ಇಂದಿರಾ ಕ್ಯಾಂಟಿನ್ ಊಟ ಮಾಡಲು ಪೌರಕಾರ್ಮಿಕರು ಹಿಂದೇಟು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.16- ನಗರದ ಶುಚಿತ್ವ ಕಾಪಾಡುತ್ತಿರುವ ಪೌರ ಕಾರ್ಮಿಕರಿಗೆ ನೀಡಲಾಗುತ್ತಿರುವ ಒಂದು ಹೊತ್ತಿನ ಇಂದಿರಾ ಕ್ಯಾಂಟೀನ್ ಉಚಿತ ಊಟ ಬೇಡವಂತೆ… ಬೆಳಿಗ್ಗೇನೆ ತಮ್ಮ ಕುಟುಂಬದ ಕೆಲಸ ಕಾರ್ಯ ಬಿಟ್ಟು ನಗರದ ಶುಚಿತ್ವಕ್ಕೆ ಬರುವ ಪೌರ ಕಾರ್ಮಿಕರು ಸರಿಯಾದ ಸಮಯಕ್ಕೆ ಊಟ, ತಿಂಡಿ ಮಾಡುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಂಡು 11 ಗಂಟೆಗೆ ಇಂದಿರಾ ಕ್ಯಾಂಟೀನ್‍ನಿಂದ ಉಚಿತ ಊಟ ನೀಡಲಾಗುತ್ತಿದೆ.

ಪೌರ ಕಾರ್ಮಿಕರಿಗೆ ನೀಡುತ್ತಿರುವ ಈ ಊಟದ ಬಗ್ಗೆ ಹಲವು ಅಪಸ್ವರ ಕೇಳಿಬಂದಿರುವ ಹಿನ್ನಲೆಯಲ್ಲಿ ಊಟವನ್ನು ರದ್ದು ಮಾಡಿ ಇದಕ್ಕೆ ಖರ್ಚಾಗುವ ಹಣವನ್ನು ಪೌರ ಕಾರ್ಮಿಕರಿಗೆ ನೇರವಾಗಿ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಹಾಗಾಗಿ ಮೇಯರ್  ಗಂಗಾಂಬಿಕೆ ಹಾಗೂ ಆಯುಕ್ತ ಮಂಜುನಾಥ್ ಪ್ರಸಾದ್ ಅವರನ್ನು ಕೆಲವು ಪೌರ ಕಾರ್ಮಿಕ ಮುಖಂಡರು ಭೇಟಿಯಾಗಿ ಇಂದಿರಾ ಕ್ಯಾಂಟೀನ್ ಊಟವನ್ನು ರದ್ದುಪಡಿಸಿ ಅದರ ಹಣವನ್ನು ಕೊಡುವಂತೆ ಮನವಿ ಮಾಡಿದ್ದಾರೆ. ಕೆಲವು ಪೌರ ಕಾರ್ಮಿಕ ಮುಖಂಡರು ಊಟ ಬೇಡ ಹಣ ಕೊಡಿಸಿ ಎಂದರೆ ಕೆಲವರು ಊಟವೇ ಇರಲಿ ಎಂದಿದ್ದಾರೆ.

ಹಾಗಾಗಿ ಎಲ್ಲಾ ಪೌರ ಕಾರ್ಮಿಕ ಮುಖಂಡರು ಒಂದೆಡೆ ಕುಳಿತು ಚರ್ಚಿಸಿ ಒಮ್ಮತದ ನಿರ್ಧಾರಕ್ಕೆ ಬಂದರೆ ಅವರ ಬೇಡಿಕೆ ಈಡೇರಿಸಲಾಗುವುದು ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.

Facebook Comments