24 ಗಂಟೆಯಲ್ಲಿ 30,549 ಕೊರೊನಾ ಕೇಸ್, 422 ಮಂದಿ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.3- ಕಳೆದ ಮೂರ್ನಾಲ್ಕು ದಿನಗಳಿಂದ ತುಸು ಏರಿಕೆ ಕಂಡಿದ್ದ ಕೊರೊನಾ ಸೋಂಕು ಇಂದು ಮತ್ತೆ ತಗ್ಗಿದೆ. ನಿನ್ನೆ ಹೊಸದಾಗಿ 30,549 ಮಂದಿಗೆ ಕೋವಿಡ್ ತಗುಲಿದ್ದು, 422 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ದಿನ 24 ಗಂಟೆಗಳ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ದೇಶದಲ್ಲಿ ಒಟ್ಟು ಸೋಂಕಿನ ಪ್ರಮಾಣ 3,17,26,507ಕ್ಕೆ ಏರಿಕೆಯಾಗಿದೆ. ಸಾವಿನ ಪ್ರಮಾಣ 4,25,195ಕ್ಕೆ ಹೆಚ್ಚಳವಾಗಿದೆ ಎಂದು ತಿಳಿಸಿದೆ.

ಚೇತರಿಸಿಕೊಂಡಿರುವವರ ಪ್ರಮಾಣವೂ ಕೂಡ ಸಮಾಧಾನಕರವಾಗಿದೆ. ಶೇ.97.38ರಷ್ಟು ಮಂದಿ ಗುಣಮುಖರಾಗಿದ್ದಾರೆ. ನಿನ್ನೆ 8,760 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1.28ರಷ್ಟಿದ್ದು, 4,04,958 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು ಸೋಂಕಿನ ಪ್ರಮಾಣ ಕೂಡ ತಗ್ಗಿದ್ದು 1.85ರಷ್ಟಿದೆ. ಕಳೆದ ವಾರದಿಂದ ಶೇ.2.39ರ ದರದಲ್ಲೆ ಸೋಂಕು ನಿಯಂತ್ರಣದಲ್ಲಿದೆ. ಸಾವಿನ ಪ್ರಮಾಣ ಶೇ.1.34ರಷ್ಟಿದೆ.

ನಿನ್ನೆ 16,49,295 ಮಂದಿ ಸೇರಿದಂತೆ ಈವರೆಗೆ ದೇಶದಲ್ಲಿ 47.12 ಕೋಟಿ ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಒಟ್ಟು 47.85 ಮಂದಿಗೆ ಲಸಿಕೆ ಹಾಕಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸಂಪೂರ್ಣ ನಿಯಂತ್ರಣದಲ್ಲಿದೆ. ಮಂಗಳವಾರ ಬಿಡುಗಡೆ ಮಾಡಿರುವ ಹೆಲ್ತ್‍ಬುಲೇಟಿನ್ ಪ್ರಕಾರ 51 ಹೊಸ ಪ್ರಕರಣಗಳು ಕಂಡು ಬಂದಿದ್ದು, ಯಾವುದೇ ಪ್ರಾಣ ಹಾನಿ ವರದಿಯಾಗಿಲ್ಲ.

ಕೋವಿಡ್ ಎರಡನೇ ಅಲೆಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನಕ್ಕೆ ದೆಹಲಿ ಮತ್ತು ಕರ್ನಾಟಕಟದ ನಡುವೆ ಪೈಪೋಟಿಯಿತ್ತು. ದೆಹಲಿಯಲ್ಲಿ ಸಾವಿನ ಸಂಖ್ಯೆ ವಿಪರೀತ ಹೆಚ್ಚಾಗಿ ಆಮ್ಲಜನಕಕ್ಕೆ ಹಾಹಾಕಾರ ಉಂಟಾಗಿತ್ತು. ಮೂರನೇ ಅಲೆಯ ಆತಂಕದ ನಡುವೆಯೂ ದೆಹಲಿಯಲ್ಲಿ ಕೊರೊನಾ ಪ್ರಮಾಣ ತಗ್ಗಿರುವುದು ಸಮಾಧಾನಕರವಾಗಿದೆ. ಆದರೆ ಮಹಾರಾಷ್ಟ್ರ ಹಾಗು ದಕ್ಷಿಣ ಭಾರತದ ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದೆ. ಅದರಲ್ಲೂ ಕೇರಳದಲ್ಲಿ ಒಟ್ಟು ಸೋಂಕಿನ ಶೇ.50ರಷ್ಟು ಪ್ರಕರಣಗಳಿವೆ.

Facebook Comments