ಮುಂಬೈನಿಂದ ಹುಬ್ಬಳ್ಳಿಗೆ ಬಂದ ಮೊದಲ ಇಂಡಿಗೊ

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ, ಸೆ.20- ಇಂಡಿಗೊ ಸಂಸ್ಥೆ ಮೊದಲ ಬಾರಿಗೆ ಮುಂಬೈ-ಹುಬ್ಬಳ್ಳಿ ನಡುವೆ ನೇರ ವಿಮಾನ ಸೌಲಭ್ಯ ಆರಂಭಿಸಿದ್ದು, ತಡರಾತ್ರಿ ಈ ವಿಮಾನ ಇಲ್ಲಿಗೆ ಬಂದಿತು. ಈ ಸಂಸ್ಥೆ ಈಗಾಗಲೇ ಅಹಮದಾಬಾದ್, ಕಣ್ಣೂರು, ಚೆನ್ನೈ, ಕೊಚ್ಚಿ ಮತ್ತು ಬೆಂಗಳೂರು ನಗರಗಳಿಗೆ ವಿಮಾನ ಸೌಲಭ್ಯ ಹೊಂದಿದ್ದು, ಮುಂಬೈಗೆ ಮೊದಲ ಬಾರಿಗೆ ನೇರ ವಿಮಾನ ಆರಂಭಿಸಿದೆ. ಇಲ್ಲಿಗೆ ಬಂದ ವಿಮಾನಕ್ಕೆ ವಾಟರ್ ಸೆಲ್ಯೂಟ್ ಗೌರವ ನೀಡಲಾಯಿತು.

ಪ್ರತಿ ಮಂಗಳವಾರ, ಗುರುವಾರ ಮತ್ತು ಶನಿವಾರ ಬೆಳಿಗ್ಗೆ 6.35ಕ್ಕೆ ಮುಂಬೈನಿಂದ ಹೊರಡುವ ವಿಮಾನ 8 ಗಂಟೆಗೆ ಹುಬ್ಬಳ್ಳಿ ತಲುಪಲಿದ್ದು, ಇಲ್ಲಿಂದ 8.40ಕ್ಕೆ ಹೊರಟು 10.5ಕ್ಕೆ ಮುಂಬೈ ತಲುಪಲಿದೆ. ಮುಂಬೈನಿಂದ ಬಂದ ವಿಮಾನದಲ್ಲಿ 57 ಮತ್ತು ಹುಬ್ಬಳ್ಳಿಯಿಂದ ಮುಂಬೈಗೆ ತೆರಳಿದ ವಿಮಾನದಲ್ಲಿ 63 ಪ್ರಯಾಣಿಕರಿದ್ದರು.

Facebook Comments