ದೇಶದಲ್ಲಿ ಮೊದಲ ಬಾರಿಗೆ ಸಂತಾನೋತ್ಪತಿ ಪ್ರಮಾಣ ಇಳಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ನ.25- ಕಳೆದ ಆರು ವರ್ಷಗಳಲ್ಲಿ ಭಾರತದ ಸಂತಾನೋತ್ಪತಿ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ಜನ ಸಾಮಾನ್ಯರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-21ರ ಪ್ರಕಾರ ಇದೇ ಮೊದಲ ಬಾರಿಗೆ ದೇಶದಲ್ಲಿ ಸಂತಾನೋತ್ಪತಿಯ ಪ್ರಮಾಣ 2ರೊಳಗೆ ದಾಖಲಾಗಿದೆ.

ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್, ರಾಜಸ್ತಾನ, ಮಧ್ಯಪ್ರದೇಶ ರಾಜ್ಯಗಳಲ್ಲಿ 2ರ ಮೇಲ್ಪಟ್ಟು ದಾಖಲಾಗಿದ್ದು, ಉಳಿದಂತೆ ಎಲ್ಲಾ ರಾಜ್ಯಗಳಲ್ಲಿ ಸಂತಾನೋತ್ಪತಿಯ ಸಾಮಥ್ರ್ಯ ಕುಸಿತ ಕಂಡಿದೆ. 2015-16ರಲ್ಲಿ ನಡೆದಿದ್ದ ಸಮೀಕ್ಷೆಗೂ ಮತ್ತು ಇತ್ತೀಚೆಗೆ ನಡೆದ ಎರಡು ಸಮೀಕ್ಷೆಗಳಲ್ಲೂ ಫಲಿತಾಂಶ ಭಾರೀ ಅಂತರ ಕಾಣಿಸಿಕೊಂಡಿದೆ. ಜನಸಾಮಾನ್ಯರಲ್ಲಿ ಇದು ಆತಂಕ ಮೂಡಿಸಿದೆ. ಸಂತಾನೋತ್ಪತ್ತಿ ಕ್ಷೀಣಗೊಳ್ಳಲು ಕಾರಣಗಳೇನು ಎಂದು ಆರೋಗ್ಯ ಸಮೀಕ್ಷೆಯಲ್ಲಿ ತಿಳಿಸಲಾಗಿಲ್ಲ.

ಜಮ್ಮು-ಕಾಶ್ಮೀರದಲ್ಲಿ 1.4, ಪಶ್ಚಿಮ ಬಂಗಾಳ, ದೆಹಲಿ, ಪಂಜಾಬ್‍ದಲ್ಲಿ ನಲ್ಲಿ 1.6, ಆಂಧ್ರ ಪ್ರದೇಶ, ಹಿಮಾಚಲ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರದಲ್ಲಿ 1.7, ಕೇರಳ, ತೆಲಂಗಾಣ, ಛತ್ತಿಸ್‍ಗಡ, ತಮಿಳುನಾಡಿನಲ್ಲಿ 1.8, ಅಸ್ಸಾಂ, ಗುಜರಾತ್, ಹರಿಯಾಣ, ಉತ್ತರಖಂಡದಲ್ಲಿ 1.9ರಷ್ಟು, ಮಧ್ಯಪ್ರದೇಶ, ರಾಜಸ್ತಾನದಲ್ಲಿ 2ರಷ್ಟು, ಜಾರ್ಖಂಡ್‍ನಲ್ಲಿ 2.3ರಷ್ಟು, ಉತ್ತರ ಪ್ರದೇಶದಲ್ಲಿ 2.4ರಷ್ಟು, ಬಿಹಾರದಲ್ಲಿ 3ರಷ್ಟು ಸಂತಾನೋತ್ಪತಿ ಪ್ರಮಾಣ ದಾಖಲಾಗಿದೆ.

ಮುಂದಿನ ಪೀಳಿಗೆಯಲ್ಲಿ ಬದಲಾವಣೆಯ ಒಟ್ಟು ಫಲವತ್ತತೆಯ ಪ್ರಮಾಣ ಸಾರಸರಿ 2.1ರಷ್ಟು ಉಳಿಯಬಹುದು ಎಂದು ಅಂದಾಜಿಸಲಾಗಿದೆ. 2019ರ ಜೂನ್ 17ರಿಂದ 2020ರ ಜನವರಿ 30ರ ನಡುವೆ ಐದನೆ ಹಂತದಲ್ಲಿ 22 ರಾಜ್ಯಗಳಲ್ಲಿ ಸಮೀಕ್ಷೆ ನಡೆದಿತ್ತು. ಭಾರತದಲ್ಲಷ್ಟೆ ಅಲ್ಲ ಅಂತರಾಷ್ಟ್ರೀಯ ಮಟ್ಟದಲ್ಲೂ ಫಲವತ್ತತೆಯ ಪ್ರಮಾಣ ಕುಸಿತವಾಗಿದೆ ಎಂದು ಸಮೀಕ್ಷೆ ತಿಳಿಸಿದೆ.

Facebook Comments