ತಂತ್ರಜ್ಞಾನದಲ್ಲಿ ಜಗತ್ತನ್ನು ಆಳುವ ಅವಕಾಶ ಭಾರತಕ್ಕಿದೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.14- ಕಳೆದ 1980ರಲ್ಲಿ ಕೇವಲ 180 ಬಿಲಿಯನ್ ಡಾಲರ್‍ನಷ್ಟು ಆರ್ಥಿಕತೆ ಹೊಂದಿದ್ದ ಭಾರತ ಪ್ರಸ್ತುತ 2.8 ಬಿಲಿಯನ್ ಆರ್ಥಿಕತೆಯನ್ನು ಹೊಂದಲು ಪ್ರಮುಖ ಕಾರಣ ತಂತ್ರಜ್ಞಾನವಾಗಿದೆ.

ಈ ತಂತ್ರಜ್ಞಾನದ ಬೆಳವಣಿಗೆಯಿಂದಾಗಿಯೇ ಭಾರತ ಶರವೇಗದಲ್ಲಿ ಹಲವು ಪಟ್ಟುಗಳ ಹೆಚ್ಚು ಪ್ರಮಾಣದಲ್ಲಿ ಅಭಿವೃದ್ಧಿ ಹೊಂದುತ್ತಿದೆ ಎಂದು ಸಿಐಐ ಎಐ ಪೋರಂ ಮತ್ತು ಆಕ್ಸಿಲರ್ ವೆಂಚರ್ಸ್‍ನ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಆಯೋಜನೆಗೊಂಡಿರುವ ಎಕ್ಸ್‍ಕಾನ್ 2019 ಸಮಾವೇಶದಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಐಒಟಿ ಆಟೋಮೇಶನ್ ಕುರಿತಾದ ಸಂವಾದದಲ್ಲಿ ಮಾತನಾಡಿದ ಅವರು, ಎಕ್ಸ್‍ಕಾನ್ 2019 ರಂತಹ ವೇದಿಕೆಗಳು ನಮಗೆ ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನವನ್ನು ಮುನ್ನಡೆಸಲು ಒಂದು ಸೂಕ್ತ ಅವಕಾಶವನ್ನು ಒದಗಿಸಿಕೊಡುತ್ತವೆ ಎಂದು ಹೇಳಿದರು.

ವಿಪ್ರೋ ಇನ್‍ಫ್ರಾಸ್ಟ್ರಕ್ಚರ್ ಇಂಜಿನಿಯರಿಂಗ್‍ನ ಮುಖ್ಯ ಕಾರ್ಯಕಾರಿ ಅಧಿಕಾರಿ ಪ್ರತೀಕ್ ಕುಮಾರ್ ಮಾತನಾಡಿ, ಈ ಎಕ್ಸ್‍ಕಾನ್ ಸಮಾವೇಶವು ಸ್ಮಾರ್ಟ್ ಐ-ಟೆಕ್-ನೆಕ್ಸ್ಟ್ ಜನರೇಶನ್ ಇಂಡಿಯಾ75 ಪರಿಕಲ್ಪನೆಯತ್ತ ಬೆಳಕು ಚೆಲ್ಲಿತು. ಇದರಲ್ಲಿ ತಂತ್ರಜ್ಞಾನವು ನಿರ್ಮಾಣ ಮತ್ತು ಯಂತ್ರೋಪಕರಣಗಳ ಉದ್ಯಮದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಯಾವ ರೀತಿ ಪಾತ್ರ ವಹಿಸುತ್ತದೆ ಎಂಬುದರ ಬಗ್ಗೆ ವಿಚಾರ ಮಂಥನ ನಡೆಸಲಾಯಿತು ಎಂದರು.

Facebook Comments

Sri Raghav

Admin