ತಾಯಂದಿರ ದಿನದಂದೇ ಹೆತ್ತವ್ವನನ್ನು ಕೊಂದ ಪಾಪಿ ಮಗ..!

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್,ಮೇ.11-ಅನಿವಾಸಿ ಭಾರತೀಯ ಯುವಕನೊಬ್ಬ ವಿಶ್ವ ತಾಯಂದಿರ ದಿನಾಚರಣೆಯಂದೆ ತನ್ನ ಹೆತ್ತವ್ವನಿಗೆ ಲೈಂಗಿಕ ಕಿರುಕುಳ ನೀಡಿ ಮನಬಂದಂತೆ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ನ್ಯೂಯಾರ್ಕ್‍ನಲ್ಲಿ ನಡೆದಿದೆ.

ತಾಯಿಯನ್ನೆ ಹತ್ಯೆ ಮಾಡಿದ ಯುವಕನನ್ನು ಪುಷ್ಕರ್ ಶರ್ಮಾ ಎಂದು ಗುರುತಿಸಲಾಗಿದೆ. ಈತ ತಾಯಂದಿರ ದಿನಾಚರಣೆ ದಿನವೇ ತನ್ನ ತಾಯಿಯನ್ನು ಹಿಂದಿನಿಂದ ಹಿಡಿದುಕೊಂಡು ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಕೆಳಗೆ ಬಿದ್ದರೂ ಬಿಡದೆ ಆಕೆಯ ಮೇಲೆ ಮುಗಿಬಿದ್ದು ಪ್ರಾಣ ಹೋಗವವರೆಗೆ ಹೊಡೆದಿದ್ದಾನೆ ಎಂದು ಅಮೆರಿಕಾದ ಕೆಲ ಮಾಧ್ಯಮಗಳು ವರದಿ ಮಾಡಿವೆ.

ನಾನು ನಿದ್ರೆಯಿಂದ ಎಚ್ಚೆತ್ತ ಸಂದರ್ಭದಲ್ಲಿ ಯಾರ ಮೇಲಾದರೂ ಹಲ್ಲೆ ಮಾಡಬೇಕು ಎಂಬ ನಿಯಂತ್ರಿಸಲು ಅಸಾಧ್ಯವಾದ ಒತ್ತಡ ನನ್ನನ್ನು ಕಾಡುತಿತ್ತು. ಹೀಗಾಗಿ ನಾನು ಏನು ಮಾಡುತ್ತಿದ್ದೇನೆ ಎಂಬ ಅರಿವು ನನಗಿರಲಿಲ್ಲ ಎನ್ನುತ್ತಾನೆ ಪಾಪಿ ಮಗ.

ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಕೋರ್ಟ್ ಆತನಿಗೆ ಜಾಮೀನು ನೀಡಲು ನಿರಾಕರಿಸಿದ್ದು ಮುಂದಿನ ವಿಚಾರಣೆಯನ್ನು ಮೇ.24 ಕ್ಕೆ ಮುಂದೂಡಿದೆ.

ಶರ್ಮ ಅವರ ಕುಟುಂಬ ಸನ್ನಡತೆಯ ಕುಟುಂಬ. ಆರೋಪಿಗೆ ಸ್ವಲ್ಪಪ್ರಮಾಣದ ಖಿನ್ನತೆ ಇತ್ತು ಆದರೆ, ಆತ ತನ್ನ ಹೆತ್ತತಾಯಿಯನ್ನೇ ಈ ರೀತಿ ಅಮಾನುಷವಾಗಿ ಹತ್ಯೆ ಮಾಡುತ್ತಾನೆ ಎಂಬ ಅರಿವಿರಲಿಲ್ಲ ಎನ್ನುತ್ತಾರೆ ನೆರೆಮನೆಯ ಕೆಲ್ವೀನ್ ಕುಟುಂಬ.

Facebook Comments

Sri Raghav

Admin