ಪಾಕ್ ಶೆಲ್ ದಾಳಿ ಭಾರತೀಯ ಯೋಧ ಹುತಾತ್ಮ

ಈ ಸುದ್ದಿಯನ್ನು ಶೇರ್ ಮಾಡಿ

ಜಮ್ಮು, ಜು. 10- ಗಡಿ ರೇಖೆಯನ್ನು ಉಲ್ಲಂಘನೆ ಮಾಡಿದ ಪಾಕ್ ಸೈನಿಕರ ನಡುವೆ ಇಂದು ನಡೆದ ಗುಂಡಿನ ದಾಳಿಯಲ್ಲಿ ಭಾರತೀಯ ಸೈನಿಕರೊಬ್ಬರು ಹುತಾತ್ಮರಾಗಿದ್ದಾರೆ. ದಾಳಿಯಲ್ಲಿ ಹವಾಲ್ದಾರ್ ಸಾಂಬೂರ್ ಗುರುಂಗ್ ಬಲಿಯಾಗಿದ್ದಾರೆ.

ಇಂದು ಮುಂಜಾನೆ ರಜೋರಿ ಜಿಲ್ಲೆಯ ನೌಶೇರಾ ಸೆಕ್ಟರ್‍ನಲ್ಲಿ ಕದನ ನಿಯಮವನ್ನು ಉಲ್ಲಂಘಿಸಿ ಪಾಕ್‍ನ ಸೈನಿಕರು ಶೆಲ್ ದಾಳಿ ನಡೆಸಿದ್ದಾರೆ, ಈ ವೇಳೆ ಭಾರತೀಯ ಸೈನಿಕರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಸಾವನ್ನಪ್ಪಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ಹವಾಲ್ದಾರ್ ಸಾಂಬೂರ್ ಗುರಂಗ್ ಧೈರ್ಯಶಾಲಿ ಹಾಗೂ ಪ್ರಾಮಾಣಿಕ ಸೈನಿಕರಾಗಿದ್ದು, ಅವರ ತ್ಯಾಗ ಮತ್ತು ಕರ್ತವ್ಯದ ಭಕ್ತಿಯನ್ನು ರಾಷ್ಟ್ರವು ಕೊಂಡಾಡುತ್ತದೆ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ.

Facebook Comments