80 ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿ ಪಾಕ್‌ಗೆ ಬಿಸಿ ಮುಟ್ಟಿಸಿದ ಭಾರತದ ಹ್ಯಾಕರ್ಸ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.18-ಭಾರತದ 74ನೆ ಸ್ವಾತಂತ್ರ್ಯೋತ್ಸವದಂದು ಭಾರತೀಯ ವಿರೋ ದುಷ್ಕøತ್ಯದಲ್ಲಿ ತೊಡಗಿದ್ದ ಪಾಕಿಸ್ತಾನದ ದುಷ್ಟರಿಗೆ ಭಾರತೀಯ ಹ್ಯಾಕರ್‍ಗಳು ದಿಟ್ಟ ಪ್ರತ್ಯುತ್ತರದ ತಿರುಗೇಟು ನೀಡಿದ್ದಾರೆ.

ಆಗಸ್ಟ್ 15ರಂದು ಇಡೀ ದೇಶ ಸ್ವಾತಂತ್ರ್ಯೋತ್ಸವದ ಸಡಗರ ಮತ್ತು ಸಂಭ್ರಮದಲ್ಲಿರುವಾಗಲೇ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತ ವಿರೋಧ ಚಟುವಟಿಕೆಗಳನ್ನು ನಡೆಸದಂತೆ ಪಾಕಿಸ್ತಾನ ಮತ್ತು ಚೀನಾಗೆ ಖಡಕ್ ಎಚ್ಚರಿಕೆ ನೀಡಿದಾಗಲೇ ಮತ್ತೊಂಡೆ ಭಾರತೀಯ ಹ್ಯಾಕರ್‍ಗಳು ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದ್ದಾರೆ.

ಭಾರತ ಸ್ವಾತಂತ್ರೋತ್ಸವದ ದಿನದಂದು ಪಾಕಿಸ್ತಾನ ವೆಬ್‍ಸೈಟ್‍ಗಳಲ್ಲಿ ಕಾಶ್ಮೀರ ವಿವಾದ ಮತ್ತು ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಷಯವನ್ನು ಕೆದಕಿದರು ಆದರೆ ಭಾರತೀಯ ಹ್ಯಾಕರ್‍ಗಳು ಪಾಕಿಸ್ತಾನದ 80ಕ್ಕೂ ಹೆಚ್ಚು ಇಂಥ ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿದರಲ್ಲದೇ ಅವುಗಳಲ್ಲಿ ಭಾರತದ ತ್ರಿವರ್ಣ ಧ್ವಜಗಳನ್ನು ಹಾರಿಸಿದರು.

ಭಾರತೀಯ ಹ್ಯಾಕರ್‍ಗಳ ದೇಶಭಕ್ತಿ ಮತ್ತು ಚಾಣಾಕ್ಷತನಕ್ಕೆ ಪಾಕ್ ಹ್ಯಾಕರ್‍ಗಳು ತಬ್ಬಿಬ್ಬಾದರು. ಭಾರತೀಯ ಹ್ಯಾಕರ್‍ಗಳಿಗೆ ಯಾವ ರೀತಿ ಪ್ರತ್ಯುತ್ತರ ನೀಡಬೇಕೆಂದು ದಿಕ್ಕು ತೋಚದೇ ಪಾಕ್ ವೆಬ್‍ಸೈಟ್‍ಗಳು ಕಕ್ಕಾಬಿಕ್ಕಿಯಾದವು.

ಭಾರತೀಯರ ಹ್ಯಾಕರ್‍ಗಳು ಗುಂಪೊಂದಕ್ಕೆ ಸ್ವಾತಂತ್ರ್ಯ ದಿನಾಚರಣೆಯಂದು ಪಾಕಿಸ್ತಾನ ವೆಬ್‍ಸೈಟ್‍ಗಳ ದುಷ್ಕøತ್ಯಗಳು ಪತ್ತೆಯಾಯಿತು. ಒಂದಾದ ಮೇಲೆ ಒಂದರಂತೆ 80ಕ್ಕೂ ಹೆಚ್ಚು ಪಾಕ್ ವೈಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿದ ಭಾರತೀಯ ಹ್ಯಾಕರ್‍ಗಳು ಭಾರತದ ಸಾರ್ಬಭೌಮತ್ವದ ಸಂದೇಶ ಸಾರಿ ಪಾಕ್‍ಗೆ ತಿರುಗೇಟು ನೀಡಿದ್ದಾರೆ.

ತಮ್ಮನ್ನು ಇಂಡಿಯನ್ ಸೈಬರ್ ಟ್ರೂಪ್ ಎಂದು ಘೋಷಿಸಿಕೊಂಡಿರುವ ದೇಶಭಕ್ತ ಭಾರತೀಯ ಹ್ಯಾಕರ್‍ಗಳು ಪಾಕಿಸ್ತಾನ ವೈಬ್‍ಸೈಟ್‍ಗಳಲ್ಲಿ ಭಾರತೀಯ ತ್ರಿವರ್ಣ ಧ್ವಜಗಳನ್ನೂ ಸಹ ಹಾರಾಡುವಂತೆ ಮಾಡಿದ್ದಾರೆ.

ಅಲ್ಲದೆ, ಶ್ರೀರಾಮನ ಚಿತ್ರವನ್ನೂ ಕೂಡ ಪೋಸ್ಟ್ ಮಾಡಿ ನಾವು ಶ್ರೀರಾಮನ ಭಕ್ತರು. ನಾವು ಪಾಕಿಸ್ತಾನದಲ್ಲೂ ರಾಮನ ಮಂದಿರ ನಿರ್ಮಿಸುತ್ತೇವೆ ಎಂದು ಘೋಷಿಸಿದ್ದಾರೆ. ತಮ್ಮ ವೆಬ್‍ಸೈಟ್‍ಗಳು ಒಂದಾದ ಮೇಲೆ ಒಂದರಂತೆ ಭಾರತೀಯ ಹ್ಯಾಕರ್‍ಗಳಿಂದ ಹ್ಯಾಕ್ ಆಗುತ್ತಿದ್ದಂತೆ ಪಾಕ್ ಹ್ಯಾಕರ್‍ಗಳು ಕಕ್ಕಾಬಿಕ್ಕಿಯಾದರು.

Facebook Comments

Sri Raghav

Admin