ಹಸಿದವರ ಪಾಲಿಗೆ ವರದಾನವಾದ ಇಂದಿರಾ ಕ್ಯಾಂಟಿನ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು.ಮೇ.13 ಕರೋನಾ ನಿಯಂತ್ರಣಕ್ಕಾಗಿ ವಿಧಿಸಿರುವ ಲಾಕ್ಡೌನ್ ನಿಂದ ಕೂಲಿಕಾರ್ಮಿಕರು.ಹಮಾಲಿಗಳು.ನಿರ್ಗತಿಕರು ತುತ್ತಿನ‌ ಚಿಲ ತುಂಬಿಸಿಕೊಳ್ಳು ಪರದಾಡುತ್ತಿದ್ದ ಸಮಯದಲ್ಲಿ ಇಂದಿರಾ ಕ್ಯಾಂಟಿನ್ ಅನ್ನ ಪೂರ್ಣೆಶ್ವರಿ ಯಾಗಿದೆ .
ಲಾಕ್ ಡೌನ್ ನಿಂದ ನಗರದಲ್ಲಿ ನೆಲೆಸಿರುವ ಕೂಲಿಕಾರ್ಮಿಕರಿಗೆ ಕೆಲಸ ವಿಲ್ಲ ಮನೆಯಲ್ಲಿ ಅಡುಗೆ ಮಾಡಲು ಅಗತ್ಯ ವಸ್ತುಗಳಿಲ್ಲ.ತರೋಕೆ ಬೆಲೆ ಜಾಸ್ತಿ ಹಣಕೂಡ ಇಲ್ಲ ಈಗಿರುವಾಗ ನಮ್ಮಗೆ ಹಸಿವು ನಿಗಿಸುತ್ತಿರುವುದು ಇಂದಿರಾ ಕ್ಯಾಂಟಿನ್.

ಇಲ್ಲಿ ಊಟ ಮಾಡಿ ಜಿವ ಉಳಿಸಿಕೊಳ್ಳುತ್ತಿದ್ದೆವೆ ಎಂದು ನಗರದ ಕೆಆರ್.ಮಾರುಕಟ್ಟೆಯ ಕೂಲಿ ಕಾರ್ಮಿಕರ ಮಾತಿದು. ಇದು ಕೆವ ಕೂಲಿ ಕಾರ್ಮಿಕರ ಹೊಟ್ಟೆ ಮಾತ್ರ ತುಂಬಿಸುತ್ತಿಲ್ಲ ಹಮಾಲಿಗಳು.ಭಿಕ್ಷುಕರು.ಸ್ಲಂನಿವಾಸಿಗಳು.ಬಡವರು.ಸೆರಿದಂತೆ ಸಾವಿರಾರು ಜನರ ಹೊಟ್ಟೆತುಂಬಿಸುತ್ತಿದೆ.

ಇಂದಿರಾ ಕ್ಯಾಂಟಿನ್ ನಲ್ಲಿ ಉಚಿತವಾಗಿ ಉತ್ತಮ ಗುಣಮಟ್ಟದ ಆಹಾರ ದೊರೆಯುತ್ತಿದ್ದು ಇಂತಹ ಸಂಕಷ್ಟ ಕಾಲದಲ್ಲಿ ನಮಗೆ ಆಸರೆಯಾಗಿದೆ.ಇದುಇಲ್ಲಾ ಅಂದಿದ್ದರೆ ನಾವು ಹಸಿವಿನಿಂದ ಸಾಯುವಂತಹ ಪರಿಸ್ಥಿತಿ ನಿರ್ಮಾಣ ವಾಗುತ್ತಿತ್ತೆನೊ.
ಮೊದಲೆ ಕೆಲಸ ವಿಲ್ಲದೆ ಮನೆಯಲ್ಲಿ ಖಾಲಿ ಕುಳಿತಿದ್ದೆವೆ ಇಲ್ಲಿಯ ವರೆಗೂ ಮನೆಯಲ್ಲಿದ್ದ ಪಡಿತರ ಖಾಯಿಯಾಗಿದೆ ಅಂಗಡಿಯಲ್ಲಿ ತರೋಣ ಅಂದ್ರೆ ಬೆಲೆ ಜಾಸ್ತಿ ಹಾಗಾಗಿ ನಾವು ಇಂದಿರಾ ಕ್ಯಾಂಟಿನ್ ಅವಲಂಬಿಸಿದ್ದೆವೆ ಎಂದು ಸುಮ್ಮನಹಳ್ಳಿಯ ಸ್ಥಳಿಯ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

ಇನ್ನು ಭಿಕ್ಷುಕರ ಪಾಡೆನು ನಗರದಲ್ಲಿ ಜನಸಂಚಾರವಿಲ್ಲ ದೆವಾಲಯಗಳ ಬಾಗಿಲುಗಳು ತೆರೆದಿಲ್ಲ ನಮಗ್ಯಾರು ಸಹಾಯ ಮಾಡೊರಿಲ್ಲ ಚಿಕ್ಕ ಚಿಕ್ಕ ಮಕ್ಕಳಿಗೆ ಆಹಾರ ವಿಲ್ಲದೆ ಪರಿತಪಿಸುತ್ತಿದ್ದಾಗ ಇಂದಿರಾ ಕ್ಯಾಂಟಿನ್ ವರವಾಗಿಬಂದಿದೆ.
ನಗರದ ಪ್ರಮುಖಕಡೆ ಇಂದು ಬೆಳಗ್ಗೆ ಕ್ಯಾಂಟಿನ್ ಗಳ ಮುಂಭಾಗ ಸರತಿ ಸಾಲಿನಲ್ಲಿ‌ ನಿಂತು ಜನರು ಆಹಾರವನ್ನು ಪಾರ್ಸಲ್ ತೆಗೆದು ಕೊಂಡು ಹೊಗುತ್ತಿದ್ದ ದೃಶ್ಯಗಳು ಕಂಡು ಬಂದವು.

ಕ್ಯಾಂಟಿನ್ ಗಳಲ್ಲಿ‌ಪಾರ್ಸಲ್ ವ್ಯವಸ್ಥೆ ಮಾಡಿರುವುದು ತುಂಬಾ ಒಳ್ಳೆಯದೆ ಇದರಿಂದ ಸಾಮಾಜಿಕ ಅಂತರ ಪಾಲಿಸಿದಂತಾಗುತ್ತದೆ ಸೊಂಕು ಕೂಡ ಹರಡುವ ಸಾಧ್ಯತೆ ಕಡಿಮೆ ಇರುತ್ತವೆ.

ಒಟ್ಟಿನಲ್ಲಿ ಇಂತ ಸಂಕಷ್ಟ ಕಾಲದಲ್ಲಿ ಕ್ಯಾಂಟಿನೂ ಇಲ್ಲ ದಿದ್ದರೆ ಕರೋನಾ ಜೊತೆಗೆ ಹಸಿವಿನಿಂದ ಸಾಯುವವರ ಸಂಖ್ಯೆಯೋ ಹೆಚ್ಚಾಗುತ್ತಿತ್ತೆನೊ ಸರ್ಕಾರ ಕ್ಯಾಂಟಿನ್ ಪುನಾರಂಭಿಸಿದ್ದು ಹಸಿದವರಿಗೆ ವರದಾನ ವಾಗಿದೆ.

Facebook Comments