ಭಾರತದಲ್ಲಿ ಕೊರೋನಾದಿಂದ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣ ಶೇ.55.48ಕ್ಕೆ ಏರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.21-ದೇಶದಲ್ಲಿ ಕೊರೊನಾ ವೈರಸ್ ಉಗ್ರಸ್ವರೂಪ ತಾಳಿದ್ದು ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಆತಂಕಕಾರಿ ಏರಿಕೆ ಕಂಡುಬಂದಿದೆ.

ಇದೇ ವೇಳೆ ಮತ್ತೊಂದೆಡೆ ರೋಗಿಗಳ ಚೇತರಿಕೆ ಮತ್ತು ಗುಣಮುಖ ಪ್ರಮಾಣದಲ್ಲಿ ಸತತ 12ನೇ ದಿನವೂ ಗಮನಾರ್ಹ ಏರಿಕೆ ಕಂಡುಬಂದಿದ್ದು, ನಿರಾಳತೆ ಮೂಡಿಸಿದೆ.

ಈ ಬೆಳವಣಿಗೆಯು ಸಾಂಕ್ರಾಮಿಕ ರೋಗಿಗಳಲ್ಲಿ ಭರವಸೆಯ ಆಶಾಕಿರಣ ಮೂಡಿಸಿದೆ.  ಕೊರೊನಾ ವೈರಸ್ ಸೋಂಕಿನ ರೋಗಿಗಳ ಚೇತರಿಕೆ ಪ್ರಕರಣಗಳ ಸಂಖ್ಯೆ 2.77 ಲಕ್ಷ ದಾಟಿರುವುದು ಸಮಾಧಾನದ ಸಂಗತಿ ನಿನ್ನೆ ಮಧ್ಯರಾತ್ರಿವರೆಗೆ 2,77,755 ಮಂದಿ ಗುಣಮುಖರಾಗಿದ್ದಾರೆ.

ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಕುಸಿತ ಕಂಡುಬಂದಿದ್ದು, ಈವರೆಗೆ 1,69,451 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ದೇಶದಲ್ಲಿ ವೈರಾಣು ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ಶೇ.55.48ರಷ್ಟು ವೃದ್ದಿ ಕಂಡುಬಂದಿದೆ, ಚೇತರಿಕೆ ಪ್ರಕರಣ ಸಕ್ರಿಯ ಪ್ರಮಾಣಕ್ಕಿಂತ ನಿರಂತರ 12 ದಿನಗಳಿಂದ ಹೆಚ್ಚಾಗಿರುವುದು ಸಮಾಧಾನಕರ ಸಂಗತಿ.

Facebook Comments