ಭಾರತೀಯ ಜಲಗಡಿ ಪ್ರವೇಶಿಸಿ ಬೇಹುಗಾರಿಕೆ ನಡೆಸಿದ ಚೀನಿ ನೌಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ಮಲಕಾ ಜಲಸಂಧಿ, ಸೆ.18- ಇಂಡೋ-ಚೀನಾ ಗಡಿ ಪ್ರಾಂತ್ಯಗಳಲ್ಲಿ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಕಮ್ಯೂನಿಸ್ಟ್ ದೇಶದ ನೌಕೆಯೊಂದು ಹಿಂದೂ ವiಹಾಸಾಗರ ಪ್ರದೇಶದ ಭಾರತೀಯ ಜಲಗಡಿಯನ್ನು ಪ್ರವೇಶಿಸಿ ಬೇಹುಗಾರಿಕೆ ನಡೆಸಿರುವ ಆತಂಕಕಾರಿ ಸಂಗತಿ ಬಹಿರಂಗಗೊಂಡಿದೆ.

ಚೀನಾದ ಸಂಶೋಧನೆ ಮತ್ತು ಸರ್ವೆ ನೌಕೆ ಯೌನ್ ವಾಂಗ್ ಹಿಂದೂ ಮಹಾಸಾಗರದ ಮಲಕಾ ಜಲಸಂಧಿ ಮಾರ್ಗವಾಗಿ ಭಾರತೀಯ ಜಲಗಡಿಯನ್ನುಇತ್ತೀಚೆಗೆ ಪ್ರವೇಶಿಸಿ ಕೆಲವು ದಿನಗಳ ಕಾಲ ಲಂಗರು ಹಾಕಿದ್ದ ಸಂಗತಿ ಬೆಳಕಿಗೆ ಬಂದಿದೆ.

ಭಾರತೀಯ ನೌಕಾಪಡೆಯ ರೇಡಾರ್‍ನಲ್ಲಿ ಚೀನಿ ನೌಕೆಯ ಚಲನವಲನಗಳು ಕಂಡುಬಂವಿದೆ. ಕೆಲವು ದಿನಗಳ ಕಾಲ ಭಾರತೀಯ ಜಲ ಗಡಿ ಪ್ರದೇಶಗಳ ಮೇಲೆ ನಿಗಾ ವಹಿಸಿ ಕೆಲವು ಮಾಹಿತಿಗಳನ್ನು ಸಂಗ್ರಹಿಸಿ ಈ ನೌಕೆ ಹಿಂದಿರುಗಿದೆ.

ಈ ಸಂಶೋಧನಾ/ಸರ್ವೇ ನೌಕೆ 11,000 ಡಿಡಬ್ಲ್ಯುಟಿ ಸಾಮಥ್ರ್ಯ ಹೊಂದಿದೆ. ಚೀನಾದಯೌನ್ ವಾಂಗ್ ಹಡಗು ಜಲಗಡಿಯಲ್ಲಿ ಲಂಗರು ಹಾಕಿದಾಗಿನಿಂದ ಭಾರತೀಯ ನೌಕಾ ಪಡೆ ಇದರ ಮೇಲೆ ಹದ್ದಿನ ಕಣ್ಣಿನ ನಿಗಾ ಇಟ್ಟು ಕೆಲವು ಮಾಹಿತಿಗಳನ್ನು ಸಂಗ್ರಹಿಸಿದೆ.

ಈ ನೌಕೆ ಭಾರತೀಯ ಜಲಗಡಿ ಮತ್ತು ಅದಕ್ಕೆ ಸಂಬಂಧಪಟ್ಟ ಸಂಗತಿಗಳ ಬಗ್ಗೆ ನಿರಂತರ ನಿಗಾ ವಹಿಸಿರುವುದು ಪತ್ತೆಯಾಗಿದೆ. ಕೆಲವು ದಿನಗಳ ಬಳಿಕ ಇದು ಚೀನಾಗೆ ಹಿಂದಿರುಗಿದೆ. ಚೀನಾದ ಸಂಶೋಧನಾ ಹಡಗುಗಳು ಹಿಂದು ಮಹಾಸಾಗರ ಮತ್ತು ಪೆಸಿಫಿಕ್ ಸಾಗರ ಪ್ರದೇಶಗಳಿಗೆ ಅಗಾಗ ಬಂದು ಸಂಶೋಧನೆ ನೆಪದಲ್ಲಿ ಕೆಲವು ಮಾಹಿತಿಗಳನ್ನು ಸಂಗ್ರಹಿಸಿವೆ.

2019ರಲ್ಲು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಸಮೀಪ ಚೀನಾದ ಸಂಶೋಧನಾ ನೌಕೆಯೊಂದು ಬಂದಿತ್ತು. ನಂತರ ಕರಾವಳಿ ರಕ್ಷಣಾ ಪಡೆಅದನ್ನು ಹಿಂದಕ್ಕೆ ಕಳುಹಿಸಿತ್ತು. ಇಂಡೋ-ಚೀನಾಗಡಿ ಭಾಗಗಳಲ್ಲಿ ಪದೇ ಪದೇಕ್ಯಾತೆತೆಗೆಯುತ್ತಿರುವಚೀನಾ ಸೇನೆ ಲಡಾಕ್ ಪ್ರಾಂತ್ಯದ ನಂತರ ಈಶಾನ್ಯರಾಜ್ಯಅರುಣಾಚಲ ಪ್ರದೇಶದಲ್ಲೂ ತನ್ನ ಯೋಧರ ಜಮಾವಣೆಯನ್ನು ಹೆಚ್ಚಿಸಿದೆ.

ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯೂತನ್ನ ಬಲವನ್ನುಅಲ್ಲಿ ವೃದ್ದಿಸಿದ್ದು ಕದನ ಕಾರ್ಮೋಡದ ವಾತಾವರಣ ಯಥಾಸ್ಥಿತಿಯಲ್ಲಿಯೇ ಇದೆ. ಪೂರ್ವ ಲಡಾಖ್‍ನಲ್ಲಿ ಪರಿಸ್ಥಿತಿ ಯಥಾಸ್ಥಿತಿಯಲ್ಲಿಯೇ ಇದೆ.

ಈ ಬೆಳವಣಿಗೆಯಿಂದಾಗಿ ಅರುಣಾಚಲ ಪ್ರದೇಶದ ನಾಲ್ಕು ಸ್ಥಳಗಳಲ್ಲಿ ಉದ್ವಿಗ್ನ ವಾತಾವರಣ ನೆಲೆಸಿದ್ದು, ಭಾರತೀಯ ಸೇನೆ ಕಟ್ಟೆಚ್ಚರ ವಹಿಸಿದೆ. ಅರುಣಾಚಲ ಪ್ರದೇಶದಅಸಾಫಿಲಾ, ಟ್ಯೂಟಿಂಗ್‍ಆಕ್ಸಿಸ್, ಚಾಂಗ್‍ಝೀ ಮತ್ತು ಫಿಶ್‍ಟೇಲ್-2 ವಲಯಗಳಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್‍ಆರ್ಮಿ(ಪಿಎಲ್‍ಎ) ಸೇನೆ ಜಮಾವಣೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಭಾರತೀಯ ಸೇನಾ ಪಡೆದತೀವ್ರಕಟ್ಟೆಚ್ಚರ ವಹಿಸಿದ್ದು, ಚೀನಿ ಯೋಧರಯಾವುದೇದುಸ್ಸಾಹಸಎದುರಿಸಲು ಸಜ್ಜಾಗಿವೆ.

ಲಡಾಕ್ ಪ್ರಾಂತ್ಯದರೆಜಗ್ ಲಾ-ರೆಚೆಂಗ್ ಲಾ ಹೈಟ್ಸ್ ಪರ್ವತ ಪ್ರದೇಶಗಳಲ್ಲಿ ಪ್ರಾಂತ್ಯ ಸಾಧಿಸಲು ಯತ್ನಿಸಿ ಭಾರೀ ಹಿನ್ನಡೆ ಅನುಭವಿಸಿದ್ದ ಚೀನಾ ಸೇನೆ ಈಗ ಅರುಣಾಚಲ ಪ್ರದೇಶದಲ್ಲಿತನ್ನ ಚಟುವಟಿಕೆಗಳನ್ನು ತೀವ್ರಗೊಳಿಸಿದೆ.

Facebook Comments