ಪತಿಯನ್ನು ತುಂಡು ತುಂಡಾಗಿ ಕತ್ತರಿಸಿದ್ದ ಪತ್ನಿಗೆ ಮರಣದಂಡನೆ..!

ಈ ಸುದ್ದಿಯನ್ನು ಶೇರ್ ಮಾಡಿ

ದುಬೈ,ಆ.26- ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ದೇಹವನ್ನು ತುಂಡರಿಸಿ ಚೀಲಗಳಲ್ಲಿ ತುಂಬಿ ನೀರಿನ ತೊಟ್ಟಿಯಲ್ಲಿ ಹಾಕಿದ್ದ ಭೀಬತ್ಸ ಕೊಲೆ ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ ಮಹಿಳೆಗೆ ಇಲ್ಲಿನ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಸಲಾಗಿದೆ.

ಅಲ್ ದೀದ್ ನಿವಾಸಿ ನಿಮಿಶಾ ಪ್ರಿಯಾ(30) ಮರಣದಂಡನೆಗೆ ಒಳಗಾಗಿರುವ ಪತ್ನಿ. ಈಕೆ ವೃತ್ತಿಯಲ್ಲಿ ದಾದಿಯಾಗಿದ್ದಾಳೆ. ಪತಿ ತಲಾಲ್ ಅಬ್ದು ಮಹ್ದಿಯನ್ನು ಕೊಲೆ ಮಾಡಿ, ಅವನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಚೀಲಗಳಲ್ಲಿ ತುಂಬಿ ಮನೆಯ ಮೇಲಿರುವ ನೀರಿನ ತೊಟ್ಟಿಯಲ್ಲಿ ಹಾಕಿದ್ದಳು.

ನೀರಿನ ತೊಟ್ಟಿಯಿಂದ ದುರ್ವಾಸನೆಯ ಬರುತ್ತಿದ್ದ ಬಗ್ಗೆ ಅನುಮಾಗೊಂಡ ಅಕ್ಕಪಕ್ಕದ ಮನೆಯವರು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರು.  ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ನೀರಿನ ತೊಟ್ಟಿಯಲ್ಲಿ ತುಂಡರಿಸಿದ ಮಾಂಸದುಂಡೆಗಳಿದ್ದ ಚೀಲಗಳು ಪತ್ತೆಯಾಗಿದ್ದವು.

ಪೆÇಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದು ಗೊತ್ತಾಗಿದೆ. ಈಗ ನ್ಯಾಯಾಲಯ ಆಕೆಗೆ ಮರಣದಂಡನೆ ಶಿಕ್ಷೆ ವಿಸಿದೆ.

Facebook Comments

Sri Raghav

Admin