ಆಸೀಸ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಮಿಥಾಲಿ ಪಡೆ

ಈ ಸುದ್ದಿಯನ್ನು ಶೇರ್ ಮಾಡಿ

ಮೆಕೆ, ಸೆ.26- ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‍ನಲ್ಲಿ ಗೆಲುವಿನ ನಾಗಲೋಟ ಆರಂಭಿಸಿದ್ದ ಆಸ್ಟ್ರೇಲಿಯಾ ತಂಡಕ್ಕೆ ಮಿಥಾಲಿ ರಾಜ್ ಸಾರಥ್ಯದ ಭಾರತೀಯ ಮಹಿಳಾ ತಂಡವು ಕೊನೆಗೂ ಬ್ರೇಕ್ ಹಾಕಿದೆ. ಸತತ 26 ಪಂದ್ಯಗಳಲ್ಲಿ ಗೆಲುವು ಸಾಸುವ ಮೂಲಕ ದಾಖಲೆ ನಿರ್ಮಿಸಿದ್ದ ಆಸ್ಟ್ರೇಲಿಯಾ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡರು.

ಬೆತ್ ಮೋನಿ (52 ರನ್, 6 ಬೌಂಡರಿ), ಗಾರ್ಡನರ್ ( 67 ರನ್, 8 ಬೌಂಡರಿ, 2 ಸಿಕ್ಸರ್)ರ ಆರ್ಧಶತಕಗಳ ನೆರವಿದ್ದರೂ ಕೂಡ ಜುಲನ್ ಗೋಸ್ವಾಮಿಯ ಬೌಲಿಂಗ್ ಜಾದೂಗೆ ತಲೆಬಾಗಿದ ಆಸೀಸ್ ಬ್ಯಾಟರ್‍ಗಳು ನಿಗತ 50 ಓವರ್‍ಗಳಲ್ಲಿ 9 ವಿಕೆಟ್‍ಗಳನ್ನು ಕಳೆದುಕೊಂಡು 264 ಸವಾಲಿನ ಮೊತ್ತ ದಾಖಲಿಸಿತು.

ಭಾರತ ಪರ ಗೋಸ್ವಾಮಿ ಹಾಗೂ ಪೂಜಾ ವಸ್ತಕರ್ ತಲಾ 3 ವಿಕೆಟ್ ಕೆಡವಿದರೆ, ಸ್ನೇಹಾ ರಾಣಾ 1 ವಿಕೆಟ್ ಕಬಳಿಸಿದರು. ಆಸೀಸ್ ನೀಡಿದ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಭಾರತದ ಮಹಿಳಾ ತಂಡವು ಆರಂಭಿಕ ಬ್ಯಾಟರ್ ಸೆಫಾಲಿ ವರ್ಮಾ (56 ರನ್, 7 ಬೌಂಡರಿ) ಹಾಗೂ ಯಸ್ತಿಕಾ ಭಟಿಯಾ( 64 ರನ್, 9 ಬೌಂಡರಿ) ಆಕ್ರಮಣಕಾರಿ ಆಟದಿಂದಾಗಿ ಇನ್ನೂ 3 ಎಸೆತಗಳು ಬಾಕಿ ಇರುವಂತೆ ಗೆಲುವಿನ ಗೆರೆ ಮುಟ್ಟಿದರು.

ಆಸ್ಟ್ರೇಲಿಯಾ ಪರ ಅನಬೆಲ್ ಸೌಧರ್‍ಲ್ಯಾಂಡ್ 3 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರೆ, ಉಳಿದ ಬೌಲರ್‍ಗಳು ತಲಾ 1 ವಿಕೆಟ್ ಕಬಳಿಸಿದರು. 10 ಓವರ್‍ಗಳಲ್ಲಿ 37 ರನ್ ನೀಡಿ 3 ಪ್ರಮುಖ ವಿಕೆಟ್ ಕಬಳಿಸಿದ ಭಾರತದ ಜುಲನ್ ಗೋಸ್ವಾಮಿ ಅವರು ಪಂದ್ಯ ಪುರುಷೋತ್ತಮ ಆಟಗಾರ್ತಿಯಾಗಿ ಹೊರ ಹೊಮ್ಮಿದರು.

Facebook Comments