ಡಾಲರ್ ಎದುರು ರೂಪಾಯಿ ಮೌಲ್ಯ 79 ಪೈಸೆ ಜಿಗಿತ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಮೇ 20- ಲೋಕಸಭಾ ಚುನಾವಣಾ ಫಲಿತಾಂಶ ಹೊರಬೀಳುವ ಮುನ್ನವೇ ಶುಭ ಸೂಚನೆ ಎಂಬಂತೆ ಕಳೆದ ಹಲವು ದಿನಗಳಿಂದ ಡಾಲರ್ ಎದುರು ತನ್ನ ಮೌಲ್ಯ ಕಳೆದುಕೊಳ್ಳುತ್ತಿದ್ದ ರೂಪಾಯಿ ಇಂದು 79 ಪೈಸೆಗಳ ಜಿಗಿತ ಕಂಡಿದೆ.

ಕಳೆದ ವಾರದ ವಹಿವಾಟು ಮುಕ್ತಾಯಕ್ಕೆ ಡಾಲರ್ ಎದುರು 70.23 ರೂ. ಮೌಲ್ಯವಿದ್ದ ರೂಪಾಯಿ ಇಂದು ಬೆಳಗಿನ ಅವಧಿಯಲ್ಲೇ 79 ಪೈಸೆಯಷ್ಟು ತನ್ನ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ.

ಈಗ ಡಾಲರ್ ಎದುರು ರೂಪಾಯಿ 69.44ರಷ್ಟಿದ್ದು, ಬಂಡವಾಳ ಮಾರುಕಟ್ಟೆಯಲ್ಲಿ ಹಠಾತ್ ಜಿಗಿತ ಕಂಡಿದೆ.  ನಿನ್ನೆ ಸಂಜೆ ಲೋಕಸಭಾ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರವೇ ಮುಂದಿನ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂದು ಭವಿಷ್ಯ ನುಡಿದ ಹಿನ್ನೆಲೆಯಲ್ಲಿ ಇಂದು ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲೇ ರೂಪಾಯಿ ಮೌಲ್ಯ ಏರಿಕೆ ಕಂಡುಬಂತು.

23ರ ಫಲಿತಾಂಶದ ನಂತರವೂ ಇದೇ ಏರುಗತಿಯ ಮುಂದುವರಿಕೆ ಸಾಧ್ಯವಿದೆ.

Facebook Comments