ಭಾರತೀಯ ನೌಕಾಪಡೆಯಲ್ಲಿ 400 ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

ಭಾರತೀಯ ನೌಕಾಪಡೆ (Indian Navy) ಇದು ಭಾರತೀಯ ರಕ್ಷಣಾ ಪಡೆಗಳ ನೌಕಾ ಅಂಗ. ಇದು ಜಗತ್ತಿನ ಐದನೇಯ ಅತಿ ದೊಡ್ಡ ನೌಕಾಪಾಡೆಯಾಗಿದ್ದು, ಇದರಲ್ಲಿ ಸುಮಾರು 55,000 ಜನರು ಕಾರ್ಯನಿರತರಾಗಿದ್ದಾರೆ. ಇವರಲ್ಲಿ ಸುಮಾರು 5,000 ಜನ ನೌಕಾ ವಾಯುಪಡೆಗೆ ಸೇರಿದ್ದು ಮತ್ತು ಸುಮಾರು 2000 ಜನ ನೌಕಾ ಕಮಾಂಡೋಗಳಾಗಿದ್ದಾರೆ.

ಭಾರತೀಯ ನೌಕಾಪಡೆ 155 ನೌಕೆಗಳನ್ನು ಹೊಂದಿದ್ದು, ಐ.ಎನ್.ಎಸ್.ವಿರಾಟ್ ಎಂಬ ವಾಯು ಯುದ್ಧ ನೌಕೆಯನ್ನು ಹೊಂದಿದೆ. ಸಂಪೂರ್ಣ ಏಷ್ಯಾ ಖಂಡದಲ್ಲಿರುವ ಎರಡು ವಾಯು ಯುದ್ಧ ನೌಕೆಗಳಲ್ಲಿ ಇದು ಒಂದು.

ಭಾರತೀಯ ನೌಕಾಪಡೆಯಲ್ಲಿ 400 ಹುದ್ದೆಗಳ ನೇಮಕಾತಿ:ಭಾರತೀಯ ನೌಕಾಪಡೆಯ 400 ಹುದ್ದೆಗಳ ನೇಮಕಾತಿಗಾಗಿ ಭಾರತೀಯ ನೌಕಾಪಡೆಯ ನೇಮಕಾತಿ 2019 ಅಧಿಸೂಚನೆಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ನಾವಿಕ ಹುದ್ದೆಗಳಿಗೆ ಸೇರಬಾಯಿಸುವರು ಅಭ್ಯರ್ಥಿಯು 01-08-2019 ಅಥವಾ ಅದಕ್ಕೂ ಮೊದಲು ಆನ್‌ಲೈನ್ ಅರ್ಜಿಯನ್ನು ಅರ್ಜಿ ಸಲ್ಲಿಸಬಹುದು.

ಭಾರತೀಯ ನೌಕಾಪಡೆಯಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸರ್ಕಾರದಿಂದ ಮಾನ್ಯತೆ ಪಡೆದ ಶಾಲಾ ಶಿಕ್ಷಣ ಮಂಡಳಿಗಳಿಂದ ಅಭ್ಯರ್ಥಿ ಮೆಟ್ರಿಕ್ಯುಲೇಷನ್ ( 10 ನೇ ತರಗತಿ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಅಧಿಸೂಚನೆಯ ಕೊನೆಯ ದಿನಾಂಕದಂತೆ ಅಭ್ಯರ್ಥಿಗಳು 01 ಏಪ್ರಿಲ್ 2000 ರಿಂದ 31 ಮಾರ್ಚ್ 2003 ರ ನಡುವೆ ಜನಿಸಬೇಕು. . ಇನ್ನು ಎಸ್‌ಸಿ / ಎಸ್‌ಟಿ ಅರ್ಜಿದಾರರಿಗೆ ಯಾವುದೇ ರೀತಿಯ ಶುಲ್ಕ ಇಲ್ಲ, ಇತರರು ಅರ್ಜಿದಾರರಿಗೆ ರೂ. 205 / – ಶುಲ್ಕ ನಿಗದಿ ಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಕಂಪ್ಯೂಟರ್ ಆಧಾರಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಈ ಅಧಿಸೂಚನೆ ಪರಿಶೀಲಿಸಿ:

Facebook Comments