ಬಾಹ್ಯಾಕಾಶದಲ್ಲಿ ಮತ್ತೊಂದು ಪರಾಕ್ರಮಕ್ಕೆ ಇಸ್ರೋ ಸಜ್ಜು

ಈ ಸುದ್ದಿಯನ್ನು ಶೇರ್ ಮಾಡಿ

ಹೈದರಾಬಾದ್/ ಬೆಂಗಳೂರು,ಆ.16- ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಸಾಸುತ್ತಿರುವ ಭಾರತ ಮುಂದಿನ ವರ್ಷ ಮತ್ತೊಂದು ಮಹತ್ವದ ಸಾಧನೆಗೆ ಸಜ್ಜಾಗಿದೆ.

ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಹಕಾರ ಮತ್ತು ಮಾರ್ಗದರ್ಶನದೊಂದಿಗೆ ಉದ್ಯಾನನಗರಿಯ ಸ್ಕೈರೂಟ್ ನವೋದ್ಯಮವು ಮುಂದಿನ ವರ್ಷ ಡಿಸೆಂಬರ್‍ನಲ್ಲಿ ಸಂಪೂರ್ಣ ದೇಶೀಯ ನಿರ್ಮಿತ ರಾಕೆಟ್‍ನ ಚೊಚ್ಚಲ ಉಡಾವಣೆಗೆ ಮುಂದಾಗಿದೆ.

ಈ ಮೂಲಕ ಭಾರತದ ನವೋದ್ಯಮ ಸಂಸ್ಥೆಯೊಂದು ಇದೇ ಮೊದಲ ಬಾರಿಗೆ ರಾಕೆಟ್ ಉಡಾವಣೆ ಮಾಡುತ್ತಿರುವುದು ಮಹತ್ವದ ಸಂಗತಿಯಾಗಿದೆ. ಹೈದರಾಬಾದ್‍ನ ಸ್ಕೈರೂಟ್ ನವೋದ್ಯಮ ಸಂಸ್ಥೆಗೆ ಚೊಚ್ಚಲ ರಾಕೇಟ್ ಉಡಾವಣೆಯಲ್ಲಿ ಮಾಡಲಿದೆ.

ಉಪಗ್ರಹಗಳು, ರಾಕೆಟ್‍ಗಳು ಉಡಾವಣಾ ವಾಹಕಗಳು ಸೇರಿದಂತೆ ಅಂತರಿಕ್ಷ ಉಪಗ್ರಹಗಳ ನಿರ್ಮಾಣ ಮತ್ತು ಉಡ್ಡಯನದಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಇಸ್ರೋಗೆ ನೆರವಾಗಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ಕಂಡು ಬಂದಿದೆ.

ಹೈದರಾಬಾದ್‍ನ ಸ್ಕೈರೂಟ್ ಸಂಸ್ಥೆ ಈಗಾಗಲೇ ವಿಕ್ರಂ (ಇಸ್ರೋ ಸಂಸ್ಥಾಪಕ ವಿಕ್ರಂ ಸರಾಭಾಯಿ ಸ್ಮರಣಾರ್ಥ) ಹೆಸರಿನಲ್ಲಿ ರಾಕೆಟ್ ನಿರ್ಮಾಣದಲ್ಲಿ ತೊಡಗಿದ್ದು, ಇದಕ್ಕೆ ಅಗತ್ಯವಾದ ಇಂಜಿನ್‍ಗಳ ವಿವಿಧ ಹಂತಗಳ ಪರೀಕ್ಷೆಯಲ್ಲಿ ಕಾರ್ಯೋನ್ಮುಖವಾಗಿದೆ.

ಈ ಇಂಜಿನ್‍ಗಳ ಪ್ರಯೋಗ ಒಟ್ಟು ನಾಲ್ಕು ಹಂತಗಳಲ್ಲಿ ನಡೆಯಲಿದ್ದು, 2021ರ ಡಿಸೆಂಬರ್‍ನಲ್ಲಿ ರಾಕೆಟ್ ಉಡಾವಣೆಗೆ ಈಗಿನಿಂದಲೇ ತಯಾರಿ ನಡೆಸಿದೆ.

ಸ್ಕೈರೂಟ್ ಸಂಸ್ಥೆ ಒಟ್ಟು ಮೂರು ರಾಕೆಟ್‍ಗಳನ್ನು ಹಂತ ಹಂತವಾಗಿ ಉಡಾವಣೆ ಮಾಡುವ ಯೋಜನೆ ರೂಪಿಸಿದೆ. ಈ ರಾಕೆಟ್‍ಗಳಿಗೆ ವಿಕ್ರಂ-1, ವಿಕ್ರಂ-2 ಹಾಗೂ ವಿಕ್ರಂ-3 ಎಂದು ಹೆಸರಿಡಲಾಗಿದೆ.

ಈ ರಾಕೆಟ್‍ನಲ್ಲಿ ಒಟ್ಟು ಎರಡು ಅಥವಾ ಮೂರು ಇಂಜಿನ್ ಇರುತ್ತವೆ. ರಾಕೆಟ್ ಸಾಮಥ್ರ್ಯದ ಆಧಾರದ ಮೇಲೆ ಇಂಜಿನ್‍ಗಳ ಸಂಖ್ಯೆ ಅವಲಂಭಿತವಾಗಿರುತ್ತದೆ.

ಈ ಇಂಜಿನ್‍ಗಳಿಗೆ ಬೆಂಗಳೂರು ಮೂಲದ ಖ್ಯಾತ ವಿಜ್ಞಾನಿ ನೋಬೆಲ್ ಪ್ರಶಸ್ತಿ ಪುರಸ್ಕøತ ಡಾ.ಸಿ.ವಿ.ರಾಮನ್ ಅವರ ಹೆಸರಿಡಲಾಗಿದೆ.ಸಿ.ವಿ.ರಾಮನ್ ಇಂಜಿನ್ ಅಳವಡಿತ ವಿಕ್ರಂ ರಾಕೆಟ್‍ನನ್ನು ನಾವು ಮುಂದಿನ ವರ್ಷ ಡಿಸೆಂಬರ್ ವೇಳೆ ಉಡಾವಣೆ ಮಾಡಲು ಕಾರ್ಯೋನ್ಮುಖವಾಗಿದೆ.

ಇದಕ್ಕೆ ಇಸ್ರೋ ಸಂಸ್ಥೆ ಸಂಪೂರ್ಣ ಸಹಕಾರ, ನೆರವು ಹಾಗೂ ಮಾರ್ಗ ದರ್ಶನ ನೀಡುತ್ತಿದೆ ಎಂದು ಸ್ಕೈರೂಟ್ ಸಂಸ್ಥೆ ವಿಶೇಷ ಸಂದರ್ಶನದಲ್ಲಿ ತಿಳಿಸಿದೆ.

ಉಪಗ್ರಹಗಳು ಮತ್ತು ರಾಕೆಟ್‍ಗಳ ಉಡಾವಣೆ, ಅಂತರಿಕ್ಷ ಉಪಗ್ರಹಗಳ ತಯಾರಿಕೆಯಲ್ಲಿ ಖಾಸಗಿ ಸಂಸ್ಥೆ ಮತ್ತು ನವೋದ್ಯಮಗಳನ್ನು ಬಳಸಿಕೊಳ್ಳಲು ಕೇಂದ್ರ ಬಾಹ್ಯಾಕಾಶ ತಂತ್ರಜ್ಞಾನ ಸಚಿವಾಲಯ ಅನುಮೋದನೆ ನೀಡಿದ ಬೆನ್ನಲ್ಲೇ ದೇಶದ ಅನೇಕ ಸಂಸ್ಥೆಗಳು ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಸಾಧನ ಸಲಕರಣೆಗಳ ಅಭಿವೃದ್ಧಿಯಲ್ಲಿ ತೊಡಗಿವೆ.

ಈ ಪ್ರಕ್ರಿಯೆಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಸ್ಕೈರೂಟ್ ಈಗ ದೇಶದ ಪ್ರಥಮ ಖಾಸಗಿ ಸಹಭಾಗಿತ್ವದ ರಾಕೆಟ್ ಉಡಾವಣೆಗೆ ಸಜ್ಜಾಗಿರುವುದು ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಸಾಧನೆಯ ಮೈಲಿಗಲ್ಲಾಗಲಿದೆ.

Facebook Comments

Sri Raghav

Admin