ಅಮೆರಿಕನ್ನರಿಗೆ ವಂಚಿಸಿದ್ದ ಭಾರತೀಯನಿಗೆ 22 ವರ್ಷ ಜೈಲು..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್,ಸೆ.17-ನಾಲ್ಕು ಸಾವಿರಕ್ಕೂ ಹೆಚ್ಚು ಅಮೆರಿಕನ್ನರಿಗೆ 10 ಮಿಲಿಯನ್ ಡಾಲರ್ ವಂಚಿಸಿರುವ ಭಾರತೀಯನಿಗೆ ಅಲ್ಲಿನ ನ್ಯಾಯಾಲಯ 22 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ. ಅಹಮದಾಬಾದ್‍ನಲ್ಲಿ ಕಾಲ್ ಸೆಂಟರ್ ನಡೆಸುತ್ತಿರುವ ಶೇಹಾಜ್‍ದ್ ಖಾನ್ ಪಠಾಣ್ ಶಿಕ್ಷೆಗೊಳಗಾಗಿರುವ ಭಾರತೀಯ.

ಈತ ಸ್ವಯಂಚಾಲಿತ ಕರೆಗಳ ಮೂಲಕ ಅಮೆರಿಕನ್ನರನ್ನು ಸಂಪರ್ಕಿಸಿ ಎಲೆಕ್ಟ್ರಾನಿಕ್ ಹಣ ವರ್ಗಾವಣೆ ಮೂಲಕ ಬಲ್ಕ್ ಕ್ಯಾಶ್ ಕಳುಹಿಸುವಂತೆ ನಂಬಿಸಿ ವಂಚಿಸಿರುವ ಆರೋಪಕ್ಕೆ ಗುರಿಯಾಗಿದ್ದ.

ಸುಮಾರು ನಾಲ್ಕು ಸಾವಿರ ಅಮೆರಿಕನ್ನರಿಗೆ ರೋಬೊ ಕಾಲ್ ವಂಚನೆ ಮಾಡಿರುವ ಪಠಾಣ್ ಅವರಿಗೆ 22 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ ಎಂದು ಅಮೆರಿಕಾದ ವರ್ಜಿನಿಯಾ ಪ್ರಾಂತ್ಯದ ಪ್ರಭಾರಿ ಅಟಾರ್ನಿ ಜನರಲ್ ರಾಜ್ ಪರೇಖ್ ತಿಳಿಸಿದ್ದಾರೆ.

Facebook Comments