ಡ್ರಗ್ ಮಾಫಿಯಾ ನಡೆಸಿರುವ ಗುಂಡಿನ ದಾಳಿಗೆ ಭಾರತೀಯ ಮೂಲದ ಮಹಿಳಾ ಟೆಕ್ಕಿ ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ಲಾಸ್‍ಏಂಜಲಿಸ್,ಅ.23-ಮೆಕ್ಸಿಕೊದಲ್ಲಿ ಡ್ರಗ್ ಮಾಫಿಯಾ ನಡೆಸಿರುವ ಗುಂಡಿನ ದಾಳಿಗೆ ಭಾರತೀಯ ಮೂಲದ ಮಹಿಳಾ ಟೆಕ್ಕಿ ಸೇರಿದಂತೆ ಮೂವರು ವಿದೇಶಿಗರು ಬಲಿಯಾಗಿದ್ದಾರೆ.

ಟ್ರಾವಲ್ ಬ್ಲಾಗರ್ ಆಗಿದ್ದು, ಕ್ಯಾಲಿಫೋರ್ನಿಯಾದಲ್ಲಿ ಟೆಕ್ಕಿಯಾಗಿರುವ ಭಾರತೀಯ ಮೂಲದ ಅಂಜಲಿ ರಿಯಾತ್ ಅವರು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲು ಮೆಕ್ಸಿಕೊಗೆ ತೆರಳಿದ್ದ ಸಂದರ್ಭದಲ್ಲಿ ಅವರು ಕಿಡಿಗೇಡಿಗಳ ಗುಂಡಿಗೆ ಬಲಿಯಾಗಿದ್ದಾರೆ.

ಮೆಕ್ಸಿಕೊದ ತಲ್ಲಂನಲ್ಲಿರುವ ಕೆರಿಬಿಯನ್ ಕರಾವಳಿ ತೀರದ ರೆಸಾರ್ಟ್‍ನಲ್ಲಿ ಪೊಲೀಸರು ಮತ್ತು ಡ್ರಗ್ ಮಾಫಿಯಾದವರ ನಡುವೆ ನಡೆದ ಗುಂಡಿನ ಚಕಮಕಿ ಸಂದರ್ಭದಲ್ಲಿ

ಭಾರತೀಯ ಮೂಲದ ಟೆಕ್ಕಿ ಸೇರಿದಂತೆ ಮೂವರು ವಿದೇಶಿಗರು ಗುಂಡೇಟಿನಿಂದ ಪ್ರಾಣ ಬಿಟ್ಟಿದ್ದಾರೆ. ಹಿಮಾಚಲ ಪ್ರದೇಶ ಮೂಲದ ಅಂಜಲಿ ಅವರು ಕ್ಯಾಲಿಫೋರ್ನಿಯಾದ ಸ್ಯಾನ್ ಜೋಷ್ ಪ್ರದೇಶದಲ್ಲಿ ವಾಸಿಸುತ್ತಿದ್ದರು.

Facebook Comments

Sri Raghav

Admin