ಎಫ್‍ಐಎಚ್ ಫೈನಲ್ಸ್ ಗೆದ್ದ ಹಾಕಿ ವನಿತೆಯರಿಗೆ ಪ್ರಧಾನಿ, ಕ್ರೀಡಾಸಚಿವರ ಶುಭಾಶಯ

ಈ ಸುದ್ದಿಯನ್ನು ಶೇರ್ ಮಾಡಿ

ಹೀರೋಶಿಮಾ, ಜೂ 24- ಒಲಿಂಪಿಕ್ಸ್ ನ ಅರ್ಹತೆ ಪಡೆದ ಹಾಕಿ ಮಹಿಳಾ ತಂಡದ ಆಟಗಾರ್ತಿಯರು ಎಫ್‍ಐಎಚ್ ಸರಣಿಯ ಫೈನಲ್ ಪಂದ್ಯದಲ್ಲಿ ಜಪಾನ್ ವಿರುದ್ಧ ಗೆಲ್ಲುತ್ತಿದ್ದಂತೆ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ. ಪ್ರಧಾನಿ ನರೇಂದ್ರಮೋದಿ, ಕೇಂದ್ರ ಕ್ರೀಡಾ ಸಚಿವ ಕಿರೇನ್ ರಿಜ್ಜು, ಭಾರತೀಯ ಹಾಕಿ ಫೆಡರೇಷನ್ ಸೇರಿದಂತೆ ಹಲವರು ಹಾಕಿ ಪಟುಗಳು ಹಾಗೂ ಪ್ರಿಯರು ಕೂಡ ಟ್ವೀಟ್ಟರ್‍ನಲ್ಲಿ ಶುಭಾಶಯಗಳನ್ನು ಕೋರಿದ್ದಾರೆ.

ಎಫ್‍ಐಎಚ್‍ನ ಹಾಕಿ ಫೈನಲ್ಸ್‍ನಲ್ಲಿ ಭಾರತೀಯ ಹಾಕಿ ಆಟಗಾರ್ತಿಯರು ಜಯಿಸಿರುವುದು ನಿಜಕ್ಕೂ ಸಂತಸ ಸಂಗತಿ. ಈ ಪಂದ್ಯವು ಹಲವು ಯುವ ಹಾಕಿ ಆಟಗಾರರಲ್ಲಿ ಹುಮ್ಮಸ್ಸು ಹೆಚ್ಚಿಸಿದೆ, ಮತ್ತಷ್ಟು ಉತ್ತಮ ಸಾಧನೆಯನ್ನು ಮಾಡಲಿ ಎಂದು ಪ್ರಧಾನಿ ಮೋದಿಯವರು ಟ್ವೀಟ್ಟರ್‍ನಲ್ಲಿ ಶುಭಾಶಯ ಕೋರಿದ್ದಾರೆ.

ಕ್ರೀಡಾ ಮಂತ್ರಿ ಕಿರಾನ್ ರಿಜ್ಜು ಅವರು ತಮ್ಮ ಟ್ವಿಟ್ಟರ್‍ನಲ್ಲಿ ಹಾಕಿ ಆಟಗಾರ್ತಿಯರನ್ನು ಅಭಿನಂದಿಸುತ್ತಾ ಇದೊಂದು ಅದ್ಭುತ ಪಂದ್ಯ, ಹಾಕಿಯಲ್ಲಿ ಬಲಿಷ್ಠ ತಂಡವಾಗಿರುವ ಜಪಾನ್‍ನನ್ನು 3-1 ರಿಂದ ಜಯ ಗಳಿಸಿರುವುದು ಹಾಗೂ ಸೆಮಿಫೈನಲ್ಸ್‍ನಲ್ಲಿ ಆಡುವಾಗ ಭಾರತ ತಂಡದ ಆಟಗಾರ್ತಿ ಲಾಲ್‍ರಿಮ್‍ಸೆಯಾಮಿಳ ತಂದೆ ನಿಧನರಾದರೂ ಕೂಡ ದೇಶಕ್ಕಾಗಿ ಆಡುವ ಮೂಲಕ ಕ್ರೀಡಾ ಮನೋಭಾವವನ್ನು ಮೆರೆದಿದ್ದಾರೆ ಎಂದು ಕೊಂಡಾಡಿದರು.

ಭಾರತ ತಂಡದ ಪರ ನಾಯಕಿ ರಾಣಿ ರಾಮ್‍ಪಾಲ್ ಅವರು ಪಂದ್ಯದ 3ಯೇ ನಿಮಿಷದಲ್ಲಿ ಗೋಲ್ ಗಳಿಸಿದರೆ, ಗುರ್‍ಜಿತ್ ಕೌರ್ (45 ಮತ್ತು 60ನೆ) ನಿಮಿಷಗಳಲ್ಲಿ ಗೋಲು ಗಳಿಸಿದ್ದು ಒಲಿಪಿಂಕ್ಸ್‍ನಲ್ಲೂ ಇದೇ ರೀತಿಯ ಪ್ರದರ್ಶನ ಹೊಮ್ಮಿ ಬರಲಿ ಎಂದು ಭಾರತೀಯ ಹಾಕಿ ಫೆಡರೇಷನ್ ಶುಭ ಕೋರಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ