ಅಶ್ವದಳಗಳು ಸೇರಿದಾಗ ಸವಾರರು ರೋಷದಿಂದ ಮೇಲಾಕಾರಿಗಳನ್ನು ಬಗ್ಗು ಬಡಿದರು.

ಅನಂತರ ಮೂರನೇ ತುಕಡಿಯನ್ನು ಸ್ವತಂತ್ರಗೊಳಿಸಲಾಯಿತು. ಈ ಘಟನೆ ನಂತರ ದೆಹಲಿ ಸೇರಿದಂತೆ ಉತ್ತರ ಭಾರತದ ತುಂಬೆಲ್ಲಾ ಬಂಡಾಯ ಹಬ್ಬಿತು. ಅವಧ್ ಪ್ರಾಂತ್ಯದ ಮಾಜಿ ದೊರೆಯ ಸಲಹೆಗಾರ ಅಹ್ಮದ್ ಉಲ್ಲಾ, ನಾನಾ ಸಾಹೇಬ್, ಅವನ ಸೋದರಳಿಯ ರಾವ್ ಸಾಹೇಬ್ ಮತ್ತವನ ಅನುಯಾಯಿಗಳಾದ ತಾಂತ್ಯಾ ಟೋಪಿ ಮತ್ತು ಅಜೀಮುಲ್ಲಾ ಖಾನ್, ಝಾನ್ಸಿ ರಾಣಿ ಲಕ್ಷ್ಮೀಭಾಯಿ, ಕುಂವರ್ ಸಿಂಹ, ಬಿಹಾರದ ಜಗದೀಶ್‍ಪುರದ ರಜಪೂತ ನಾಯಕರು ಮತ್ತು ಮೊಘಲ್ ದೊರೆ ಬಹಾದುರ್ ಶಹಾನ ಸಂಬಂ ಪಿರೋಜ್ ಶಹಾ, ಎರಡನೇ ಬಹಾದುರ್ ಶಹಾ ಮೊದಲಾದವರು ಬ್ರಿಟಿಷರ ವಿರುದ್ದ ತಿರುಗಿಬಿದ್ದರು.

ಸಿಪಾಯಿ ದಂಗೆಯ ನಂತರದ ದಶಕಗಳಲ್ಲಿ ರಾಜಕೀಯ ಪ್ರಜ್ಞೆ , ಭಾರತೀಯರ ಲೋಕಾಭಿಪ್ರಾಯ ಹಾಗೂ ರಾಷ್ಟ್ರೀಯ ಮತ್ತು ಪ್ರಾಂತೀಯ ನಾಯಕರ ಉಗಮವಾಯಿತು. ಸ್ವಾಮಿ ದಯಾನಂದ ಸರಸ್ವತಿ, ರಾಜಾ ರಾಮ ಮೋಹನ್ ರಾಯ್ ಮೊದಲಾದವರು ಸಮಾಜದ ಅನಿಷ್ಟ ಮತ್ತು ದುಷ್ಟ ಪದ್ಧತಿಗಳ ವಿರುದ್ಧ ಹೋರಾಡಿದರು.

ರಾಮಕೃಷ್ಣ ಪರಮಹಂಸ, ಶ್ರೀ ಅರಬಿಂದೋ, ಸ್ವಾಮಿ ವಿವೇಕಾನಂದ ಮೊದಲಾದವರು ಧಾರ್ಮಿಕ ಸುಧಾರಣೆ ಮತ್ತು ಸಾಮಾಜಿಕ ಸ್ವಾಭಿಮಾನದ ಪ್ರಚಾರದ ಮೂಲಕ ಸಂಪೂರ್ಣ ಸ್ವಾತಂತ್ರ್ಯದ ಬಯಕೆಯನ್ನು ಸಾರ್ವಜನಿಕರಲ್ಲಿ ಮೂಡಿಸಿದರು. ಇವರಲ್ಲದೆ ಬಂಕಿಮಚಂದ್ರ ಚಟರ್ಜಿ, ಸುಬ್ರಹ್ಮಣ್ಯ ಭಾರತಿ, ರವೀಂದ್ರನಾಥ ಠಾಗೋರ್ ಮೊದಲಾದವರು ಭಾವನಾತ್ಮಕ ಸಾಹಿತ್ಯದ ರಚನೆಯಿಂದ ಸ್ವಾತಂತ್ರ್ಯದ ತುಡಿತಕ್ಕೆ ಉತ್ತೇಜನ ನೀಡಿದರು.

1857ರ ಕ್ರಾಂತಿಯ ನಂತರ ಬ್ರಿಟಿಷರ ಆಳ್ವಿಕೆಯಲ್ಲಿ ಭಾರತದ ಸ್ವರೂಪ ಬದಲಾಯಿತು. ಬ್ರಿಟಿಷರ ದಬ್ಬಾಳಿಕೆಯನ್ನು ಸಹಿಸದ ಭಾರತೀಯರು ಬ್ರಿಟಿಷರನ್ನು ಬಗ್ಗುಬಡಿದೋಡಿಸುವ ಹವಣಿಕೆಯಲ್ಲಿದ್ದರು.

ಈ ಸಂದರ್ಭದಲ್ಲಿ ಅಮೆರಿಕದ ಮಹಾಕ್ರಾಂತಿ, ಫ್ರಾನ್ಸ್ ಮಹಾಕ್ರಾಂತಿ, ರಷ್ಯಾ ಕ್ರಾಂತಿ ಹಾಗೂ ಇಟಲಿಯ ಸ್ವಾತಂತ್ರ್ಯ ಹೋರಾಟದ ಧುರೀಣರಾದ ಮ್ಯಾಜಿನಿ ಮತ್ತು ಗ್ಯಾರಿ ಬಾಲ್ಡಿ ಇವರಿಂದ ಪ್ರಭಾವಿತರಾದ ಭಾರತೀಯ ವಿದ್ಯಾವಂತ ಸಾಹಸಿ ತರುಣರು ಸ್ವಾತಂತ್ರ್ಯ ಗಳಿಸಲು ಕ್ರಾಂತಿಕಾರಿ ಚಟುವಟಿಕೆಗಳನ್ನು ಆರಂಭಿಸಿದರು.

ಸ್ವಾತಂತ್ರ್ಯ ಚಳವಳಿಯ ಗಮನಾರ್ಹ ನಾಯಕ ಸುರೇಂದ್ರನಾಥ ಬ್ಯಾನರ್ಜಿ. ಆದ್ದರಿಂದಲೇ ಇವರನ್ನು ಭಾರತದ ರಾಷ್ಟ್ರೀಯ ಚಳವಳಿಯ ಪಿತಾಮಹಾ ಎಂದು ಕರೆಯುತ್ತಾರೆ. ಇವರು 1867ರಲ್ಲಿ ಇಂಡಿಯನ್ ಅಸೋಷಿಯೇಷನ್‍ನನ್ನು ಮೊಟ್ಟ ಮೊದಲು ಸ್ಥಾಪಿಸಿದರು.

ಕಾಂಗ್ರೆಸ್ ಸಂಸ್ಥೆಯ ಪ್ರಥಮ ಅವೇಶನ ಬೊಂಬಾಯಿಯಲ್ಲಿ ಉಮೇಶ್ ಚಂದ್ರ ಬ್ಯಾನರ್ಜಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಭಾರತೀಯರ ಕಷ್ಟ ಕಾರ್ಪಣ್ಯಗಳ ನಿವಾರಣೆಯ ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸುವುದು ಈ ರಾಷ್ಟ್ರೀಯ ಕಾಂಗ್ರೆಸ್‍ನ ಕಾರ್ಯ ಚಟುವಟಿಕೆಯಾಗಿತ್ತು.

ರಾಷ್ಟ್ರೀಯ ಕಾಂಗ್ರೆಸ್ ಆಗಿನ ನಾಯಕರಾದ ಫಿರೋಷಾ ಷಾ ಮೆಹತಾ, ಗೋಪಾಲಕೃಷ್ಣ ಗೋಖಲೆ, ದಾದಾ ಬಾಯಿ ನವರೋಜಿ, ಸುರೇಂದ್ರನಾಥ ಬ್ಯಾನರ್ಜಿ, ಬದ್ರುದ್ದೀನ್ ತ್ಯಾಬ್ಜಿ, ಬಾಲಗಂಗಾಧರನಾಥ ತಿಲಕ್ ಇವೆಲ್ಲರೂ ಬ್ರಿಟಿಷ್ ಸಾರ್ವಭೌಮತ್ವದಲ್ಲಿ ಸ್ವರಾಜ್ಯವನ್ನು ಪಡೆಯುವ ಉದ್ದೇಶ ಹೊಂದಿದ್ದರು.

ಗಾಂೀಜಿಯವರ ಸತ್ಯಾಗ್ರಹ, ಅಹಿಂಸೆ, ಸ್ವದೇಶಿ ಮಂತ್ರ. ಸತ್ಯ ಮತ್ತು ಅಹಿಂಸೆ ಇವರ ಸತ್ಯಾಗ್ರಹದ ತತ್ವವಾಗಿತ್ತು. ಹಿಂಸೆಗೆ ಚಿಕ್ಕ ಗುಂಪು ಸಿದ್ದವಾದರೆ, ಚಳವಳಿಯಲ್ಲಿ ಭಾಗವಹಿಸಲು ಜನಸಮೂಹವೇ ಸಿದ್ದವಾಗುತ್ತದೆ ಎಂಬುದು ಇವರ ತತ್ವದ ಸಾರವಾಗಿತ್ತು. ಸ್ವದೇಶಿ ಮಂತ್ರ ಗಾಂೀಜಿಯವರ ಒಂದು ರಾಷ್ಟ್ರೀಯ ಅಸ್ತ್ರವಾಗಿತ್ತು.

ಭಾರತವು ಸ್ವರಾಜ್ಯವನ್ನು ಗಳಿಸುವಲ್ಲಿ ಸಂಪೂರ್ಣವಾಗಿ ತಮ್ಮದೇ ಆದ ಮಾರ್ಗ ಆಯ್ಕೆ ಮಾಡುವಲ್ಲಿ ಬಹುಮಟ್ಟಿಗೆ ಮಹಾತ್ಮ ಗಾಂಯವರು ಕಾರಣ. ಗಾಂ 1915ರಲ್ಲಿ ದೇಶಭಕ್ತಿಯ ನವಭಾರತದ ಕನಸೊಂದನ್ನು ಕಟ್ಟಿಕೊಂಡಿದ್ದರು.

ವರ್ಷಗಟ್ಟಲೆ ದೇಶದ ಉದ್ದಗಲಕ್ಕೂ ಸಂಚರಿಸಿ ಭಾರತದ ರಾಜ್ಯಗಳು, ನಗರ ಪಟ್ಟಣಗಳು, ಹಳ್ಳಿಗಳನ್ನೆಲ್ಲ ಸುತ್ತುತ್ತಾ ದೇಶದ ಜನರ ಕುಂದು ಕೊರತೆಗಳ ಬಗ್ಗೆ ತಿಳಿಯಲಾರಂಭಿಸಿದರು. ಈ ಸರಳ ಗಾಂ ಜನಸಾಮಾನ್ಯರ ಕಣ್ಣಿಗೆ ಬೀಳುತ್ತಲೇ ಲಕ್ಷಾಂತರ ಬಡ ಶ್ರೀಸಾಮಾನ್ಯರಲ್ಲಿ ಮಿಂಚಿನ ಸಂಚಾರವಾಗುತ್ತಿತ್ತು.

ಕಾಂಗ್ರೆಸ್ ಧುರೀಣರಾದ ಸಿ.ರಾಜಗೋಪಾಲಾಚಾರಿ, ಜವಹಾರ್‍ಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ, ವಲ್ಲಭಬಾಯಿ ಪಟೇಲ್ ಮೊದಲಾದವರು ರಾಷ್ಟ್ರೀಯವಾದವನ್ನು ರೂಪಿಸುವಲ್ಲಿ ಗಾಂಯವರ ಮುಂದಾಳುತನವನ್ನು ಬೆಂಬಲಿಸಿದರು.

1920ರ ದಶಕದ ಮಧ್ಯದಲ್ಲಿ ಸ್ವರಾಜ್ಯ ಪಕ್ಷ, ಹಿಂದೂ ಮಹಾಸಭಾ, ಭಾರತೀಯ ಕಮ್ಯುನಿಸ್ಟ್ ಪಕ್ಷ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದಂಥ ಸೌಮ್ಯವಾದಿ ಮತ್ತು ತೀವ್ರವಾದಿ ಪಕ್ಷಗಳ ಉದಯದಿಂದ ಭಾರತದ ರಾಜಕೀಯ ವ್ಯಾಪ್ತಿ ಹಿರಿದಾಯಿತು.

ಭಾರತ ಸ್ವಾತಂತ್ರ ಹೋರಾಟ ಇತಿಹಾಸದ ಪುಟಗಳಲ್ಲಿ ಉಪ್ಪಿನ ಸತ್ಯಾಗ್ರಹ ಮತ್ತು ಅಸಹಕಾರ ಚಳವಳಿಗಳು ಅತ್ಯಂತ ಮಹತ್ವದ ಘಟನೆಗಳಾಗಿ ದಾಖಲಾಗಿವೆ.

ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಪಂಜಾಬ್ ಕೇಸರಿ ಲಾಲಾ ಲಜಪತ ರಾಯ್ ಸಾವಿಗೀಡಾದರು. ನನ್ನ ಮೈಮೇಲೆ ಬಿದ್ದ ಪ್ರತಿಯೊಂದು ಲಾಠಿ ಏಟು ಬ್ರಿಟಿಷ್ ಚಕ್ರಾಪತ್ಯದ ಶವದ ಪೆಟ್ಟಿಗೆಗೆ ಒಂದೊಂದು ಮೊಳೆಯಾಗಲಿದೆ ಎಂದು ಅವರು ಸಾವಿನ ದವಡೆಯಲ್ಲೂ ಕೆಚ್ಚೆದೆಯ ಘೋಷಣೆ ಸಾರಿದರು.

1920ರ ಹೊತ್ತಿಗೆ ಕ್ರಾಂತಿಕಾರಿಗಳು ಮತ್ತೆ ಸಂಘಟಿತರಾದರು. ಚಂದ್ರಶೇಖರ್ ಅ ಜಾದ್ ನೇತೃತ್ವದಲ್ಲಿ ಹಿಂದುಸ್ತಾನ್ ಸಮಾಜವಾದಿ ಗಣರಾಜ್ಯ ಸಂಘಟನೆ ರಚನೆಯಾಯಿತು.

ಭಗತ್ ಸಿಂಗ್ ಮತ್ತು ಬಟುಕೇಶ್ವರ್ ದತ್ 1929ರ ಅಕ್ಟೋಬರ್ 8ರಂದು ಕೇಂದ್ರೀಯ ಶಾಸನ ಸಭೆಯಲ್ಲಿ ಸಾರ್ವಜನಿಕ ಸುರಕ್ಷತಾ ಮಸೂದೆ ಮತ್ತು ವ್ಯಾಪಾರ ವಿವಾದಗಳ ಮಸೂದೆ ಅಂಗೀಕರಿಸುವುದನ್ನು ಪ್ರತಿಭಟಿಸಿ, ಸೋಟಕವನ್ನು ಎಸೆದರು, ಸೆಂಟ್ರಲ್ ಅಸೆಂಬ್ಲಿ ಬಾಂಬ್ ಮೊಕದ್ದಮೆಯ ವಿಚಾರಣೆ ನಂತರ ಭಗತ್‍ಸಿಂಗ್, ಸುಖದೇವ್ ಮತ್ತು ರಾಜಗುರು ಅವರನ್ನು 1931ರಂದು ಗಲ್ಲಿಗೇರಿಸಲಾಯಿತು.

ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಭಾರತದ ಹೆಮ್ಮೆಯ ಪುತ್ರ. ಶಸ್ತ್ರಾಸ್ತ್ರ ಹೋರಾಟದ ಮೂಲಕ ಬ್ರಿಟಿಷ್ ದುರಾಡಳಿತವನ್ನು ಕೊನೆಗಾಣಿಸಲು ನೇತಾಜಿ ಭಾರತೀಯ ರಾಷ್ಟ್ರೀಯ ಸೈನ್ಯವನ್ನು ಸಂಘಟಿಸಿದರು. ಅವರ ಅಕಾಲ ಮರಣದಿಂದ ಈ ಪ್ರಯತ್ನ ವಿಫಲವಾಗಿದ್ದು ದೇಶದ ದೊಡ್ಡ ದುರಂತ.

ಎರಡನೇ ಮಹಾ ಸಂಗ್ರಾಮದಲ್ಲಿ ಆರ್ಥಿಕ, ರಾಜಕೀಯ ಮತ್ತು ಸೇನೆಗಳ ಅಪಾರ ಬೆಲೆ ತೆತ್ತಿದ್ದ ಬ್ರಿಟಿಷ್ ಸಾಮ್ರಾಜ್ಯ ಒಂದೆಡೆ ಅಸಹಕಾರ ಚಳವಳಿ ಇನ್ನೊಂದೆಡೆ ಸೇನೆಯ ದಂಗೆಯಂಥ ಆಂದೋಲನದಿಂದ ಎಚ್ಚೆತ್ತ ಭಾರತೀಯರನ್ನು ಸದೆಬಡಿಯುವ ಬಲವನ್ನು ಹೊಂದಿರಲಿಲ್ಲ.

ಈ ಹೋರಾಟಗಳ ಹಿನ್ನೆಲೆಯಲ್ಲಿ ಭಾರತದಲ್ಲಿ ತನ್ನ ಆಳ್ವಿಕೆಯನ್ನು ಮುಂದುವರೆಸುವುದರ ವಿಪರ್ಯಾಸವನ್ನು ಬ್ರಿಟಿಷ್ ಸಾಮ್ರಾಜ್ಯ ಅರಿತುಕೊಂಡಿತು. 1946ರ ಮಧ್ಯದೊಳಗೆ ರಾಜಕೀಯ ಕಾರಣಕ್ಕಾಗಿ ಬಂತರಾದವರನ್ನು ಸರ್ಕಾರ ವಿಮೋಚನೆಗೊಳಿಸಿತು.

ಭಾರತದ ಸಂಪೂರ್ಣ ಸ್ವಾತಂತ್ರವನ್ನು ಪಡೆಯುವ ಗುರಿಯಿಂದ ಕಾಂಗ್ರೆಸ್ ಸರ್ಕಾರದೊಂದಿಗೆ ಮಾತುಕತೆ ಆರಂಭಿಸಿತು. ಜೂನ್ 3, 1947ರಂದು ಭಾರತದ ಕೊನೆಯ ಬ್ರಿಟಿಷ್ ಗೌರ್ನರ್ ಜನರಲ್ ಲಾರ್ಡ್ ಲೂಯಿ ಮೌಂಟ್ ಬ್ಯಾಟನ್ ಜಾತ್ಯತೀತ ಭಾರತ ಮತ್ತು ಮುಸ್ಲಿಂ ಪಾಕಿಸ್ತಾನ ಎಂದು ಎರಡು ಭಾಗಗಳಾಗಿ ಭಾರತದ ವಿಭಜನೆಯನ್ನು ಪ್ರಕಟಿಸಿದರು.

1947ರ ಆಗಸ್ಟ್ 15ರಂದು ಅಕಾರ ಹಸ್ತಾಂತರ ಆಯಿತು. ಭಾರತ ಸ್ವತಂತ್ರ ರಾಷ್ಟ್ರವಾಯಿತು. ತ್ರಿವರ್ಣ ಧ್ವಜ ಎಲ್ಲೆಡೆ ಸಡಗರ-ಸಂಭ್ರಮದಿಂದ ಹಾರಾಡಿತು. ಸ್ವತಂತ್ರ ಭಾರತದ ಪ್ರಥಮ ಪ್ರಧಾನಮಂತ್ರಿ ಜವಹಾರ್ ಲಾಲ್ ನೆಹರು ಮತ್ತು ಉಪ ಪ್ರಧಾನಮಂತ್ರಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಲಾರ್ಡ್ ಮೌಂಟ್ ಬ್ಯಾಟನ್ ಅವರನ್ನು ಭಾರತದ ಗೌರ್ನರ್ ಜನರಲ್ ಆಗಿ ಮುಂದುವರೆಯಲು ಆಮಂತ್ರಿಸಿದರು.

ಅವರ ಸ್ಥಳವನ್ನು ಜೂನ್ 1948ರಲ್ಲಿ ಚಕ್ರವರ್ತಿ ರಾಜಗೋಪಾಲಾಚಾರಿ ತುಂಬಿದರು.ಭಾರತೀಯರ ಪಾಲಿಗೆ 30ನೇ ಜನವರಿ 1948 ಘೋರ ದುರಂತದ ದಿನವಾಯಿತು. ಭಾರತೀಯ ಸ್ವಾತಂತ್ರ್ಯ ಆಂದೋಲನದಲ್ಲಿ ರಾಜಕೀಯ ಮತ್ತು ಅಧ್ಯಾತ್ಮಿಕ ನಾಯಕರಾಗಿದ್ದ ರಾಷ್ಟ್ರಪಿತ ಮಹಾತ್ಮ ಗಾಂಯವರು ನಾಥುರಾಮ್ ಗೊಡ್ಸೆ ಗುಂಡಿಗೆ ಬಲಿಯಾದರು.

ಹುತಾತ್ಮರು ನಡೆಸಿದ ಹೋರಾಟ, ತ್ಯಾಗ, ಬಲಿದಾನದ ಫಲವಾಗಿ ನಾವು ಇಂದು ಸ್ವಾತಂತ್ರ್ಯದ ಆನಂದವನ್ನು ಸವಿಯುತ್ತಿದ್ದೇವೆ. ಈ ಸ್ವಾತಂತ್ರ್ಯ ಹೋರಾಟಗಾರರಿಗೆ ನಮ್ಮ ನಮನ ಸಲ್ಲಿಸುತ್ತಾ, ಭವ್ಯ ಭಾರತದ ನಿರ್ಮಾಣಕ್ಕೆ ನಾವೆಲ್ಲ ದೃಢಸಂಕಲ್ಪ ಮಾಡೋಣ.

Facebook Comments

Sri Raghav

Admin