BIG NEWS : ಚಿನ್ನದ ಮೇಲೆ ಮೋದಿ ಕಣ್ಣು : ನೋಟ್ ಬ್ಯಾನ್ ಮಾದರಿಯಲ್ಲೇ ಕಾದಿದೆ ಶಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಆ.1- ದೇಶದಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ಮೊದಲ ಹಂತವಾಗಿ 500 ಹಾಗೂ 1000 ಮುಖಬೆಲೆಯ ನೋಟುಗಳನ್ನು ಅಮಾನೀಕರಣ ಮಾಡಿದ್ದ ಕೇಂದ್ರ ಸರ್ಕಾರ ಇದೀಗಬಂಗಾರದ ಬೇಟೆಗೆ ಮುಂದಾಗಿದೆ.

ಲೆಕ್ಕವಿಲ್ಲದಷ್ಟು ಬಂಗಾರವನ್ನು ಖರೀದಿ ಮಾಡಲಾಗಿದೆ ಎಂಬ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೀಗ ತೆರಿಗೆ ಪಾವತಿ ಮಾಡದಿರುವವರ ಬಂಗಾರದ ಮೇಲೆ ಕಣ್ಣಿಟ್ಟಿದೆ.

ಆದಾಯಕ್ಕಿಂತ ಹೆಚ್ಚು ಹಾಗೂ ಬಂಗಾರ ಖರೀದಿಸಿರುವುದಕ್ಕೆ ದಾಖಲೆಗಳು ಇಲ್ಲದಿದ್ದರೆ ಅದನ್ನು ವಶಪಡಿಸಿಕೊಳ್ಳಲು ಗಂಭೀರ ಚಿಂತನೆ ನಡೆಸಲಾಗಿದ್ದು, ಯಾವುದೇ ಸಂದರ್ಭದಲ್ಲೂ ಮೋದಿ ಅವರು ಘೋಷಣೆ ಮಾಡಲಿದ್ದಾರೆ ಎಂದು ಕೇಂದ್ರದ ಉನ್ನತ ಮೂಲಗಳು ತಿಳಿಸಿವೆ.

ವಿಶ್ವದಲ್ಲೇ ಅತಿಹೆಚ್ಚು ಬಂಗಾರ ಖರೀದಿಸಿರುವ ದೇಶಗಳ ಪೈಕಿ ಭಾರತ 2ನೇ ಸ್ಥಾನದಲ್ಲಿದೆ. ಅನೇಕರು ತೆರಿಗೆಯನ್ನೇ ಕಟ್ಟದೆ ಸರ್ಕಾರಕ್ಕೆ ಕೋಟ್ಯಂತರ ರೂ. ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಬಂಗಾರದ ಬೇಟೆಗೆ ಸಜ್ಜಾಗಿದೆ.

ಇದರ ಜೊತೆಗೆ ಕಳೆದ ಐದು ತಿಂಗಳಿನಿಂದ ಕೊರೊನಾ ಆವರಿಸಿದ್ದು, ಸರ್ಕಾರದ ಬೊಕ್ಕಸಕ್ಕೆ ಭಾರೀ ಪ್ರಮಾಣದ ನಷ್ಟವಾಗಿದೆ. ಇದನ್ನು ಸರಿದೂಗಿಸಲು ಕಳ್ಳ ಬಂಗಾರದ ಮೇಲೆ ಕೇಂದ್ರದ ಕಣ್ಣು ಬಿದ್ದಿದೆ.

ನೋಟುಗಳ ಅಮಾನೀಕರಣದಿಂದ ನಗದು ಮೂಲಕ ನಡೆಯುತ್ತಿದ್ದ ಗೋಲ್ಡ್ ಸ್ಮಗ್ಲಿಂಗ್ ಮೇಲೆ ಈಗಾಗಲೇ ಪರಿಣಾಮ ಬೀರಿದೆ. ಇದರ ಜೊತೆಗೆ ಮನೆಗಳಲ್ಲಿ ಇಟ್ಟುಕೊಂಡಿರುವ ಬಂಗಾರಕ್ಕೂ ಸರ್ಕಾರ ಹೊಸ ನಿಯಮಾವಳಿ ಜಾರಿಗೊಳಿಸುವ ಸಾಧ್ಯತೆ ಇದೆ.

ಕೊರೋನಾ ಶುರುವಾಗುವ ಮುನ್ನವೇ ದೇಶದ ಆರ್ಥಿಕತೆಯ ಕುಸಿತ ಆರಂಭವಾಗಿತ್ತು. ಅದು ಲಾಕ್‍ಡೌನ್ ಬಳಿಕ ಇನ್ನೂ ದುಸ್ಥಿತಿ ತಲುಪಿದೆ. ಆರ್ಥಿಕ ವಹಿವಾಟು ನಡೆಯದೆ ಜಿಎಸ್ ಟಿ ಸಂಗ್ರಹವೂ ಆಗುತ್ತಿಲ್ಲ. ಇದರಿಂದ ಕೇಂದ್ರ ಸರ್ಕಾರದ ಬೊಕ್ಕಸ ಖಾಲಿಯಾಗಿದೆ. ಪರಿಣಾಮರಾಜ್ಯ ಸರ್ಕಾರಗಳಿಗೆ ನಿಯಮಾನುಸಾರ ಕೊಡಲೇಬೇಕಾದ ಜಿಎಸ್‍ಟಿ ಪರಿಹಾರದ ಪಾಲಿನ ಹಣವನ್ನೂ ಕೊಡಲಾಗುತ್ತಿಲ್ಲ.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈಗ ಬೊಕ್ಕಸ ತುಂಬಿಸಿಕೊಳ್ಳಲು ಹರಸಾಹಸ ಮಾಡುತ್ತಿದೆ. ಹೇಗಾದರೂ ಹಣ ಹೊಂದಿಸಲೇಬೇಕಿರುವ ದರ್ದಿನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜನರ ಬಳಿ ಇರುವ ಚಿನ್ನಕ್ಕೆ ಕನ್ನ ಹಾಕಲು ಹೊರಟಿದೆ.

ಅದೇಗೆಂದರೆ ಇನ್ನು ಮುಂದೆ ಜನ ತೆರಿಗೆ ಘೋಷಿಸಿದಂತೆ ತಮ್ಮ ಬಳಿ ಎಷ್ಟೆಷ್ಟು ಚಿನ್ನ ಇದೆ ಎಂಬುದನ್ನು ಘೋಷಿಸಿಕೊಳ್ಳಬೇಕು. ತೆರಿಗೆ ಕಟ್ಟದ ಚಿನ್ನ ಅಥವಾ ದಾಖಲೆಯೇ ಇಲ್ಲದ ಚಿನ್ನ ಇದ್ದರೆ ಅದಕ್ಕೆ ತೆರಿಗೆ ಮತ್ತು ದಂಡವನ್ನು ಕಟ್ಟಬೇಕು. ಈ ರೀತಿ ತೆರಿಗೆ ಮತ್ತು ದಂಡದ ಮೂಲಕ ಬರುವ ಹಣದಿಂದ ಖಜಾನೆ ತುಂಬಿಸಿಕೊಳ್ಳಬಹುದು ಎಂಬುದು ಕೇಂದ್ರದ ಚಿಂತನೆ.

ಸದ್ಯ ಮೋದಿ ಸರ್ಕಾರದ ಮುಂದೆ ಚಿನ್ನ ಕ್ಷಮಾದಾನ ಯೋಜನೆಯನ್ನು ಜಾರಿಗೆ ತರುವ ಪ್ರಸ್ತಾಪವಿದೆ. ಈ ಪ್ರಸ್ತಾಪದ ಪ್ರಕಾರ, ದೇಶದ ಜನರು ತಮ್ಮ ಬಳಿ ದಾಖಲೆ ಇಲ್ಲದ ಚಿನ್ನವನ್ನು ತೆರಿಗೆ ಅಧಿಕಾರಿಗಳ ಮುಂದೆ ಘೋಷಿಸಿಕೊಂಡು ತೆರಿಗೆ ಕಟ್ಟಬೇಕು.

ಜತೆಗೆ ದಂಡ ಕಟ್ಟಬೇಕು. ಈ ಯೋಜನೆ ಈಗಿನ್ನು ಪ್ರಾಥಮಿಕ ಹಂತದಲ್ಲಿದೆ. ಇನ್ನೊಂದು ಸುತ್ತಿನ ಸಮಾಲೋಚಿಸಿ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.

ನರೇಂದ್ರ ಮೋದಿ ಅವರು ಚಿನ್ನದ ಮೇಲೆ ಕಣ್ಣು ಹಾಕುತ್ತಿರುವುದು ಇದು ಮೋದಲೇನಲ್ಲ. 2015ರಲ್ಲಿ ಜನ ತಮ್ಮ ಬಳಿ ಇರುವ ಚಿನ್ನದ ಪ್ರಮಾಣ ಘೋಷಿಸಿಕೊಳ್ಳುವ ಮತ್ತು ದಾಖಲೆ ಇಲದ ಚಿನ್ನದ ಮೇಲೆ ತೆರಿಗೆ ಮತ್ತು ದಂಡ ವಿಧಿಸಲು ಮುಂದಾಗಿದ್ದರು. ಆದರೆ ಸಾರ್ವಜನಿಕ ವಲಯದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರದ ಕಾರಣ ಇದನ್ನು ಕೈಬಿಡಲಾಗಿತ್ತು.

ಪ್ರಸ್ತುತ ದೇಶ ವಿಪರೀತ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಇದರಿಂದ ಹೊರಬರುವ ಮಾರ್ಗೊಪಾಯಗಳನ್ನು ಕಂಡುಕೊಳ್ಳಬೇಕಾಗಿದೆ. ಬೇರೆ ಸಂಪನ್ಮೂಲ ಮೂಲಗಳು ಸಿಗದ ಹಿನ್ನೆಲೆಯಲ್ಲಿ ಜನಸಾಮಾನ್ಯರ ಚಿನ್ನಕ್ಕೆ ತೆರಿಗೆ ಮತ್ತು ದಂಡ ವಿಧಿಸಿ ಬೊಕ್ಕಸ ತುಂಬಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ.

ಇಂಥದೊಂದು ಪ್ರಸ್ತಾಪ ಈಗ ಕೇಂದ್ರ ಹಣಕಾಸು ಇಲಾಖೆಯಿಂದ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ರವಾನೆಯಾಗಿದೆ. ಅಂತಿಮವಾಗಿ ಜನಸಾಮಾನ್ಯರ ಚಿನ್ನದ ಮೇಲೆ ತೆರಿಗೆ ಮತ್ತು ದಂಡ ವಿಧಿಸುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಟ್ಟ ವಿಷಯವಾಗಿದೆ.

Facebook Comments

Sri Raghav

Admin