ಮಾನವ ಕಳ್ಳ ಸಾಗಣೆ: ಭಾರತೀಯನಿಗೆ 5ವರ್ಷ ಜೈಲು

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್‍ಟನ್, ಏ.24- ಭಾರತೀಯರು ಸೇರಿದಂತೆ ಹಲವಾರು ವಿದೇಶಿಯರನ್ನು ಅಮೆರಿಕಾಗೆ ಅಕ್ರಮವಾಗಿ ಸಾಗಿಸುತ್ತಿದ್ದ ಅಪರಾಧ ಯದ್ವಿಂದರ್ ಸಿಂಗ್ ಸಂಧು(61) ಎಂಬ ಭಾರತೀಯನಿಗೆ 5ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಸುಮಾರು 400ಅನ್ಯ ದೇಶೀಯರನ್ನು ಅಮೆರಿಕಾ ದೇಶಕ್ಕೆ 2013-15ಸಾಲಿನಲ್ಲಿ ಖುದ್ದಾಗಿ ತಾನೆ ಅಕ್ರಮವಾಗಿ ಸಾಗಿಸಿರುವುದಾಗಿ ತಪ್ಪೋಪ್ಪಿಕೊಂಡಿದ್ದಾನೆ ಎಂದು ಅಮೆರಿಕಾದ ನ್ಯಾಯಾಂಗ ಇಲಾಖೆ ಹೇಳಿಕೆ ನೀಡಿದೆ.

ಡೊಮಿನಿಕನ್ ರಿಪಬ್ಲಿಕ್, ಹೈಟಿ, ಪೋರ್ಟೊ ರಿಕೊ, ಭಾರತ ಹಾಗೂ ಇನ್ನಿತರೆ ದೇಶಗಳನ್ನು ಕೇಂದ್ರಗಳನ್ನಾಗಿ ಇರಿಸಿಕೊಂಡು ಹಲವಾರು ಹೆಸರುಗಳನ್ನು ಬಳಸಿ ವಿದೇಶಿಯರ ಕಳ್ಳಸಾಗಣೆಯ ಮುಂದಾಳತ್ವವನ್ನು ಸಿಂಗ್ ವಹಿಸಿಕೊಂಡಿದ್ದ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ