ನಾಳೆಯಿಂದ ಭಾರತ-ವಿಂಡೀಸ್ ಚುಟುಕು ಸಮರ ಶುರು

ಈ ಸುದ್ದಿಯನ್ನು ಶೇರ್ ಮಾಡಿ

ಲಾರ್ಡಹಿಲ್,ಆ.2- ವಿಶ್ವಕಪ್‍ನ ಸೆಮಿಪೈನಲ್‍ನಲ್ಲಿ 18 ರನ್‍ಗಳಿಂದ ಸೋಲು ಕಂಡಿದ್ದ ವಿರಾಟ್ ಕೊಹ್ಲಿ ಪಡೆ ನಾಳೆಯಿಂದ ಇಲ್ಲಿ ನಡೆಯಲಿರುವ 20-20 ಸರಣಿಯಲ್ಲಿ ಅತಿಥೇಯ ವಿಂಡೀಸ್‍ನ ಸವಾಲನ್ನು ಎದುರಿಸಲಿದೆ.

ವಿಶ್ವಕಪ್‍ನ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡು ಹೊರಗುಳಿದಿದ್ದ ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ತಂಡವನ್ನು ಕೂಡಿಕೊಂಡಿರುವುದರಿಂದ ರೋಹಿತ್ ಶರ್ಮಾರೊಂದಿಗ್ ಧವನ್ ಇನ್ನಿಂಗ್ಸ್ ಆರಂಭಿಸು ತ್ತಾರೋ? ಅಥವಾ ಕನ್ನಡಿಗ ಕೆ.ಎಲ್.ರಾಹುಲ್ ಇನ್ನಿಂಗ್ಸ್ ಕಟ್ಟಲಿ ದ್ದಾರೋ ಎಂಬ ಕಾತರವಿದೆ.

ವಿಶ್ವಕಪ್‍ನಲ್ಲಿ 3ನೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಂಡೀಸ್ ಸರಣಿಯಲ್ಲಿ 4 ನೆ ಕ್ರಮಾಂಕದಲ್ಲಿ ಆಡುವುದರಿಂದ ಭಾರತ ತಂಡದ ಬ್ಯಾಟಿಂಗ್ ಬಲ ಹೆಚ್ಚಲಿದೆ. ಧೋನಿಯ ಸ್ಥಾನದಲ್ಲಿ ಆಡಲಿರುವ ರಿಷಭ್‍ಪಂತ್, ಮನೀಷ್ ಪಾಂಡೆ, ಶ್ರೇಯಾಸ್ ಐಯ್ಯರ್, ಕೃನಾಲ್ ಪಾಂಡೆ ರನ್ ಹೆಚ್ಚಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

ವೆಸ್ಟ್‍ಇಂಡೀಸ್ ಸರಣಿಯಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ನವ್‍ದೀಪ್‍ಸೈನಿ, ರಾಹುಲ್ ಚಹರ್, ದೀಪಕ್ ಚಹರ್ ಕಾತರದಿಂದಿದ್ದರೆ ಅನುಭವಿ ಬೌಲರ್‍ಗಳಾದ ಭುವನೇಶ್ವರ್‍ಕುಮಾರ್, ರವೀಂದ್ರಾಜಾಡೇಜಾ ಎದುರಾಳಿ ಬ್ಯಾಟ್ಸ್‍ಮನ್‍ಗಳ ರನ್ ದಾಹಕ್ಕೆ ಕಡಿವಾಣ ಹಾಕಬೇಕಾಗಿದೆ.

ವಿಶ್ವಕಪ್‍ನಲ್ಲಿ ಭಾರತ ತಂಡದ ವಿರುದ್ಧ ಸೋಲು ಕಂಡಿದ್ದರೂ ತನ್ನದೇ ನೆಲದಲ್ಲಿ ವಿರಾಟ್ ಪಡೆ ವಿರುದ್ಧ ಸರಣಿ ಜಯಿಸಲು ಕಾಲ್ರ್ಸ್ ಬರ್ತ್‍ವೇಟ್ ಪಡೆ ಸಜ್ಜಾಗಿದೆ. ವಿಶ್ವಕಪ್‍ನಲ್ಲಿ ಗಾಯಗೊಂಡು ಟೂರ್ನಿಯಿಂದ ಹೊರ ನಡೆದಿದ್ದ ಸ್ಪೋಟಕ ಆಟಗಾರ ಆ್ಯಂಡ್ರೂ ರಸಲ್, ತಂಡವನ್ನು ಕೂಡಿಕೊಂಡಿ ರುವ ಕಿರಾನ್ ಪೊಲಾರ್ಡ್, ಸ್ಪಿನ್ನರ್ ಸುನೀಲ್ ನರೇನ್ ವೆಸ್ಟ್‍ಇಂಡೀಸ್ ತಂಡಕ್ಕೆ ಶಕ್ತಿ ತುಂಬಲಿದ್ದಾರೆ.

ಯುವ ಹಾಗೂ ಅನುಭವಿ ಆಟಗಾರರನ್ನು ಒಳಗೊಂಡಿರುವ ವೆಸ್ಟ್‍ಇಂಡೀಸ್ ಮೊದಲ ಟ್ವೆಂಟಿ-20 ಪಂದ್ಯದಲ್ಲೇ ಬಲಿಷ್ಠ ಭಾರತ ವಿರುದ್ಧ ಗೆಲ್ಲುವ ಹುಮ್ಮಸ್ಸಿನಲ್ಲಿದ್ದರೆ, ವೆಸ್ಟ್‍ಇಂಡೀಸ್ ವಿರುದ್ಧದ ಜಯದ ಓಟವನ್ನು ಮುಂದುವರೆಸಲು ಕೊಹ್ಲಿ ಪಡೆ ಕಾತರದಿಂದಿದೆ.

Facebook Comments