ಭಾರತದಲ್ಲಿ 1 ಮಿಲಿಯನ್ ಸನಿಹದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ..!
ನವದೆಹಲಿ, ಜು.15-ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹತ್ತು ಲಕ್ಷದತ್ತ ಮುಖ ಮಾಡಿದೆ. ಇಂದು ಒಂದೇ ದಿನ 29,429 ಸೋಂಕು ಪ್ರಕರಣಗಳು ದಾಖಲಾಗಿದೆ.
ಇಂದು ಬೆಳಗಿನ ವೇಳೆಗೆ ಸೋಂಕಿತರ ಸಂಖ್ಯೆ 9,36,181 ಹೆಚ್ಚಳಗೊಂಡಿದೆ. 582 ಮಂದಿ ಸಾವನ್ನಪ್ಪಿದ್ದು, ಸೋಂಕಿಗೆ ಬಲಿಯಾದವರ ಸಂಖ್ಯೆ24,309 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಬುಲೆಟಿನ್ ನಲ್ಲಿ ತಿಳಿಸಲಾಗಿದೆ.
5.92,031 ಸೋಂಕಿತರು ಗುಣಮುಖರಾಗಿದ್ದು, 3,19,840 ಮಂದಿ ದೇಶದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟಾರೆ ಸೋಂಕಿನಿಂದ ಗುಣಮುಖರಾಗುತ್ತಿರುವವರ ಪ್ರಮಾಣ ಶೇ.63.34ರಷ್ಟು ಹೆಚ್ಚಳವಾಗಿರುವುದು ತುಸು ಸಮಾಧಾನ ತಂದಿದೆ.
ಮಹಾರಾಷ್ಟ್ರದಲ್ಲಿ 213, ಕರ್ನಾಟಕದಲ್ಲಿ 85, ತಮಿಳುನಾಡಿನಲ್ಲಿ 67, ಆಂಧ್ರದಲ್ಲಿ 43, ದೆಹಲಿಯಲ್ಲಿ 35, ಉತ್ತರಪ್ರದೇಶದಲ್ಲಿ 28, ಪಶ್ಚಿಮ ಬಂಗಾಳದಲ್ಲಿ 24 ಹಾಗೂ ಬಿಹಾರ ಮತ್ತು ಗುಜರಾತಿನಲ್ಲಿ ತಲಾ 14 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಇನ್ನು ಕೆಲ ರಾಜ್ಯಗಳಲ್ಲಿ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಇದುವರೆಗೂ ಮಹಾಮಾರಿ ದೇಶದಲ್ಲಿ 582 ಮಂದಿ ಬಲಿಯಾಗಿದ್ದಾರೆ.