ಲ್ಯಾಂಡ್ ಮಾಡಲಾಗದೆ ಆಕಾಶದಲ್ಲೇ ಹಾರಾಡಿದ ಇಂಡಿಗೋ ವಿಮಾನ..!

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ, ಆ.16- ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳಿದ ಇಂಡಿಗೋ ವಿಮಾನವನ್ನು ಹವಾಮಾನ ವೈಪರೀತ್ಯದಿಂದ ಲ್ಯಾಂಡ್ ಮಾಡಲಾಗದೆ ಆಕಾಶದಲ್ಲೇ ಕೆಲಕಾಲ ಹಾರಾಟ ನಡೆಸಬೇಕಾಯಿತು.

ಹುಬ್ಬಳ್ಳಿಯಲ್ಲಿ ಹವಾಮಾನ ವೈಪರೀತ್ಯದ ಕಾರಣ ಎಟಿಸಿ ಏರ್ ಟ್ರಾಫಿಕ್ ಕಂಟ್ರೋಲ್)ನಿಂದ ಲ್ಯಾಂಡಿಂಗ್‍ಗೆ ಅನುಮತಿ ದೊರೆಯಲಿಲ್ಲ. ಹಾಗಾಗಿ ಬೆಳಗ್ಗೆ ಕೆಲ ಕಾಲ ಲ್ಯಾಂಡಿಂಗ್‍ಗೆ ಅವಕಾಶ ನೀಡಲು ಸಾಧ್ಯವಾಗಿರಲಿಲ್ಲ.

ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದ್ ಸಹ ವಾತಾವರಣ ನೋಡಿಕೊಂಡು ಲ್ಯಾಂಡಿಂಗ್ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದ್ದರು. 6E7162 ವಿಮಾನ ಹುಬ್ಬಳ್ಳಿಗೆ ತೆರಳಿತ್ತು.

ಸಂಸದ ಅನಂತ್‍ಕುಮಾರ್ ಹೆಗಡೆ ಕೂಡ ಈ ವಿಮಾನದಲ್ಲಿದ್ದರು. ನಂತರ ಸುಮಾರು 11 ಗಂಟೆ ವೇಳೆಗೆ ಲ್ಯಾಂಡಿಂಗ್‍ಗೆ ಅವಕಾಶ ನೀಡಲಾಯಿತು.

ಹುಬ್ಬಳ್ಳಿಯಲ್ಲಿ ಮೋಡ ಕವಿದ ವಾತಾವರಣವಿದ್ದು, ಕಡಿಮೆ ಬೆಳಕು ಹಾಗೂ ಜಿಟಿ ಜಿಟಿ ಮಳೆಯಿಂದಾಗಿ ರನ್‍ವೇನಲ್ಲಿ ವಿಮಾನ ಇಳಿಯಲು ಅಡಚಣೆಯಾಗಬಹುದು ಎಂಬ ಹಿನ್ನೆಲೆಯಲ್ಲಿ ಲ್ಯಾಂಡಿಂಗ್‍ಗೆ ಅವಕಾಶ ನೀಡಿರಲಿಲ್ಲ ಎಂದು ತಿಳಿದುಬಂದಿದೆ.

ವಿಮಾನ ನಿಲ್ದಾಣದ ಅಕಾರಿಗಳು ಪರಿಶೀಲನೆ ನಡೆಸಿ ನಂತರ ವಿಮಾನ ಲ್ಯಾಂಡಿಂಗ್ ಆಗಲು ಸೂಚನೆ ನೀಡಿದ್ದರು.

Facebook Comments

Sri Raghav

Admin