ಪ್ರವಾಹ ಪೀಡಿತರ ನೆರವಿಗೆ ಕೈಜೋಡಿಸಿದ ರೈಲ್ವೆ, ಪರಿಹಾರ ಸಾಮಗ್ರಿ ಸಾಗಣೆ ಸಂಪೂರ್ಣ ಉಚಿತ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.11- ಕರ್ನಾಟಕ, ಕೇರಳ ಹಾಗೂ ಮಹಾರಾಷ್ಟ್ರ ಈ ಮೂರು ರಾಜ್ಯಗಳ ಪ್ರವಾಹ ಪೀಡಿತ ಪ್ರದೇಶಗಳಿಗೆ ನೆರವಾಗಲು ಭಾರತೀಯ ರೈಲ್ವೆ ಸಹಾಯಹಸ್ತ ಚಾಚಿದೆ.

ಭಾರೀ ಮಳೆ ಮತ್ತು ಪ್ರವಾಹದಿಂದ ತತ್ತರಿಸಿರುವ ಈ ಮೂರು ರಾಜ್ಯಗಳಿಗೆ ಅಗತ್ಯ ಪರಿಹಾರ ಸಾಮಗ್ರಿಗಳು ಮತ್ತು ಸರಕುಗಳ ಸಾಗಾಣೆ ಶುಲ್ಕದಿಂದ ರೈಲ್ವೆ ಇಲಾಖೆ ವಿನಾಯಿತಿ ನೀಡಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಉಪನಿರ್ದೇಶಕ (ರೈಲ್ವೆ ಸಂಚಾರ) ಮಹೇಂದ್ರಸಿಂಗ್ ಅವರು, ಈ ವಿನಾಯಿತಿ ಇಂದಿನಿಂದಲೇ ಜಾರಿಗೆ ಬಂದಿದೆ ಎಂದು ತಿಳಿಸಿದ್ದಾರೆ. ಎಲ್ಲಾ ಸರ್ಕಾರಿ ಸಂಸ್ಥೆಗಳ ಮೂಲಕ ರೈಲ್ವೆ ಇಲಾಖೆಯ ಗೂಡ್ಸ್ ರೈಲುಗಳು ಮತ್ತು ವ್ಯಾನ್‍ಗಳ ಮೂಲಕ ಈ ಮೂರು ಪ್ರವಾಹ ಪೀಡಿತ ರಾಜ್ಯಗಳಿಗೆ ಪರಿಹಾರ ಸಾಮಗ್ರಿಗಳನ್ನು ರವಾನಿಸಲು ಸರಕು ಸಾಗಾಣೆ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.

ಈಗಿನಿಂದಲೇ ಸಂಪೂರ್ಣ ಉಚಿತವಾಗಿ ಪರಿಹಾರ ಸಾಮಗ್ರಿಗಳನ್ನು ಗೂಡ್ಸ್ ರೈಲು ಮತ್ತು ರೈಲ್ವೆಗೆ ಸಂಬಂಧಪಟ್ಟ ಇತರ ವಾಹನಗಳ ಮೂಲಕ ರವಾನಿಸಬಹುದು ಎಂದು ಅವರು ತಿಳಿಸಿದ್ದಾರೆ.

Facebook Comments